ಸಂಗ್ರಹ ಚಿತ್ರ 
ಆರೋಗ್ಯ

ಖಾಲಿ ಹೊಟ್ಟೆಯಲ್ಲಿ ಲಿಚ್ಚಿ ಹಣ್ಣು ತಿಂದರೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ

ಕಳೆದ ಎರಡು ದಶಕಗಳಿಂದ ಬಿಹಾರದ ಮಕ್ಕಳನ್ನು ಕಾಡುತ್ತಿದ್ದ ನಿಗೂಢ ಕಾಯಿಲೆಯ ರಹಸ್ಯವನ್ನು ಕೊನೆಗೂ ವಿಜ್ಞಾನಿಗಳು ಬಯಲು ಮಾಡಿದ್ದು, ಮಕ್ಕಳ ನಿಗೂಢ ಕಾಯಿಲೆಗೆ ಲಿಚ್ಚಿ ಹಣ್ಣು ಕಾರಣ ಎಂಬುದನ್ನು ಪತ್ತೆ ಮಾಡಿದ್ದಾರೆ.

ಪಾಟ್ನಾ: ಕಳೆದ ಎರಡು ದಶಕಗಳಿಂದ ಬಿಹಾರದ ಮಕ್ಕಳನ್ನು ಕಾಡುತ್ತಿದ್ದ ನಿಗೂಢ ಕಾಯಿಲೆಯ ರಹಸ್ಯವನ್ನು ಕೊನೆಗೂ ವಿಜ್ಞಾನಿಗಳು ಬಯಲು ಮಾಡಿದ್ದು, ಮಕ್ಕಳ ನಿಗೂಢ ಕಾಯಿಲೆಗೆ ಲಿಚ್ಚಿ ಹಣ್ಣು ಕಾರಣ ಎಂಬುದನ್ನು ಪತ್ತೆ  ಮಾಡಿದ್ದಾರೆ.

ಹೌದು..ಕಳೆದೊಂದು ತಿಂಗಳಿನಿಂದ ಭಾರಿ ಚರ್ಚೆಗೆ ಕಾರಣವಾಗಿದ್ದ ಬಿಹಾರದ ಮುಜಾಫರ್ ನಗರದ ಮಕ್ಕಳಲ್ಲಿನ ನಿಗೂಢ ಕಾಯಿಲೆ ಹಿಂದಿರುವ ಕಾರಣವನ್ನು ಬಯಲು ಮಾಡುವಲ್ಲಿ ವಿಜ್ಞಾನಿಗಳು ಕೊನೆಗೂ ಯಶಸ್ವಿಯಾಗಿದ್ದು,  ಮಕ್ಕಳಲ್ಲಿನ ನಿಗೂಢ ಕಾಯಿಲೆಗೆ ಮಕ್ಕಳು ತಿಂದ ಲಿಚ್ಚಿ ಹಣ್ಣೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಬಿಹಾರದ ಮುಜಾಫರ ನಗರದ ಕಾಯಿಲೆ ಪೀಡಿತ ವಿವಿಧ ಗ್ರಾಮಗಳಗಳಿಗೆ ಭೇಟಿ ನೀಡಿದ್ದ ವಿಜ್ಞಾನಿಗಳ ತಂಡ ಈ ವಿಚಾರವನ್ನು  ಬಯಲು ಮಾಡಿದೆ.

ಅಮೆರಿಕ ಮತ್ತು ಭಾರತೀಯ ನುರಿತ ವೈದ್ಯರನ್ನೊಳಗೊಂಡ ತಂಡದ ಸದಸ್ಯರು ಈ ಬಗ್ಗೆ ಜಂಟಿ ಸಂಶೋಧನೆ ಕೈಗೊಂಡು ಕಾಯಿಲೆ ಕುರಿತ ವರದಿ ತಯಾರಿಸಿದ್ದಾರೆ. ವರದಿಯಲ್ಲಿ ಮುಜಾಫರ ನಗರ ಸುತ್ತಮುತ್ತಲಿನ ಗ್ರಾಮಗಳ  ಮಕ್ಕಳಲ್ಲಿನ ಕಾಯಿಲೆಗೆ ಲಿಚ್ಚಿ ಹಣ್ಣೇ ಕಾರಣ ಎಂದೂ ವೈದ್ಯರು ತಿಳಿಸಿದ್ದಾರೆ.

ಖಾಲಿ ಹೊಟ್ಟೆಯಲ್ಲಿ ಲಿಚ್ಚಿ ತಿಂದರೆ ಸಾವು ಸಂಭವಿಸುತ್ತದೆಯೇ?
ಲಿಚ್ಚಿಯಲ್ಲಿರುವ ಅಮಿನೋ ಆ್ಯಸಿಡ್ ಎಂಬ ರಾಸಾಯನಿಕ ಅಂಶದಿಂದಾಗಿ ಮಕ್ಕಳಲ್ಲಿ ಸಿಡುಬು ಮತ್ತು ದಡಾರಾ ಕಾಯಿಲೆಯ ಲಕ್ಷಣಗಳು ಗೋಚರಿಸುವಂತೆ ಮಾಡುತ್ತಿವೆ. ಇದರಿಂದ ರಕ್ತದಲ್ಲಿನ ಗ್ಲೂಕೋಸ್ ಅಂಶ ಗಣನೀಯವಾಗಿ  ಇಳಿಯುವಂತೆ ಮಾಡಿ ಮಕ್ಕಳಲ್ಲಿ ಹೈಪೊಗ್ಲಿಸಿಮಿಯಾ ಎಂಬ ಸಮಸ್ಯೆಯನ್ನು ತಂದೊಡ್ಡುತ್ತದೆ. ಇದು ಹೆಚ್ಚಾದರೆ ಸಾವು ಕೂಡ ಸಂಭವಿಸಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ಹೈಪೊಗ್ಲಿಸಿಮಿಯಾ ಎಂಬ ಸಮಸ್ಯೆಗೆ  ತ್ತುತ್ತಾಗುವ ಮಕ್ಕಳಲ್ಲಿ ಶೇ.40 ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂಬ ಗಂಭೀರ ಅಂಶವನ್ನೂ ವೈದ್ಯರು ಬಯಲಿಗೆಳೆದಿದ್ದಾರೆ. ಈ ಲಿಚ್ಚಿ ಹಣ್ಣನ್ನು ಮಕ್ಕಳಾಗಲಿ ಅಥವಾ ದೊಡ್ಡವರಾಗಲಿ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಅಪರೂಪದ  ಪ್ರಕರಣಗಳಲ್ಲಿ ಸಾವು ಕೂಡ ಸಂಭವಿಸಬಹುದು ಎಂದೂ ವೈದ್ಯರು ತಮ್ಮ ವರದಿಯಲ್ಲಿ ಹೇಳಿದ್ದಾರೆ.

ಲಿಚ್ಚಿ ಹಣ್ಣನ್ನು ತಿನ್ನುವುದೇ ನೇರವಾಗಿ ಅನಾರೋಗ್ಯಕ್ಕೆ ಕಾರಣವಲ್ಲವಾದರೂ ಈ ಹಣ್ಣಿನ ಸೇವನೆ ಬಳಿಕ ಮಧ್ಯಾಹ್ನದ ಊಟ ಸೇವಿಸದೇ ಇರುವುದರಿಂದ ಸಮಸ್ಯೆಗಳು ಉಂಟಾಗುತ್ತವೆ. ಅತೀ ಹೆಚ್ಚು ಪ್ರಮಾಣದಲ್ಲಿ ಲಿಚ್ಚಿ  ಸೇವಿಸುವುದರಿಂದ ಹೊಟ್ಟೆ ತುಂಬಿದಂತಾಗಿ ಊಟ ಮಾಡುವುದನ್ನು ಬಿಡುತ್ತೇವೆ. ಹೀಗಾದಾಗ ದೇಹದಲ್ಲಿನ ಗ್ಲೂಕೋಸ್ ಅಂಶ ಗಣನೀಯವಾಗಿ ಇಳಿಕೆಯಾಗಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದೂ ವೈದ್ಯರು ತಿಳಿಸಿದ್ದಾರೆ.

ಪ್ರತೀ ವರ್ಷ ಮಾನ್ಸೂನ್ ಆಗಮಿಸುವ ವೇಳೆ ಅಂದರೆ ಜುಲೈ ತಿಂಗಳಿನಲ್ಲಿ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಮಕ್ಕಳಲ್ಲಿನ ಆನಾರೋಗ್ಯ ಸಮಸ್ಯೆ ಹೆಚ್ಚಾಗುತ್ತಿತ್ತು. ಮೆದುಳಿನ ಊತ, ಮೈ ಮೇಲಿನ ದೊಡ್ಡ ದೊಡ್ಡ ಗುಳ್ಳೆಗಳು ಉಂಟಾಗಿ  ಮಕ್ಕಳು ದಿಢೀರ್ ಸಾವಿಗೀಡಾಗುತ್ತಿದ್ದರು. ದಡಾರಾ-ಸಿಡುಬು ಕಾಯಿಲೆಯ ಅಂಶಗಳನ್ನು ಹೊಂದ್ದಿದ್ದರಿಂದ ಇದು ಹೊಸ ಮಾರಣಾಂತಿಕ ಸಂಕ್ರಾಮಿಕ ಕಾಯಿಲೆಯೇ ಇರಬೇಕು ಎಂದು ಎಣಿಸಲಾಗಿತ್ತು. ಆದರೆ ವಿಜ್ಞಾನಿಗಳು ಈ ಎಲ್ಲ  ಊಹಾ-ಪೋಹಗಳಿಗೆ ತೆರೆ ಎಳೆದಿದ್ದು, ವಿಚಿತ್ರ ಅನಾರೋಗ್ಯದ ಹಿಂದಿನ ಕಾರಣವನ್ನು ಬಯಲಿಗೆಳೆದಿದ್ದಾರೆ.

ಇಡೇ ದೇಶದಲ್ಲಿಯೇ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಲಿಚ್ಚಿ ಹಣ್ಣನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಜೂನ-ಜುಲೈ ತಿಂಗಳಲ್ಲಿ ಈ ಹಣ್ಣುಗಳು ವ್ಯಾಪಕವಾಗಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT