ಆರೋಗ್ಯ

ಸೂರ್ಯಕಾಂತಿ ಬೀಜಗಳಿಂದ ಲಿವರ್ ಕ್ಯಾನ್ಸರ್ ಅಪಾಯ ಹೆಚ್ಚು: ಸಂಶೋಧನಾ ವರದಿ

Srinivas Rao BV
ವಾಷಿಂಗ್ ಟನ್: ಕೆಲವೊಂದು ಪ್ರಕಾರದ ಜೀವಿಗಳಿಂದ ಕಲುಶಿತಗೊಳ್ಳುವ ಸೂರ್ಯಕಾಂತಿ ಬೀಜ ಪ್ರಬಲ ಲಿವರ್ ಕ್ಯಾನ್ಸರ್ ಆಪಾಯಕ್ಕೆ ಕಾರಣವಾಗಲಿದೆ ಎಂದು ಹೊಸ ಅಧ್ಯಯನ  ವರದಿಯೊಂದು ತಿಳಿಸಿದೆ. 
ಮಿಚಿಗನ್ ಸ್ಟೇಟ್ ವಿಶ್ವವಿದ್ಯಾನಿಲಯ ಈ ಬಗ್ಗೆ ಸಂಶೋಧನೆ ನಡೆಸಿದ್ದು, ಆಸ್ಪರ್ಜಿಲ್ಲಸ್ ಮೋಲ್ಡ್ ಗಳಿಂದ ಉಂಟಾಗುವ ಎಫ್ಲಾಟಾಕ್ಸಿನ್ ಎಂಬ ಅಂಶದಿಂದ ಸಾಮಾನ್ಯವಾಗಿ ಜೋಳ, ನೆಲಗಡಲೆ, ಪಿಸ್ತಾ ಮತ್ತು ಬಾದಾಮಿಗಳಲ್ಲಿ ಸೋಂಕು ಉಂಟಾಗುತ್ತದೆ. ಅದೇ ಮಾದರಿಯಲ್ಲಿ ಸೂರ್ಯಕಾಂತಿ ಬೀಜ ಹಾಗೂ ಅದರ ಉತ್ಪನ್ನಗಳಲ್ಲಿಯೂ ಸಹ ಸೋಂಕು ಉಂಟಾಗಿ ಆ ಉತ್ಪನ್ನಗಳನ್ನು ಬಳಕೆ ಮಾಡುವುದು ಲಿವರ್ ಕ್ಯಾನ್ಸರ್ ನ್ನು ತಂದೊಡ್ಡುವ ಅಪಾಯ ಹೆಚ್ಚಾಗಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 
ತಾಂಜೇನಿಯಾದಲ್ಲಿ 2014-15 ರಲ್ಲಿ ಎಫ್ಲಾಟಾಕ್ಸಿನ್ ಮಟ್ಟಗಳನ್ನು ಪರೀಕ್ಷೆಗೊಳಪಡಿಸಿ ವಿಶ್ಲೇಷಿಸಿರುವ ವಿಜ್ಞಾನಿಗಳಿಗೆ ಶೇ.60 ರಷ್ಟು ಬೀಜ ಹಾಗೂ ಶೇ.80 ರಷ್ಟು ಕೇಕ್ ಮಾದರಿಗಳು ಎಫ್ಲಾಟಾಕ್ಸಿನ್ ನಿಂದ ಕಲುಶಿತಗೊಂಡಿರುವುದು ಕಂಡುಬಂದಿದೆ. ಪ್ರತಿ ಶತಕೋಟಿಗೆ 20 ಭಾಗಗಳಲ್ಲಿ ಶೇ.14 ರಷ್ಟು ಬೀಜಗಳು ಹಾಗೂ 17 ರಷ್ಟು ಕೇಕ್ ಗಳು ಕಲುಶಿತಗೊಂಡಿದ್ದು, ಇನ್ನೂ ಕೆಲವು ಮಾದರಿಗಳಲ್ಲಿ ಶತಕೋಟಿಗೆ ನೂರಾರು ಭಾಗಗಳು ಎಫ್ಲಾಟಾಕ್ಸಿನ್ ನಿಂದ ಕಲುಶಿತಗೊಂಡಿರುವುದು ಪತ್ತೆಯಾಗಿದೆ. 
ತಾಂಜೇನಿಯಾದಲ್ಲಿ ಸಂಶೋಧನೆ, ಅಧ್ಯಯನ ನಡೆಸಲಾಗಿದೆಯಾದರೂ, ಸಮಸ್ಯೆ ಕೇವಲ ತಾಂಜೇನಿಯಾಗೆ ಮಾತ್ರ ಸೀಮಿತವಾಗಿಲ್ಲ. ಎಫ್ಲಾಟಾಕ್ಸಿನ್ ನಿಂದ ವಿಶ್ವಾದ್ಯಂತ ವಾರ್ಷಿಕವಾಗಿ 25,000-155,000 ಸಾವು ಸಂಭವಿಸುತ್ತಿದ್ದು ಲಿವರ್ (ಯಕೃತ್)  ಗೆ ಪ್ರಮುಖ ಕಾರಣವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಬಗೆಗಿನ ಅಧ್ಯಯನ ವರದಿ ಪಿಎಲ್ಒಎಸ್ ಒನ್ ಜರ್ನಲ್ ನಲ್ಲಿ ಪ್ರಕಟವಾಗಿದೆ. 
SCROLL FOR NEXT