ವಾಷಿಂಗ್ಟನ್: ಗರ್ಭಾವಸ್ಥೆಯಲ್ಲಿ ಅಧಿಕ ಕೊಬ್ಬು ಆಹಾರ ಸೇವನೆಯಿಂದ ತಲೆಮಾರುಗಳಿಗೆ ಸ್ತನ ಕ್ಯಾನ್ಸರ್ ಬರುವ ಅಪಾಯ ಹೆಚ್ಚು ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.
ಇಲ್ಲಿ ಸಂಶೋಧಕರು ಗರ್ಭಿಣಿ ಇಲಿಯ ಮೇಲೆ ಸಂಶೋಧನೆ ನಡೆಸಿದ್ದಾರೆ. ಜೋಳದ ಎಣ್ಣೆಯಿಂದ ಮಾಡಿದ ಪದಾರ್ಥಗಳಿಂದ ಸೇವಿಸಿದ ಆಹಾರದಿಂದ ಹೆಣ್ಣು ಇಲಿಯ ಮೂರು ತಲೆಮಾರುಗಳಲ್ಲಿ ಸ್ತನ ಕ್ಯಾನ್ಸರ್ ಕಂಡುಬಂದಿದೆ ಎಂದು ಸ್ತನ ಕ್ಯಾನ್ಸರ್ ಸಂಶೋಧನೆ ಎಂಬ ಆನ್ ಲೈನ್ ಪತ್ರಿಕೆಯಲ್ಲಿ ಪ್ರಕಟಗೊಂಡ ಅಧ್ಯಯನದಲ್ಲಿ ಹೇಳಲಾಗಿದೆ.
ಮಹಿಳೆಯರಲ್ಲಿ ಕೊಬ್ಬಿನಂತಹ ಪರಿಸರಿಕ ಮತ್ತು ಜೀವನ ಶೈಲಿಯ ಅಂಶಗಳು ಸ್ತನ ಕ್ಯಾನ್ಸರ್ ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಹಿಳೆಯರಲ್ಲಿ ಮತ್ತು ಗರ್ಭಾವಸ್ಥೆ ಸಮಯದಲ್ಲಿ ಅಪಾಯದ ಸಾಧ್ಯತೆ ಹೆಚ್ಚಾಗುವಲ್ಲಿ ಕಾರಣವಾಗುವ ಜೈವಿಕ ಕಾರ್ಯವಿಧಾನಗಳನ್ನು ತಿಳಿಸಲು ಪ್ರಾಣಿಗಳ ಮಾದರಿಯನ್ನು ಸಂಶೋಧನೆಗೆ ಬಳಸಿ ಬಹಿರಂಗಪಡಿಸಲಾಗುತ್ತದೆ ಎಂದು ಜಾರ್ಜ್ ಟೌನ್ ವಿಶ್ವವಿದ್ಯಾಲಯದ ಆಂಕೊಲಾಜಿ ಪ್ರಾಧ್ಯಾಪಕ ಮತ್ತು ಲೇಖಕ ಲೀನಾ ಹಿಲಕಿವಿ-ಕ್ಲಾರ್ಕ್ ತಿಳಿಸಿದ್ದಾರೆ.
ಮೊದಲ ಮತ್ತು ಮೂರನೇ ತಲೆಮಾರಿನ ಹೆಣ್ಣು ಇಲಿಯಲ್ಲಿ ಅನುವಂಶಿಕ ಬದಲಾವಣೆಗಳು ಕಂಡುಬಂದಿದ್ದು, ಅವು ಗರ್ಭಾವಸ್ಥೆಯಲ್ಲಿ ಹೆಚ್ಚು ಕೊಬ್ಬಿನ ಪದಾರ್ಥ ತಿಂದವುಗಳಾಗಿವೆ. ಸ್ತನ ಕ್ಯಾನ್ಸರ್ ಗೆ ಅನೇಕ ಅನುವಂಶಿಕ ಧಾತುಗಳು ಕೂಡ ಕಾರಣವಾಗುತ್ತವೆ. ಅಲ್ಲದೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೆಚ್ಚಿದ ಪ್ರತಿರೋಧ, ಕಳಪೆ ಕ್ಯಾನ್ಸರ್ ರೋಗ ನಿರ್ಣಯ ಮತ್ತು ಕ್ಯಾನ್ಸರ್ ವಿರೋಧಿ ಪ್ರತಿರಕ್ಷಿತತೆಯನ್ನು ಕಡಿಮೆಗೊಳಿಸುತ್ತದೆ.
ಇಲ್ಲಿ ಸಂಶೋಧನೆಗೆ ಬಳಸಿದ ಹೆಣ್ಣು ಇಲಿಗೆ ಬಳಸಲಾದ ಕೊಬ್ಬಿನ ಪ್ರಮಾಣ ಮನುಷ್ಯ ದಿನನಿತ್ಯ ತಿನ್ನುವ ಆಹಾರದಲ್ಲಿರುವ ಕೊಬ್ಬಿನ ಪ್ರಮಾಣಕ್ಕೆ ಸಮನಾಗಿರುತ್ತದೆ. ಪ್ರಯೋಗಕ್ಕೆ ಒಳಗಾದ ಇಲಿ ಮತ್ತು ಸಮತೋಲಿತ ಇಲಿ ಸಮಾನ ಪ್ರಮಾಣದ ಕ್ಯಾಲೊರಿ ಬಳಸಿದ್ದು ಅವು ತೂಕದಲ್ಲಿ ಕೂಡ ಸಮನಾಗಿವೆ.
ಪ್ರಯೋಗಕ್ಕೆ ಒಳಪಟ್ಟ ಇಲಿ ಶೇಕಡಾ 40ರಷ್ಟು ಶಕ್ತಿಯನ್ನು ಕೊಬ್ಬಿನಿಂದ ಪಡೆದರೆ ನಿಯಂತ್ರಣದಲ್ಲಿದ್ದ ಇಲಿ ಶೇಕಡಾ 18ರಷ್ಟು ಶಕ್ತಿಯನ್ನು ಕೊಬ್ಬಿನಿಂದ ಪಡೆದುಕೊಂಡಿದೆ. ಮಾನವನ ವಿಶಿಷ್ಟ ಆಹಾರದಲ್ಲಿ ಶೇಕಡಾ 33ರಷ್ಟು ಕೊಬ್ಬು ಇರುತ್ತದೆ ಎಂದು ಅಧ್ಯಯನ ಹೇಳಿದೆ.
ಗರ್ಭಿಣಿ ಮಹಿಳೆಯರು ಸಾಮಾನ್ಯ ಮಹಿಳೆಯರಿಗಿಂತ ಹೆಚ್ಚು ಕೊಬ್ಬನ್ನು ಸೇವಿಸುತ್ತಾರೆ. ಅದು 9 ತಿಂಗಳ ಗರ್ಭಾವಸ್ಥೆಯಲ್ಲಿ ಮೊದಲ ಮತ್ತು ಮೂರನೇ ತ್ರೈಮಾಸಿಕದಲ್ಲಿ ಅಧಿಕವಾಗಿರುತ್ತದೆ ಎಂದು ಹಿಲಕಿವಿ-ಕ್ಲಾರ್ಕೆ ತಿಳಿಸಿದ್ದಾರೆ.
2012ರಲ್ಲಿ ಪತ್ತೆಯಾದ 1.7 ದಶಲಕ್ಷ ಹೊಸ ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇಕಡಾ 90ರಷ್ಟು ರೋಗಕ್ಕೆ ಕಾರಣ ಗೊತ್ತಾಗಿಲ್ಲ ಎನ್ನುತ್ತಾರೆ ಕ್ಲಾರ್ಕೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos