ಆರೋಗ್ಯ

ವಿಶ್ವ ರಕ್ತದಾನ ದಿನ 2017: ರಕ್ತದಾನ ಮಾಡುವಾಗ ಇವು ನಿಮ್ಮ ಗಮನದಲ್ಲಿರಲಿ

Srinivas Rao BV
ಜೂ.14 ನ್ನು ವಿಶ್ವ ರಕ್ತದಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಒಂದು ಬಾರಿ ರಕ್ತದಾನ ಮಾಡಿದರೆ ಅದು ಮೂವರ ಜೀವವನ್ನು ಉಳಿಸಬಹುದು ಎನ್ನುತ್ತಾರೆ ವೈದ್ಯರು. ಒಂದು ಯುನಿಟ್ ನ ರಕ್ತದಾನದಿಂದ ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು, ಪ್ಲೇಟ್ ಲೆಟ್ ಗಳು ಪ್ರತ್ಯೇಕವಾಗಿ ಲಭ್ಯವಾಗಲಿದ್ದು, ಹಲವು ಜನರ ಜೀವ ಉಳಿಸಲು ನೆರವಾಗಲಿದೆ. 
ಪ್ರತಿ ವರ್ಷದ ಜೂ.14 ನ್ನು ವಿಶ್ವ ರಕ್ತದಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದ್ದು, ರಕ್ತದಾನ ಮಾಡಬೇಕಾದರೆ ಗಮನದಲ್ಲಿಡಬೇಕಾದ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. 
ಸುರಕ್ಷತೆ 
  • ರಕ್ತದಾನ ಮಾಡಬೇಕಾದರೆ ಸ್ಥಳೀಯ ಕ್ಯಾಂಪ್ ಗಳ ಸುರಕ್ಷತೆ ಹಾಗೂ ನೈರ್ಮಲ್ಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಳ್ಳಿ 
  • ಹೊಸ ಸಿರಿಂಜ್ ಬಳಕೆ ಮಾಡಲಾಗುತ್ತಿದೆಯೇ ಹಾಗೂ ಬಾಟಲುಗಳ ಸ್ವಚ್ಛವಾಗಿದೆಯೇ ಎಂಬುದನ್ನು ಗಮನಿಸಿ    
  • ರಕ್ತದಾನದ ಪ್ರಕ್ರಿಯೆಯಲ್ಲಿ ಅಲ್ಲಿರುವ ವೈದ್ಯರು ಅಥವಾ ಸಿಬ್ಬಂದಿಗಳು ಕೈಗವಸು ಧರಿಸಿದ್ದಾರೆಯೇ ಎಂಬುದನ್ನು ಗಮನಿಸಿ 
  • ಶೀತ ಸೇರಿದಂತೆ ಸೋಂಕು ಸಮಸ್ಯೆ ಇರುವ ಯಾವುದೇ ವ್ಯಕ್ತಿಯೂ ರಕ್ತ ದಾನ ಮಾಡಬಾರದು 
  • ರಕ್ತದ ಗುಂಪನ್ನು ಸ್ಪಷ್ಟಪಡಿಸುವ ಡೋನರ್ ಕಾರ್ಡ್ ಇಟ್ಟುಕೊಂಡಿರಿ 
ಯಾರ್ಯಾರು ರಕ್ತದಾನ ಮಾಡಬಹುದು 
  • 18 ವರ್ಷದ ಮೇಲ್ಪಟ್ಟ ಎಲ್ಲರೂ ರಕ್ತದಾನ ಮಾಡಬಹುದು 
  • ಕನಿಷ್ಠ 45-50 ಕೆಜಿ ತೂಕ ಇರುವವವರು ರಕ್ತದಾನ ಮಾಡಬಹುದು 
  • ರಕ್ತ ದಾನ ಮಾಡುವುದಕ್ಕೂ ಮುನ್ನ ಮತ್ತು ಬರುವ ಡ್ರಗ್ಸ್ ಗಳನ್ನು ಸೇವಿಸಿರಬಾರದು
  • ಹೆಚ್ಚು ರಕ್ತದೊತ್ತಡ ಇಲ್ಲದ ಯಾವ ವ್ಯಕ್ತಿ ಬೇಕಾದರೂ ರಕ್ತದಾನ ಮಾಡಬಹುದು 
  • ಋತುಸ್ರಾವ ಚಕ್ರ, ಗರ್ಭಿಣಿಯಾಗಿರದವರು ರಕ್ತದಾನ ಮಾಡಬಹುದು 
ರಕ್ತದಾನ ಮಾಡಿದ ನಂತರ ಏನು ಮಾಡಬೇಕು?
  • ರಕ್ತದಾನ ಮಾಡಿದ ತಕ್ಷಣ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. 
  • ರಕ್ತದಾನ ಮಾಡಿದ ನಂತರ ಜ್ಯೂಸ್ ಅಥವಾ ಗ್ಲೂಕೋಸ್ ಕುಡಿಯಿರಿ 
  • ಧೂಮಪಾನ ಮಾಡಬೇಡಿ 
  • ರಕ್ತದಾನ ಮಾಡಿದ ತಕ್ಷಣವೇ ವೈದ್ಯರ ಸಲಹೆ ಪಡೆದು ಕಚೇರಿಗೆ ತೆರಳಬಹುದು.
SCROLL FOR NEXT