ಸಂಚಾರ ಮಾಲಿನ್ಯದಿಂದ ಭಾರತದಲ್ಲಿ 350,000 ಮಕ್ಕಳಿಕೆ ಆಸ್ತಮಾ!
ವಾಷಿಂಗ್ ಟನ್: ಸಂಚಾರ ಮಾಲಿನ್ಯದಿಂದ ಉಂಟಾಗುವ ಮಾಲಿನ್ಯದಿಂದ ಭಾರತದಲ್ಲಿ 2015 ನೇ ಸಾಲಿನಲ್ಲಿ ಬರೊಬ್ಬರಿ 350,000 ಮಕ್ಕಳು ಆಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ವಿಶ್ವದ 194 ರಾಷ್ಟ್ರಗಳು 125 ಪ್ರಮುಖ ನಗರಗಳಲ್ಲಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್ ಸಮೀಕ್ಷೆ ನಡೆಸಿದ್ದು, ಸಂಚಾರ ಮಾಲಿನ್ಯದಿಂದ ಉಂಟಾಗುವ ಮಾಲಿನ್ಯದಿಂದ ಆಸ್ತಮಾ ಸಮಸ್ಯೆಗೆ ತುತ್ತಾಗಿರುವವರ ಸಂಖ್ಯೆಯಲ್ಲಿ ಚೀನಾ ನಂ.1 ಸ್ಥಾನದಲ್ಲಿದ್ದರೆ ಭಾರತ 2 ನೇ ಸ್ಥಾನದಲ್ಲಿದೆ.
ಪ್ರತಿ ವರ್ಷವೂ 10 ರಲ್ಲಿ ಒಬ್ಬರಿಗಿಂತ ಹೆಚ್ಚು ಸಂಖ್ಯೆಯ ಜನರಿಗೆ ಬಾಲ್ಯದಲ್ಲೇ ಆಸ್ತಮಾ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಇದಕ್ಕೆ ವಾಹನ ದಟ್ಟಣೆಯಿಂದ ಉಂಟಾದ ಮಾಲಿನ್ಯ ಕಾರಣ ಎಂದು ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್ ವರದಿ ಮೂಲಕ ತಿಳಿದುಬಂದಿದೆ.
ಅಭಿವೃದ್ಧಿಶೀಲ ಹಾಗೂ ಮಕ್ಕಳಲ್ಲಿ ಆಸ್ತಮಾ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ನೈಟ್ರೋಜನ್ ಡೈಆಕ್ಸೈಡ್ ಮಾಲಿನ್ಯ ಅತ್ಯಂತ ಅಪಾಯಕಾರಿ ಅಂಶ ಎಂಬುದು ವರದಿಯ ಮೂಲಕ ತಿಳಿದುಬಂದಿದೆ.
ಶೇ.92 ರಷ್ಟು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಪ್ರದೇಶಗಳಲ್ಲಿ ವಿಶ್ವಸಂಸ್ಥೆ ಮಾರ್ಗಸೂಚಿ ಮಟ್ಟಕ್ಕಿಂತಲೂ ಸಂಚಾರ ಮಾಲಿನ್ಯದ ಮಟ್ಟ ಆತಂಕಕಾರಿಯಾಗಿದ್ದು, ಸಂಶೋಧಕರು ಮಾರ್ಗಸೂಚಿಯನ್ನು ಮರುಪರಿಶೀಲನೆ ನಡೆಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos