ಆರೋಗ್ಯ

ಆಹಾರದಲ್ಲಿ ಹೆಚ್ಚು ಉಪ್ಪು ಬಳಕೆಯಿಂದ ಪಾರ್ಶ್ವವಾಯು ಅಪಾಯ ಹೆಚ್ಚು

Srinivas Rao BV
ನ್ಯೂಯಾರ್ಕ್: ಹದಿಹರೆಯದಲ್ಲಿ ಅತಿ ಹೆಚ್ಚು ಉಪ್ಪು ಬಳಕೆಯಿಂದ ಪ್ರೌಢಾವಸ್ಥೆಯಲ್ಲಿ ಪಾರ್ಶ್ವವಾಯು ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೊಸ ಅಧ್ಯಯನ ವರದಿ ಹೇಳಿದೆ. 
ಅತಿ ಹೆಚ್ಚು ಉಪ್ಪು ಬಳಕೆ ಹೃದಯರಕ್ತನಾಳದ ಮೇಲೆ ಪರಿಣಾಮ ಬೀರಲಿದ್ದು, ಆರ್ಟರಿ (ಅಪಧಮನಿಗಳು) ಗಟ್ಟಿಯಾಗುವಂತೆ ಮಾಡುತ್ತದೆ. ಇದರಿಂದಾಗಿ ಹೃದಯಾಘಾತ ಮತ್ತು ಸ್ಟ್ರೋಕ್ ಅಪಾಯ ಎದುರಾಗುವ ಸಾಧ್ಯತೆಗಳಿವೆ ಎಂದು ಸಂಶೋಧಕರು ಹೇಳಿದ್ದಾರೆ. 
ಅತಿ ಹೆಚ್ಚು ಸೋಡಿಯಂ ಸೇವನೆಯಿಂದ ಲೋವರ್ ಬ್ರಾಂಕಿಯಲ್ ಆರ್ಟರಿ(ಕುಗ್ಗಿದ್ದ ಅಪಧಮನಿ) ಸಮಸ್ಯೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಹದಿಹರೆಯದವರು ಹೆಚ್ಚು ಉಪ್ಪು ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕೆಂದು ಸಂಶೋಧಕರು ಸಲಹೆ ನೀಡಿದ್ದಾರೆ. 
ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆದ 2017 ರ ಪೀಡಿಯಾಟ್ರಿಕ್ ಅಕಾಡೆಮಿಕ್ ಸೊಸೈಟಿ ಸಭೆಯಲ್ಲಿ ಸಂಶೋಧಕರು ಈ ಕುರಿತು ವಿಸ್ತೃತವಾಗಿ ವಿವರಿಸಿದ್ದಾರೆ. ಸುಮಾರು 775 ಜನರನ್ನು ಸಮೀಕ್ಷೆಗೊಳಪಡಿಸಲಾಗಿದೆ. 
SCROLL FOR NEXT