ಸಂಗ್ರಹ ಚಿತ್ರ 
ಆರೋಗ್ಯ

ನಿಮ್ಮ ಕಣ್ಣುಗಳು ನಿಮ್ಮ ಮಾನಸಿಕ ಆರೋಗ್ಯ ಹೇಗಿದೆ ಎಂಬುದನ್ನು ಹೇಳುತ್ತದೆ: ಅಧ್ಯಯನ

ಮನುಷ್ಯನ ದೇಹದಲ್ಲಿ ಕಣ್ಣುಗಳು ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಅಂಗವಾಗಿದೆ. ಹೀಗಾಗಿ ಕಣ್ಣುಗಳಿಗೆ ಹೆಚ್ಚಿನ ಆರೈಕೆ ಅಗತ್ಯವಾಗಿರುತ್ತದೆ. ಮನುಷ್ಯನ ಮಾನಸಿಕ ಆರೋಗ್ಯ ಹೇಗಿದೆ ಎಂಬುದನ್ನು ಆತನ ಕಣ್ಣುಗಳಿಂದಲೇ ತಿಳಿದುಕೊಳ್ಳಬಹುದು...

ನ್ಯೂಯಾರ್ಕ್: ಮನುಷ್ಯನ ದೇಹದಲ್ಲಿ ಕಣ್ಣುಗಳು ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಅಂಗವಾಗಿದೆ. ಹೀಗಾಗಿ ಕಣ್ಣುಗಳಿಗೆ ಹೆಚ್ಚಿನ ಆರೈಕೆ ಅಗತ್ಯವಾಗಿರುತ್ತದೆ. ಮನುಷ್ಯನ ಮಾನಸಿಕ ಆರೋಗ್ಯ ಹೇಗಿದೆ ಎಂಬುದನ್ನು ಆತನ ಕಣ್ಣುಗಳಿಂದಲೇ ತಿಳಿದುಕೊಳ್ಳಬಹುದು. 
ವೇಗವಾಗಿ ಬೆಳೆಯುತ್ತಿರುವ ಸ್ಪರ್ಧಾತ್ಮಕ ಈ ಪ್ರಪಂಚದಲ್ಲಿ ಕೆಲಸದ ಒತ್ತಡಗಳು ಜಟಿಲ ಸಮಸ್ಯೆಯಾಗಿ ಉಳಿದುಕೊಂಡಿದೆ. ಇದರಿಂದಾಗಿ ಮನುಷ್ಯರನ್ನು ಒತ್ತಡದ ಸಮಸ್ಯೆಗಳು ಕಾಡಲು ಆರಂಭಿಸಿವೆ. ಮಾನಸಿಕ ಒತ್ತಡದಿಂದ ಬಳಲುವ ವ್ಯಕ್ತಿ ಅದರಿಂದ ಹೊರ ಬರಲು ಸಾಧ್ಯವಾಗದೆ ಪ್ರತೀನಿತ್ಯ ಯಾತನೆ ಅನುಭವಿಸುತ್ತಿದ್ದಾರನೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಮಾನಸಿಕ ಒತ್ತಡಗಳನ್ನು ಹೊರಹಾಕಲು ಹಲವಾಗಿ ಚಿಕಿತ್ಸೆಗಳ ಮೊರೆ ಹೋಗುತ್ತಿದ್ದಾರೆ. 
ಆರೋಗ್ಯ ಸಮಸ್ಯೆಗಳನ್ನು ಕಂಡು ಹಿಡಿಯಲು ಹಲವಾರು ಪರೀಕ್ಷೆ ಹಾಗೂ ವಿಧಾನಗಳಿವೆ. ಆದರೆ, ಮಾನಸಿಕ ಆರೋಗ್ಯ ಹೇಗಿದೆ ಎಂಬುದನ್ನು ಕಂಡು ಹಿಡಿಯುವುದು ಯಾರಿಗೂ ಸಾಧ್ಯವಾಗುವುದಿಲ್ಲ. ಮನುಷ್ಯನದ ಮಾನಸಿಕ ಆರೋಗ್ಯದ ಮಟ್ಟವನ್ನು ಆತನ ಕಣ್ಣುಗಳಿಂದಲೇ ತಿಳಿದುಕೊಳ್ಳಬಹುದು ಎಂಬುದನ್ನು ಅಧ್ಯಯನವೊಂದು ಹೇಳಿದೆ. 
ಅಮೆರಿಕಾದ ಮಿಸ್ಸೋರಿ-ಕೊಲಂಬಿಯಾ ವಿಶ್ವವಿದ್ಯಾಲಯ ಸಂಶೋಧನೆಯೊಂದನ್ನು ನಡೆಸಿದ್ದು, ವರದಿಯಲ್ಲಿ ವ್ಯಕ್ತಿಯ ಕಣ್ಣುಗಳಿಂದ ಆತನ ಮಾನಸಿಕ ಆರೋಗ್ಯ ಹೇಗಿದೆ ಎಂಬುದನ್ನು ಕಂಡು ಹಿಡಿಯಬಹುದು ಎಂದು ಹೇಳಿದೆ. 
ವ್ಯಕ್ತಿಯ ಕಣ್ಣುಗಳು ಬಹುಕಾರ್ಯಗಳಿಗೆ ಪರಿಹಾರವನ್ನು ನೀಡುತ್ತವೆ. ಅದರಲ್ಲಿ ಒತ್ತಡ ನಿಭಾಯಿಸುವುದೂ ಕೂಡ ಒಂದು ಮಾರ್ಗವಾಗಿದೆ ಎಂದು ತಿಳಿಸಿದೆ. 
ಆರೋಗ್ಯ ಸಮಸ್ಯೆ ಎದುರಾದಾಗ ವೈದ್ಯರ ಬಳಿ ಹೋದ ಸಂದರ್ಭದಲ್ಲಿ ವೈದ್ಯರು ನಾಡಿ ಮಿಡಿತ ನೋಡಿ ನಂತರ ನೋಡುವುದು ಕಣ್ಣುಗಳೇ. ಕಣ್ಣಿನ ಪಾಪೆಯ ಗಾಂತ್ರದಿಂದ ಮತ್ತೊಬ್ಬರ ಮಾಸಿಕ ಸ್ಥಿತಿಯನ್ನು ಅಳೆಯಬಹುದು ಎಂದು ಸಂಶೋಧಕ ಜಂಪ್ ಹ್ಯೂಪ್ ಕಿಮ್ ಅವರು ಹೇಳಿದ್ದಾರೆ. 
ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳನ್ನು ಸಂಶೋಧನಾ ತಂಡ ಮಾನಸಿಕ ಒತ್ತಡವನ್ನು ಅಳೆಯಲು ಅಧ್ಯಯನಕ್ಕೆ ಬಳಸಿಕೊಂಡಿದ್ದಾರೆ. ಕೆಲಸದ ಒತ್ತಡದ ಆಧಾರದ ಮೇಲೆ ಉದ್ಯೋಗಿಗಳ ಕಣ್ಣಿನ ಪಾಪೆಯನ್ನು ಅಧ್ಯಯನ ನಡೆಸಿ ಫಲಿತಾಂಶವನ್ನು ತಾಳೆ ನೋಡಿದ್ದಾರೆ. 
ಕಣ್ಣಿನ ಟ್ರ್ಯಾಕಿಂಗ್ ತಂತ್ರಜ್ಞಾನ ಹಾಗೂ ಅದರ ಚಲನೆಯ ಮೂಲಕ ಅನಿಲ ಸಂಸ್ಕರಣಾಗಾರ ಸಸ್ಯ ನಿಯಂತ್ರಣ ಕೊಠಡಿ ಹಾಗೂ ಕೃತಕ ಆಯಿಲ್'ನ್ನು ಬಳಸಿಕೊಂಡು ಉದ್ಯೋಗಿಗಳನ್ನುನ ಅಧ್ಯಯನ ನಡೆಸಿದ್ದಾರೆ. 
ಈ ವೇಳೆ ಉದ್ಯೋಗಿಗಘಲ್ಲಿ ಕೆಲವು ಅನಿರೀಕ್ಷಿತ ಬದಲಾವಣೆಗಳು ಕಂಡು ಬಂದಿದೆ. ತಾವು ಮಾಡುವ ಕೆಲಸದಲ್ಲಿ ಹೆಚ್ಚು ಸಂಕೀರ್ಣತೆ ಇದ್ದರೆ, ವ್ಯಕ್ತಿಗ ಕಣ್ಣಿನ ಚಲನೆಯಲ್ಲಿ ಗಂಭೀರತವಾದ ಬದಲಾವಣೆಗಳಾಗುತ್ತವೆ. ಇದರಿಂದ ಆತನ ಮಾನಸಿಕ ಸ್ಥಿತಿಯನ್ನು ಕಂಡುಕೊಳ್ಳಬಹುದು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT