ಆರೋಗ್ಯ

ದೇಹದಲ್ಲಿರುವ ಬೊಜ್ಜು ಅಸ್ತಮಾದಂತಹ ಕಾಯಿಲೆಗೆ ದೂಡುವುದೇಕೆ?

Manjula VN
ದೇಹದ ಬೊಜ್ಜಿನ ಪ್ರಮಾಣ ಹೆಚ್ಚಾದಷ್ಟು ಆ ಮನುಷ್ಯನ ದೇಹದಲ್ಲಿ ರೋಗಗಳು ಮನೆ ಮಾಡುವುದು. ಅತಿಯಾದ ತೂಕ ಹೊಂದಿರುವ ವ್ಯಕ್ತಿಯು ಅಸ್ತಮಾ ರೋಗಕ್ಕೆ ಬೇಗ ಒಳಗಾಗುತ್ತಾರೆ. 
ಸ್ಥೂಲಕಾಯದಿಂದಿರುವ ಜನರು ತೀವ್ರ ಅಸ್ತಮಾದಿಂದ ಬಳಲುವಂತರ ಅಪಾಯಕ್ಕೊಳಗಾಗುತ್ತಾರೆ. ಹೆಚ್ಚು ಬೊಜ್ಜು ಹೊಂದಿರುವವರಲ್ಲಿ ಈ ರೋಗವನ್ನು ನಿಯಂತ್ರಿಸುವುದು ಕಠಿಣವಾಗಿರುತ್ತದೆ ಎಂದು ವಿಜ್ಞಾನಿಗಳ ತಂಡವೊಂದು ಹೇಳಿದೆ. 
ಅಸ್ತಮಾಗೆ ಕಾರಣ ಕುರಿತಂತೆ ಅಮೆರಿಕಾದ ಜರ್ನಲ್ ಆಪ್ ಫಿಸಿಯೋಲಜಿ, ಲಂಗ್ ಸೆಲ್ಯೂಲರ್ ಮತ್ತು ಮೊಲೆಕ್ಯುಲರ್ ಫಿಸಿಯೋಲಜಿ ಸಂಶೋಧನೆಯನ್ನು ನಡೆಸಿದ್ದು, ಸಂಶೋಧನೆಯಲ್ಲಿ ಬೊಜ್ಜು ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಯಲ್ಲಿ ಅಸ್ತಮಾ ರೋಗ ಅತೀ ಹೆಚ್ಚು ಕಂಡು ಬರುತ್ತದೆ ಎಂದು ತಿಳಿಸಿದೆ. 
ಉಸಿರಾಟದ ತೊಂದರೆ, ಉಬ್ಬಸ ಇವು ಅಸ್ತಮಾ ಮತ್ತು ಅಲರ್ಜಿಕ್ ಸಮಸ್ಯೆಗಳ ಲಕ್ಷಣಗಳಾಗಿರುತ್ತವೆ. ಇದಕ್ಕೆ ಕಾರಣ ಶರೀರದಲ್ಲಿರುವ ರೋಗ ನಿರೋಧಕ ಶಕ್ತಿಯು ಕುಂಠಿತವಾಗುವುದು. ದೇಹದಲ್ಲಿ ರೋಗ ನಿರೋಧದ ಶಕ್ತಿ ವಿರುದ್ಧ ಹೋರಾಡುವಾಗ ಹಿಸ್ಟಮಿನ್ ಎಂಬ ರಾಸಾಯನಿಕ ಬಿಡುಗಡೆಯಾಗುತ್ತದೆ. ಈ ಸಂದರ್ಭದಲ್ಲಿ ಮೂರು, ಕಣ್ಣು, ಕಿವಿ, ಚರ್ಮ, ಗಂಟಲಿನ ಮೇಲೆ ಗಂಭೀರ ಪ್ರಭಾವ ಬೀರುತ್ತದೆ. 
ಅಲರ್ಜಿಕ್ ರೈನೈಟಿಸ್ ಸೀಸನಲ್ ಎಂಬುದು ಕೆಲವು ಹವಾಮಾನಗಳಲ್ಲಿ ಮಾತ್ರ ಕಾಣಿಸುತ್ತದೆ. ಧೂಳು, ಪ್ರಾಣಿಗಳ ಕೂದಲು, ಜಿರಳೆ, ಕೆಲವು ವಿಧದ ಗಿಡಗಳು ಹಾಗೂ ಹೂವಿನ ಕುಸುಮಗಳಿಂದ ಅಲರ್ಜಿಕ್ ರೈನೈಟಿಸ್ ಬರುತ್ತದೆ. ಅಲರ್ಜಿಯ ಸಮಸ್ಯೆ ಉಂಟಾದಾಗ ಶ್ವಾಸ ನಾಳಿಕೆಗಳ ಜೀರ್ಣ ಊತದಿಂದ ಶ್ವಾಸನಾಳವು ಬಿಗಿದುಕೊಳ್ಳುವುದು. ಇದರಿಂದ ಉಸಿರಾಡಲು ಸಮಸ್ಯೆಯಾಗುತ್ತದೆ. 
ಅಸ್ತಮಾ ರೋಗಿಗಳಲ್ಲಿ ಶ್ವಾಸನಾಳಗಲು ಅತ್ಯಂತ ಸೂಕ್ಷ್ಮವಾಗಿರುತ್ತದೆ. ಇದನ್ನು ಬ್ರೋಂಕಿಯಲ್ ಹೈಪರ್ ರಿಯಾಕ್ಟಿವಿಟಿ (ಬಿಹೆಚ್ಆರ್) ಎಂದು ಕರೆಯಲಾಗುತ್ತದೆ. ಇದು ಒಬ್ಬೊಬರಲ್ಲಿಯೂ ವ್ಯತ್ಯಾಸವಿರುತ್ತದೆ. ಈ ಬಿಹೆಚ್ಆರ್ ಅಸ್ತಮಾ ಹಾಗೂ ಅಲರ್ಜಿಕ್ ರೋಗಿಗಳಲ್ಲಿ ಬೇರೆಯವರಿಗಿಂತಲೂ ಹೆಚ್ಚಾಗಿರುತ್ತದೆ. ಆದ್ದರಿಂದ ಈ ರೀತಿಯ ಅಲರ್ಜಿಕ್ ರೋಗಿಗಳಲ್ಲಿ ತಂಬಾಕಿನ ಹೊಗೆ ಅಥವಾ ಶರೀರದ ಶ್ರಮದಿಂದ ಅವರ ಶ್ವಾಸನಾಗಳಲ್ಲಿ ಊಟ ಕಾಣಿಸುವುದರಿಂದ ಅವು ಬಿಗಿದುಕೊಳ್ಳುತ್ತವೆ. 
SCROLL FOR NEXT