ಆರೋಗ್ಯ

ಸ್ತನ್ಯಪಾನದಿಂದ ಶಿಶುಗಳು ಒತ್ತಡಗಳಿಗೆ ಪ್ರಚೋದಿಸುವುದು ಕಡಿಮೆ: ಅಧ್ಯಯನ

Sumana Upadhyaya

ವಾಷಿಂಗ್ಟನ್ ಡಿ ಸಿ(ಯುಎಸ್ಎ): ಎದೆಹಾಲುಣಿಸುವುದರಿಂದ ಮಗುವಿನ ಮತ್ತು ತಾಯಿಯ ಆರೋಗ್ಯಕ್ಕೆ ಉತ್ತಮ ಎಂದು ಈಗಾಗಲೇ ಬಹುತೇಕರು ತಿಳಿದುಕೊಂಡಿದ್ದಾರೆ. ಅದನ್ನು ವೈದ್ಯರು ಮತ್ತು ವಿಶ್ವ ಆರೋಗ್ಯ ಸಂಸ್ಥೆಯೇ ಸಾರಿ ಹೇಳಿದೆ. ಇತ್ತೀಚಿನ ಅಧ್ಯಯನ ಪ್ರಕಾರ ಸ್ತನ್ಯಪಾನವು ಮಕ್ಕಳನ್ನು ಒತ್ತಡಕ್ಕೆ ಕಡಿಮೆ ಪ್ರತಿಕ್ರಿಯಿಸುವಂತೆ ಮಾಡುತ್ತದೆ ಎಂದು ತಿಳಿದುಬಂದಿದೆ.

ಸಂಶೋಧನೆಯ ಪ್ರಮುಖರಲ್ಲಿ ಒಬ್ಬರಾದ ಡಾ. ಲೆಸ್ಟರ್ ಹೇಳುವ ಪ್ರಕಾರ, ಮಗುವನ್ನು ತಾಯಿ ಆರೈಕೆ ಮಾಡುವುದರಿಂದ ಶಿಶುಗಳಲ್ಲಿ ಅನುವಂಶಿಕ ಧಾತು(gene) ಬದಲಾಗುತ್ತದೆ. ಈ ಧಾತು ಮಗುವಿನಲ್ಲಿ ಒತ್ತಡಕ್ಕೆ ಶಾರೀರಿಕ ಪ್ರತಿಕ್ರಿಯೆಯನ್ನು ನಿಯಂತ್ರಿಸುತ್ತದೆ. ಅದರಲ್ಲೂ ಮುಖ್ಯವಾಗಿ ಹಾರ್ಮೊನ್ ಕಾರ್ಟಿಸೊಲ್ ನ್ನು ಬಿಡುಗಡೆ ಮಾಡುತ್ತದೆ.

ಸಂಶೋಧಕರು 40ಕ್ಕೂ ಅಧಿಕ ತಾಯಿ-ಮಗುವನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಅವರಲ್ಲಿ ಅರ್ಧದಷ್ಟು ಮಂದಿ ತಾಯಂದಿರು ಶಿಶು ಜನಿಸಿದ ಮೊದಲ 5 ತಿಂಗಳು ಹಾಲುಣಿಸಿದರೆ ಇನ್ನು ಅರ್ಧದಷ್ಟು ಮಂದಿ ಹಾಲುಣಿಸಲಿಲ್ಲ. ಈ ಸಮಯದಲ್ಲಿ ಶಿಶುವಿನಲ್ಲಿ ಕಾರ್ಟಿಸೊಲ್ ಒತ್ತಡ ಪ್ರತಿಕ್ರಿಯೆಗಳನ್ನು ಪರೀಕ್ಷಿಸಿದರು. ಮಗುವಿನ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆ, ಶಕ್ತಿ, ರೋಗನಿರೋಧಕ ಶಕ್ತಿಗಳನ್ನು ಕೂಡ ಪರೀಕ್ಷಿಸಲಾಯಿತು.

ಈ ಅಧ್ಯಯನ ಪಿಡಿಯಾಟ್ರಿಕ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.

SCROLL FOR NEXT