ಸ್ವಲೀನತೆಗೊಳಗಾಗಿರುವ ಮಕ್ಕಳಲ್ಲಿ ಕಲಿಕೆ ಚುರುಕುಗೊಳಿಸಬೇಕಾದರೆ ಹೀಗೆ ಮಾಡಿ!
ಲಂಡನ್: ಸ್ವಲೀನತೆ ಅಥವಾ ಆಟಿಸಂ ನರಗಳಿಗೆ ಸಂಬಂಧಪಟ್ಟ ಕಾಯಿಲೆಯಾಗಿದ್ದು, ಮೆದುಳಿನ ಸಾಮಾನ್ಯ ಬೆಳವಣಿಗೆಯನ್ನು ಕುಂಠಿತವಾಗುವಂತೆ ಮಾಡುತ್ತದೆ. ಮಕ್ಕಳಲ್ಲಿ ಕಂಡುಬರುವ ಈ ರೀತಿಯ ಸಮಸ್ಯೆಯಿಂದಾಗಿ ಕಲಿಕೆಯ ಮೇಲೆಯೂ ಪರಿಣಾಮ ಬೀರಲಿದೆ.
ಮಕ್ಕಳಲ್ಲಿ ಕಾಣಿಸುವ ಸ್ವಲೀನತೆ ಸಮಸ್ಯೆಯ ಬಗ್ಗೆ ಬ್ರಿಟನ್ ನ ಯೂನಿವರ್ಸಿಟಿ ಆಫ್ ಚಿಚೆಸ್ಟರ್ ಮತ್ತು ಯೂನಿವರ್ಸಿಟಿ ಸೆಂಟರ್ ಹಾರ್ಟ್ಪ್ಯೂರಿ ಸಂಶೋಧಕರು ಅಧ್ಯಯನ ನಡೆಸಿದ್ದು, ವಾರದಲ್ಲಿ 60 ನಿಮಿಷಗಳ ವರೆಗೆ ಡ್ರಮ್ ಬಾರಿಸುವುದರಿಂದ ಮಕ್ಕಳಲ್ಲಿ ಕಲಿಕೆಯನ್ನು ಉತ್ತಮಗೊಳಿಸಬಹುದು ಎಂದು ಹೇಳಿದ್ದಾರೆ.
ಡ್ರಮ್ಮಿಂಗ್ ಅಭ್ಯಾಸ ಮಾಡುವುದರಿಂದ ಸ್ವಲೀನತೆ ಹೊಂದಿರುವ ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ಈ ಮೂಲಕ ಸಾಮಾಜಿಕ ಸಂವಹನಕ್ಕೆ ಸಹಕಾರಿಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಿಗೆ 10 ವಾರಗಳ ಕಾಲ ಡ್ರಮ್ ಬಾರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಪ್ರತಿ ವಾರವೂ 30 ನಿಮಿಷನಗಳ ಸೆಷನ್ ನ್ನು ಆಯೋಜಿಸಲಾಗಿದ್ದು, ಡ್ರಮ್ ಬಾರಿಸುಜ್ವ ಮಕ್ಕಳಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics