ಸಾಂದರ್ಭಿತಕ ಚಿತ್ರ 
ಆರೋಗ್ಯ

ಕೊಬ್ಬರಿ ಎಣ್ಣೆ ಬಳಕೆ: ಅದರಿಂದಾಗುವ ಉತ್ತಮ ಪರಿಣಾಮಗಳು

ತೆಂಗಿನ ಕಾಯಿ ಎಣ್ಣೆಯ ಉಪಯೋಗದಿಂದ ಹತ್ತು ಹಲವು ಲಾಭಗಳಿವೆ. ವಿವಿಧ ಕಾರಣಗಳಿಗಾಗಿ ಭಾರತದಲ್ಲಿ ತಲೆ ಮಾರುಗಳಿಂದ ಬಳಸಲಾಗುತ್ತಿದೆ....

ನವದೆಹಲಿ: ತೆಂಗಿನ ಕಾಯಿ ಎಣ್ಣೆಯ ಉಪಯೋಗದಿಂದ ಹತ್ತು ಹಲವು ಲಾಭಗಳಿವೆ. ವಿವಿಧ ಕಾರಣಗಳಿಗಾಗಿ ಭಾರತದಲ್ಲಿ ತಲೆ ಮಾರುಗಳಿಂದ ಬಳಸಲಾಗುತ್ತಿದೆ.
ಆಯುರ್ವೇದ ತಜ್ಞೆ ಡಾ. ಪ್ರಿಯಾಂಕಾ ಸಂಪತ್  ತೆಂಗಿನ ಕಾಯಿ ಎಣ್ಣೆಯ ಉಪಯೋಗಗಳ ಬಗ್ಗೆ ತಿಳಿಸಿದ್ದಾರೆ.
ನೈಸರ್ಗಿಕ ಆರ್ದ್ರತೆ: ತೆಂಗಿನಕಾಯಿ ಎಣ್ಣೆ ಬಳಸುವುದರರಿಂದ ದೇಹದಲ್ಲಿನ ಸತ್ತ ಚರ್ಮವನ್ನು ತೆಗೆದು ಹಾಕಿ ಚರ್ಮ ಹೊಳೆಯುವಂತೆ ಮಾಡುತ್ತದೆ. ಸೋರಿಯಾಸಿಸ್, ಡರ್ಮಟಿಟಿಸ್ ಮತ್ತು ಎಕ್ಸಿಮಾ, ಸುಟ್ಟ ಚರ್ಮಕ್ಕೆ ಉತ್ತಮವಾಗಿದೆ, ತೆಂಗಿನಕಾಯಿ ಎಣ್ಣೆ ಯಿಂದ ಸ್ಟ್ರೆಚ್ ಮಾರ್ಕ್ ಗಳು ಕೂಡ ಮಾಯವಾಗುತ್ತವೆ. ದಿನ ನಿತ್ಯ ಒಂದು ಚಿಟಿಕೆ ಎಣ್ಣೆಯನ್ನು ತುಟಿಗಳಿಗೆ ಹಚ್ಚುತ್ತಿದರೆ ತುಟಿ ಒಡೆಯುವ ಸಮಸ್ಯೆಯಿಂದ ದೂರ ಉಳಿಯಬಹುದಾಗಿದೆ,
ಕೂದಲು ಬೆಳೆಯುವುದಕ್ಕೆ ತೆಂಗಿನ ಎಣ್ಣೆ ಅತ್ಯಂತ ಸಹಕಾರಿಯಾಗಿದೆ, ತೆಂಗಿನ ಎಣ್ಣೆ ನಿಯಮಿತವಾಗಿ ಹಚ್ಚಿ ಮಸಾಜ್ ಮಾಡುವುದರಿಂದ ದೇಹದ ರಕ್ತ ಚಲಸನೆ ಹೆಚ್ಚಿಸುವುದರ ಜೊತೆಗೆ, ಕಳೆದುಹೋದ ಪೋಷಕಾಂಶಗಳನ್ನು ನೀಡುತ್ತದೆ, ಪ್ರತಿದಿವನ ಎಣ್ಣೆ ಹಚ್ಚಿ ತಲೆಗೆ ಮಸಾಜ್ ಮಾಡುವುದರಿಂದ ಕೂದಲು ಉದರುವುದನ್ನು ನಿಯಂತ್ರಿಸುವುದರ ಜೊತೆಗೆ,  ತಲೆಹೊಟ್ಟು ನಿವಾರಿಸುತ್ತದೆ.
ಬಾಯಿಯ ಆರೋಗ್ಯಕ್ಕೂ ಕೂಡ ಕೊಬ್ಬರಿ ಎಣ್ಣೆ ಉತ್ತಮ ಆಯುರ್ವೇದ ಔಷಧಿಯಾಗಿದೆ. ಬಾಯಿಗೆ ಎಣ್ಣೆ ಹಚ್ಚಿ ನಂತರ ಅದನ್ನು ಹೊರಹಾಕುವುದರಿಂದ ವಸಡಿನ ಸಮಸ್ಯೆ ತಪ್ಪಿಸಬಹುದು, 
ಆಯುರ್ವೇದದಲ್ಲಿ ಪಿತ್ತ ವಿರುದ್ಧಿ ಎಂದು ಕೊಬ್ಬರಿ ಎಣ್ಣೆ ಬಳಸಲಾಗುತ್ತದೆ, ಇದರಿಂದ ಅರ್ಥಿರಿಟಿಸ್ ಸಮಸ್ಯೆ ಹೋಗಲಾಡಿಸಬಹುದು ಎಂದು ಹಿಂದೂಜಾ ಹೆಲ್ತ್ ಕೇರ್ ಡಯಟಿಶಿನ್  ಇಂದ್ರಯಾಣಿ ಪವಾರ್ ತಿಳಿಸಿದ್ದಾರೆ.
ಇನ್ನೂ ತೆಂಗಿನ ಕಾಯಿ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ, ಜೊತೆಗೆ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ, 
ಕೊಬ್ಬರಿ ಎಣ್ಣೆಯನ್ನು ಹಲವು ಗಿಡ ಮೂಲಿಕ ಔಷಧಗಳಿಗಾಗಿಯೂ ಬಳಸಲಾಗುತ್ತದೆ. ಕೊಬ್ಬರಿಎಣ್ಣೆಯನ್ನು ಆಂತರಿಕವಾಗಿ ಹಾಗೂ ಬಾಹ್ಯವಾಗಿ ಯಾವುದೇ ತೊಂದರೆಯಿಲ್ಲದೇ ಬಳಸಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT