ಆರೋಗ್ಯ

ಚಳಿಗಾಲದಲ್ಲಿ ಒಣಗಿದ ತುಟಿಗಳ ಪೋಷಣೆಗೆ ಕೆಲವು ಸಲಹೆಗಳು!

Manjula VN
ಚಳಿಗಾಲ ಬಂತೆಂದರೆ ಸೌಂದರ್ಯ ಪ್ರಿಯರು ತಲೆನೋವು ಶುರುವಾಯಿತು ಎಂದೇ ಭಾವಿಸುತ್ತಾರೆ. ಚಳಿಗಾಲದಲ್ಲಿ  ಚರ್ಮ ಒಣಗುವುದು, ತುಟಿ ಒಣಗುವುದು ಸಾಮಾನ್ಯ. ಚಳಿಗಾಲದಲ್ಲಿ ಒಡೆಯುವ ತುಟಿಗಳನ್ನು ರಕ್ಷಣೆ ಮಾಡುವುದು ಅತ್ಯಂತ ಮುಖ್ಯವಾಗಿರುತ್ತದೆ. ಇದನ್ನು ನಿರ್ಲಕ್ಷ್ಯಿಸಿದರೆ, ತುಟಿಗಳ ಅಂದ ಹಾಳಾಗುತ್ತದೆ. ಕೆಲವೊಮ್ಮೆ ಒಡೆದ ತುಟಿಗಳಿಂದ ರಕ್ತ ಬರುವುದೂ ಉಂಟು, ಈ ವೇಳೆ ಸಾಕಷ್ಟು ಉರಿ, ನೋವು ಕಾಣಿಸಿಕೊಳ್ಳುತ್ತದೆ. 
ತುಟಿಗಳು ಒಣಗಿದಾಗ ಸಾಮಾನ್ಯವಾಗಿ ನಾಲಿಗೆಯಿಂದ ಸವರಿ ಎಂಜಲು ಮಾಡುತ್ತೇವೆ. ಆದರೆ, ಇದರಿಂದ ತುಟಿಗಳು ಮತ್ತಷ್ಟು ಒಣಗುತ್ತವೆ. ಒಣಗಿದ ತುಟಿಗಳು ಮುಖದ ಅಂದವನ್ನು ಹಾಳು ಮಾಡುತ್ತವೆ. ಒಣಗಿದ ತುಟಿಗಳಿಂದ ಮುಕ್ತಿ ಪಡೆಯಲು ಕೆಲ ಪರಿಹಾರಗಳು ಇಲ್ಲಿವೆ...
ಒಣಗಿದ ತುಟಿಗಳಿಂದ ಮುಕ್ತಿ ಪಡೆಯಲು ಹರಳೆಣ್ಣೆ, ತೆಂಗಿನಕಾಯಿ ಎಣ್ಣೆ, ವೀಟ್ ಜೆರ್ಮ್ ಆಯಿಲ್, ಕ್ಯಾರೆಟ್ ಬೀಜದ ಎಣ್ಣೆಯನ್ನು ಬಳಕೆ ಮಾಡಬಹುದು. 
ಹರಳೆಣ್ಣೆ: ಹರಳೆಣ್ಣೆಯನ್ನು ಸಾಮಾನ್ಯವಾಗಿ ಚರ್ಮದ ಉರಿ ಹಾಗೂ ಊತಕ್ಕೆ ಬಳಕೆ ಮಾಡಲಾಗುತ್ತದೆ. ಒಡೆದ ಚರ್ಮ ಅಥವಾ ತುಟಿಗಳಿಗೆ ಇದನ್ನು ಹಚ್ಚಿದಾಗ ಒಡೆದ ಚರ್ಮ ಕೂಡುವುದಕ್ಕೆ ಇದು ಸಹಾಯ ಮಾಡುತ್ತದೆ. 
ಕ್ಯಾರೆಟ್ ಬೀಜದ ಎಣ್ಣೆ: ಕ್ಯಾರೆಟ್ ಬೀಜದ ಎಣ್ಮೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಈ ಎಣ್ಣೆಯನ್ನು ರೋಗ ನಿರೋಧಕವಾಗಿಯೂ ಬಳಕೆ ಮಾಡಲಾಗುತ್ತದೆ. ಚರ್ಮ ಹಾಳಾಗಿರುವುದನ್ನು ರಕ್ಷಣೆ ಮಾಡುತ್ತದೆ. 
ವೀಟ್ ಜರ್ಮ್ ಆಯಿಲ್: ವೀಟ್ ಜರ್ಮ್ ಆಯಿಲ್ ಅತ್ಯುತ್ತಮ ಎಣ್ಣೆಯಾಗಿದ್ದು, ಅತೀ ಹೆಚ್ಚಿನ ಕೊಬ್ಬಿನಾಮ್ಲಗಳನ್ನು ಹೊಂದಿದೆ. ಇದು ನೈಸರ್ಗಿಕ ವಿಟಮಿನ್ ಇ ಗುಣವನ್ನು ಹೊಂದಿದ್ದು, ಚರ್ಮವನ್ನು ಪೋಷಣೆ ಮಾಡುತ್ತದೆ. ತುಟಿಗಳು ಮೃದುವಾಗಿರುವಂತೆ ನೋಡಿಕೊಳ್ಳುತ್ತದೆ. 
ಕೊಬ್ಬರಿ ಎಣ್ಣೆ: ತುಟಿಗಳು ಮೃದುವಾಗಿರಲು ಕೊಬ್ಬರಿ ಎಣ್ಣೆ ಅತ್ಯುತ್ತಮವಾದ ಎಣ್ಣೆಯಾಗಿದೆ. ಕೊಬ್ಬರಿಎಣ್ಣೆ ಪರಿಣಾಮಕಾರಿಯಾದ ಮಾಯಿಶ್ಚರೈಸರ್ ಕೂಡ ಹೌಡು. ಒಣಗಿದ ಚರ್ಮದವರು ಚರ್ಮ ಮೃದುವಾಗಿಸಲು ಇದನ್ನು ಬಳಕೆ ಮಾಡಬಹುದು. 
SCROLL FOR NEXT