ಆರೋಗ್ಯ

ಓಮಿಕ್ರಾನ್ ಲಕ್ಷಣಗಳು ಏನು? ಹೊಸ ರೂಪಾಂತರಿ ಎಷ್ಟು ಅಪಾಯಕಾರಿ?

Manjula VN

ಬೆಂಗಳೂರು: ಎಲ್ಲಾ ಕಡೆ ಓಮಿಕ್ರಾನ್ ಹೊಸ ರೂಪಾಂತರಿಯ ದುಗುಡ ಹೆಚ್ಚಾಗುತೊಡಗಿದೆ. ಡೆಲ್ಟಾ ರೂಪಾಂತರಿಯಿಂದ ಭೀತಿಗೊಳಗಾಗಿದ್ದ ವಿಶ್ವದ ರಾಷ್ಟ್ರಗಳು ಓಮಿಕ್ರಾನ್ ಹೊಸ ರೂಪಾಂತರಿಯಿಂದಾಗಿ ಮತ್ತೆ ಭೀತಿ ಆವರಿಸತೊಡಗಿದೆ.

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಈ ಹೊಸ ರೂಪಾಂತರವು ಮತ್ತೊಮ್ಮೆ ಪ್ರಪಂಚದಾದ್ಯಂತದ ಆರೋಗ್ಯ ತಜ್ಞರು ಮತ್ತು ವಿಜ್ಞಾನಿಗಳ ಕಳವಳವನ್ನು ಹೆಚ್ಚಿಸಿದೆ. ಈ ರೂಪಾಂತರವು ಕರೋನಾ ವೈರಸ್‌ನ ಅತ್ಯಂತ ಸಾಂಕ್ರಾಮಿಕ ಮತ್ತು ಮಾರಣಾಂತಿಕ ರೂಪಾಂತರವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಓಮಿಕ್ರಾನ್ ರೂಪಾಂತರಿ ಪತ್ತೆಯಾದ ಎರಡೇ ದಿನದಲ್ಲಿ ಡಬ್ಲ್ಯುಎಚ್ಒ, ಇದೊಂದು ಕಳವಳಕಾರಿ ರೂಪಾಂತರಿ ಎಂದು ಘೋಷಣೆ ಮಾಡಿತ್ತು.

24 ನವೆಂಬರ್ 2021 ರಂದು ದಕ್ಷಿಣ ಆಫ್ರಿಕಾದಲ್ಲಿ ಕರೋನಾ, ಓಮಿಕ್ರಾನ್‌ನ ಹೊಸ ರೂಪಾಂತರದ ಮೊದಲ ಪ್ರಕರಣ ಪತ್ತೆಯಾಯಿತು. ದಕ್ಷಿಣ ಆಫ್ರಿಕಾದ ಹೊರತಾಗಿ, ಈ ರೂಪಾಂತರವನ್ನು ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಇಟಲಿ, ಬೆಲ್ಜಿಯಂ, ಬೋಟ್ಸ್‌ವಾನಾ, ಹಾಂಗ್ ಕಾಂಗ್ ಮತ್ತು ಇಸ್ರೇಲ್‌ನಲ್ಲಿಯೂ ಗುರುತಿಸಲಾಗಿದೆ. ಈ ರೂಪಾಂತರವು ಕಾಣಿಸಿಕೊಂಡ ನಂತರ, ಪ್ರಪಂಚದ ಅನೇಕ ದೇಶಗಳು ದಕ್ಷಿಣ ಆಫ್ರಿಕಾದಿಂದ ಪ್ರಯಾಣಿಕರನ್ನು ನಿಷೇಧಿಸಿವೆ.

ಓಮಿಕ್ರಾನ್ ನ ಗುಣಲಕ್ಷಣಗಳು ಏನು? ಇದು ಎಷ್ಟು ಅಪಾಯಕಾರಿ?

  • ಓಮಿಕ್ರಾನ್ ಸೋಂಕಿತ ಅನೇಕ ಜನರು ಲಕ್ಷಣ ರಹಿತವಾಗಿದ್ದಾರೆ.
  • ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
  • ಒಂದು ಅಥವಾ ಎರಡು ದಿನಗಳವರೆಗೆ ಸುಸ್ತು ಇರಲಿದೆ.
  • ಆದಾಗ್ಯೂ ಓಮಿಕ್ರಾನ್ ರೂಪಾಂತರ ಯಾವುದೇ ಹೊಸ ವೈಶಿಷ್ಠ್ಯಗಳು ಇಲ್ಲಿಯವರೆಗೆ ಕಂಡುಬಂದಿಲ್ಲ.
  • ಗಂಟಲು ನೋವು, ತಲೆನೋವು, ಉಸಿರಾಟದ ತೊಂದರೆ, ಎದೆನೋವು ಕಾಣಿಸಿಕೊಳ್ಳಲಿದೆ.
  • ಓಮಿಕ್ರಾನ್ 3ನೇ ಅಲೆ ಅನ್ನೋದು ಹಲವು ತಜ್ಞರ ಅಭಿಪ್ರಾಯ.
  • ಹೊಸ ರೂಪಾಂತರಿ ಡೆಲ್ಟಾಕ್ಕಿಂತ ಹಲವಾರು ಪಟ್ಟು ಹೆಚ್ಚು ಮಾರಕ.
  • ಓಮಿಕ್ರಾನ್ ಹೊಸ ರೂಪಾಂತರಿ ಡೆಲ್ಟಾಕ್ಕಿಂತ 7 ಪಟ್ಟು ವೇಗವಾಗಿ ಹರಡುತ್ತಿದೆ.
  • ಹೊಸ ರೂಪಾಂತರಿಯನ್ನು ಗುರುತಿಸುವುದಕ್ಕೂ ಮುನ್ನ 32 ಬಾರಿ ರೂಪಾಂತರಗೊಂಡಿದೆ.
  • ಸದ್ಯಕ್ಕೆ ಭಾರತದಲ್ಲಿ ಈ ರೂಪಾಂತರದ ಯಾವುದೇ ಪ್ರಕರಣ ದೃಢಪಟ್ಟಿಲ್ಲ.

ಓಮಿಕ್ರಾನ್‌ನಿಂದ ತಪ್ಪಿಸಿಕೊಳ್ಳಲು ನೀವು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?
ಹೊಸ ರೂಪಾಂತರವನ್ನು ತಪ್ಪಿಸಲು ಕೇಂದ್ರ ಸರ್ಕಾರ ಹಾಗೂ ಡಬ್ಲ್ಯುಎಚ್ಒ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವುದು ಅವಶ್ಯಕ. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಅಲ್ಲದೆ, ಎಲ್ಲಾ ತಜ್ಞರು ಲಸಿಕೆ ಪಡೆಯಲು ಸಲಹೆ ನೀಡುತ್ತಿದ್ದಾರೆ.

(ಮೂಲ ಮಾಹಿತಿ : ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಕಮ್ಯನಿಕೇಬಲ್ ಡಿಸೀಸ್ (ಎನ್ಐಸಿಡಿ) ದಕ್ಷಿಣ ಆಫ್ರಿಕಾದ ಓಮಿಕ್ರಾನ್ ತಜ್ಞರು)

SCROLL FOR NEXT