ಸಂಗ್ರಹ ಚಿತ್ರ 
ಆರೋಗ್ಯ

ಬಿಸಿಲ ಝಳಕ್ಕೆ ಬಾಡದಿರಲಿ ನಯನಗಳು: ಬೇಸಿಗೆಯಲ್ಲಿ ಕಣ್ಣಿನ ರಕ್ಷಣೆ ಹೇಗೆ? ಇಲ್ಲಿವೆ ಉಪಯುಕ್ತ ಸಲಹೆಗಳು...

ಸುಡು ಬಿಸಿಲಿಗೆ ಕಣ್ಣುಗಳು ತೇವಾಂಶವನ್ನು ಕಳೆದುಕೊಂಡು ಮಡ್ರಾಸ್‌ ಐ, ಕಾಮಾಲೆ, ಕಣ್ಣನಲ್ಲಿ ನವೆ, ಅಲರ್ಜಿ, ಕಣ್ಣಿನಲ್ಲಿ ಆಗಾಗ ನೀರು ಸುರಿಯುತ್ತಲೇ ಇರುವುದು, ಕಿರಿಕಿರಿ ಅನುಭವ ಇಲ್ಲವೇ ಕಣ್ಣಿನೊಳಗೆ ಚುಚ್ಚಿದಂತಾಗುವುದು...ಹೀಗೆ ಹಲವು ರೀತಿಯ ಕಣ್ಣಿನ ಸಮಸ್ಯೆಗಳು ಎದುರಾಗುತ್ತವೆ.

ಬೇಸಿಗೆ ಕಾಲ ಬಂತೆಂದರೆ ಸಾಕು ಹಲವು ರೋಗಗಳು ಬೆಂಬಿಡದೆ ಕಾಡುತ್ತವೆ. ಅವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ನಾವು ಕಣ್ಣಿನ ಆರೈಕೆಯನ್ನೇ ಮರೆತುಬಿಡುತ್ತೇವೆ. ಬೇಸಿಗೆಯ ಬಿಸಿಲ ಗಾಳಿ ಕಣ್ಣಿಗೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಸುಡು ಬಿಸಿಲಿಗೆ ಕಣ್ಣುಗಳು ತೇವಾಂಶವನ್ನು ಕಳೆದುಕೊಂಡು ಮಡ್ರಾಸ್‌ ಐ, ಕಾಮಾಲೆ, ಕಣ್ಣನಲ್ಲಿ ನವೆ, ಅಲರ್ಜಿ, ಕಣ್ಣಿನಲ್ಲಿ ಆಗಾಗ ನೀರು ಸುರಿಯುತ್ತಲೇ ಇರುವುದು, ಕಿರಿಕಿರಿ ಅನುಭವ ಇಲ್ಲವೇ ಕಣ್ಣಿನೊಳಗೆ ಚುಚ್ಚಿದಂತಾಗುವುದು...ಹೀಗೆ ಹಲವು ರೀತಿಯ ಕಣ್ಣಿನ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಕಣ್ಣಿನ ಆರೈಕೆ ಮಾಡುವುದು ಅತ್ಯವಶ್ಯಕ.

ಬೇಸಿಗೆಯಲ್ಲಿ ಕಣ್ಣುಗಳನ್ನು ಯಾವ ರೀತಿ ರಕ್ಷಣೆ ಮಾಡಬೇಕು? ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಇಲ್ಲಿದೆ ಮಾಹಿತಿ...

ಸನ್‌ಗ್ಲಾಸ್ ಬಳಕೆ ಮಾಡಿ

ಸುಡು ಬಿಸಿಲಿನಲ್ಲಿ ಮನೆಯಿಂದ ಹೊರಗೆ ಬರುವ ಅಗತ್ಯ ಬಂದಾಗಲೆಲ್ಲಾ ಸನ್‌ಗ್ಲಾಸ್‌ ಬಳಕೆ ಮಾಡಿ. ಬೈಕ್‌, ಕಾರು ಅಥವಾ ಇನ್ಯಾವುದೇ ವಾಹನಗಳನ್ನು ಚಾಲನೆ ಮಾಡುವ ವೇಳೆಯೂ ಸನ್‌ಗ್ಲಾಸ್‌ ಬಳಕೆ ಮಾಡುವುದರಿಂದ ಧೂಳಿನ ಕಣಗಳು ಅಥವಾ ಬಿಸಿಗಾಳಿ ಕಣ್ಣುಗಳನ್ನು ಸೇರದಂತೆ ತಡೆಯುತ್ತದೆ. ಬೈಕ್‌ ಸವಾರರು ಆದಷ್ಟು ಮುಚ್ಚಿರುವ ಹೆಲ್ಮೆಟ್‍ಗಳನ್ನು ಬಳಸುವುದು ಉತ್ತಮ.

ಶೇ.100ರಷ್ಟು UV ರಕ್ಷಣೆಯನ್ನು ಒದಗಿಸುವ ಗುಣಮಟ್ಟದ ಸನ್ಗ್ಲಾಸ್ ನ್ನು ಖರೀದಿ ಮಾಡಿ. ಯುವಿ ಕಿರಣಗಳು ನಿಮ್ಮ ಕಣ್ಣುಗಳಿಗೆ ಹಾನಿಯನ್ನು ಉಂಟುಮಾಡಬಹುದು, ಇದು ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ UVA ಮತ್ತು UVB ಕಿರಣಗಳನ್ನು ನಿರ್ಬಂಧಿಸುವಂತೆ ಸನ್ಗ್ಲಾಸ್‌ಗಳನ್ನು ಖರೀದಿಸಿ.

ರಕ್ಷಣಾತ್ಮಕ ಕನ್ನಡಕಗಳನ್ನು ಬಳಸಿ

ಸ್ವಿಮ್ಮಿಂಗ್, ಕ್ರೀಡೆ ಅಥವಾ ಹೊರಾಂಗಣದ ಕೆಲಸ ಮಾಡುವಾಗ ಪ್ರೊಟೆಕ್ಟಿವ ಸನ್ ಗ್ಲಾಸ್ ಗಳನ್ನು ಬಳಕೆ ಮಾಡಿ. ಈ ಕನ್ನಡಕಗಳು ನಿಮ್ಮ ಕಣ್ಣುಗಳಿಗೆ ಧೂಳು, ರಾಸಾಯನಿಕ ಮತ್ತು ಇತರೆ ಹಾನಿಕಾರಕ ವಸ್ತುಗಳಿಂದ ರಕ್ಷಣೆ ಮಾಡುತ್ತವೆ.

ಕಣ್ಣಿನ ಅಲರ್ಜಿಗಳ ಬಗ್ಗೆ ಜಾಗರೂಕರಾಗಿರಿ

ಅಲರ್ಜಿಕ್ ಕಾಂಜಂಕ್ಟಿವಿಟಿಸ್ ಬಗ್ಗೆ ಕಾಳಜಿ ಇರಲಿ, ಸಾಮಾನ್ಯವಾಗಿ ಬೇಸಿಗೆಯಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಣ್ಣು ಕೆಂಪಾಗುವುದು, ತುರಿಕೆ ಲಕ್ಷಣಗಳು ಕಂಡು ಬರುತ್ತವೆ. ಈ ಲಕ್ಷಣಗಳು ಕಂಡು ಬಂದರೆ ತೀವ್ರವಾದ ಉಜ್ಜುವಿಕೆಯನ್ನು ತಪ್ಪಿಸಿ, ಶೀಘ್ರಗತಿಯಲ್ಲಿ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ.

ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಸುದೀರ್ಘ ಕಾಲ ನೋಡದಿರಿ

ಮೊಬೈಲ್, ಕಂಪ್ಯೂಟರ್ ಅಥವಾ ಇತರೆ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಸುದೀರ್ಘ ಕಾಲ ನೋಡದೆ ವಿರಾಮ ತೆಗೆದುಕೊಳ್ಳಿ. ಈ ಗ್ಯಾಜೆಟ್ ಗಳು ಕಣ್ಣುಗಳಿಗೆ ಆಯಾಸವನ್ನು ನೀಡುವುದಲ್ಲದೆ, ದೃಷ್ಟಿ ಸಮಸ್ಯೆಗಳನ್ನು ಎದುರು ಮಾಡುತ್ತವೆ. ಈ ಗ್ಯಾಜೆಟ್ ಗಳ ಬಳಕೆ ವೇಳೆ 20-20 ನಿಯಮಗಳನ್ನು ಅನುಸರಿಸಿ. ಅದರೆ. ಪ್ರತಿ 20 ನಿಮಿಷಗಳಿಗೊಮ್ಮೆ ವಿರಾಮ ತೆಗೆದುಕೊಳ್ಳಿ. 20 ನಿಮಿಷಗಳ ಕಾಲ ದೂರದ ವಸ್ತುವನ್ನು ನೋಡಿ, ಜೋರಾಗಿ ಅಲ್ಲದೆ, ನಿಧಾನಗತಿಯಲ್ಲಿ ಆಗಾಗ್ಗೆ ಕಣ್ಣುಗಳನ್ನು ಮಿಟುಕಿಸುತ್ತಿರಿಸಿ,

ನಿಯಮಿತ ಕಣ್ಣಿನ ಪರೀಕ್ಷೆ ಅಗತ್ಯ

ಯಾವುದೇ ದೃಷ್ಟಿ ಸಮಸ್ಯೆಗಳು ಕಂಡು ಬರದಿದ್ದರೂ ಸಹ ವರ್ಷಕ್ಕೊಮ್ಮೆಯಾದರೂ ನಿಮ್ಮ ಕಣ್ಣುಗಳ ಪರೀಕ್ಷೆ ಮಾಡಿಸಿಕೊಳ್ಳಿ. ಕಣ್ಣಿನ ಪರೀಕ್ಷೆಗಳಿಂದ ಗ್ಲುಕೋಮಾ, ಕಣ್ಣಿನ ಪೊರೆ, ಡಯಾಬಿಟಿಕ್ ರೆಟಿನೋಪತಿ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ಸಮಸ್ಯೆಗಳ ಆರಂಭಿಕ ಚಿಹ್ನೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ, ಇದು ಸಕಾಲಿಕ ಚಿಕಿತ್ಸೆಗೆ ಅನುವು ಮಾಡಿಕೊಡುತ್ತದೆ.

ಶುಚಿತ್ವ ಮುಖ್ಯ

ತೊಳೆಯದ ಕೈಗಳಿಂದ ನಿಮ್ಮ ಕಣ್ಣುಗಳನ್ನು ಉಜ್ಜುವುದರಿಂದ ದೂರವಿರಿ, ಏಕೆಂದರೆ ಇದರಿಂದ ಬ್ಯಾಕ್ಟೀರಿಯಾಗಳು ಕಣ್ಣುಗಳಿಗೆ ಹೋಗುವ ಸಾಧ್ಯತೆಗಳಿರುತ್ತವೆ. ಇದರಿಂದ ಸೋಂಕುಗಳೂ ಎದುರಾಗಬಹುದು ಅಥವಾ ಅಲರ್ಜಿಗಳು ಅಥವಾ ಡ್ರೈ ಐ ಸಿಂಡ್ರೋಮ್‌ನಂತಹ ಸಮಸ್ಯೆಗಳು ಎದುರಾಗಬಹುದು.

ಅತಿಯಾದ ಸನ್ ಗ್ಲಾಸ್ ಬಳಕೆ ಕೂಡ ಬೇಡ

ಸನ್ಗ್ಲಾಸ್ ಅತ್ಯಗತ್ಯವಾಗಿದ್ದರೂ, ಇತರ ಸೂರ್ಯನ ರಕ್ಷಣೆ ಕ್ರಮಗಳನ್ನು ಕಡೆಗಣಿಸದಿರಿ. ಸೂರ್ಯನ ಕಿರಣಗಳು ಪ್ರಬಲವಾಗಿರುವಾಗ (ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ) ನೇರ ಸೂರ್ಯನ ಬೆಳಕಿನಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಅಗಲವಾದ ಅಂಚುಳ್ಳ ಟೋಪಿಗಳು ಅಥವಾ ಮಾಸ್ಕ್ ಗಳನ್ನು ಧರಿಸಿ,

ಕಾಂಟ್ಯಾಕ್ಟ್ ಲೆನ್ಸ್‌ ಧರಿಸಿ ಈಜುವುದನ್ನು ನಿಯಂತ್ರಿಸಿ

ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸುತ್ತಿದ್ದರೆ, ನೀರಿನಿಂದ ಹರಡುವ ಬ್ಯಾಕ್ಟೀರಿಯಾಗಳು ನಿಮ್ಮ ಕಣ್ಣುಗಳಿಗೆ ಪ್ರವೇಶಿಸುವುದನ್ನು ತಡೆಯಲು ಮತ್ತು ಸೋಂಕಿನ ಸಾಧ್ಯತೆಯನ್ನು ಹೆಚ್ಚಿಸುವುದನ್ನು ತಡೆಯಲು ಈಜುವುದನ್ನು ಅಥವಾ ಸ್ನಾನ ಮಾಡುವುದನ್ನು ತಪ್ಪಿಸಿ. ಕಾಂಟ್ಯಾಕ್ಟ್ ಲೆನ್ಸ್‌ ಬದಲಿಗೆ ಪ್ರಿಸ್ಕ್ರಿಪ್ಷನ್ ಈಜು ಕನ್ನಡಕಗಳನ್ನು ಬಳಸಿ ಅಥವಾ ದೈನಂದಿನ ಬಿಸಾಡಬಹುದಾದ ಲೆನ್ಸ್‌ಗಳನ್ನು ಈ ಚಟುವಟಿಕೆಗಳಿಗಾಗಿ ಬಳಸಿ.

ರೋಗಲಕ್ಷಣಗಳ ನಿರ್ಲಕ್ಷ್ಯ ಬೇಡ

ನಿಮ್ಮ ದೃಷ್ಟಿ ಅಥವಾ ಕಣ್ಣಿನ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದರೂ ಜಾಗರೂಕರಾಗಿರಿ. ಕಣ್ಣಿನ ಅಸ್ವಸ್ಥತೆ, ಕೆಂಪಗಾಗುವುದು, ತುರಿಕೆ ಅಥವಾ ಹಠಾತ್ ದೃಷ್ಟಿ ಪಲ್ಲಟಗಳಂತಹ ನಿರಂತರ ರೋಗಲಕ್ಷಣಗಳು ಕಂಡು ಬಂದರೆ, ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಿರಿ. ಈ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ನಿಮ್ಮ ಕಣ್ಣುಗಳಿಗೆ ತೊಡಕುಗಳು ಅಥವಾ ಶಾಶ್ವತ ಹಾನಿ ಉಂಟಾಗಬಹುದು.

ಸಾಕಷ್ಟು ನಿದ್ರೆ ಮಾಡಿ

ಕಣ್ಣಿನ ಆರೋಗ್ಯ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಸಾಕಷ್ಟು ನಿದ್ದೆ ಬಹುಮುಖ್ಯವಾಗಿದೆ. ನಿದ್ರೆಯ ಕೊರತೆಯು ಕಣ್ಣಿನ ಆಯಾಸ, ಶುಷ್ಕತೆ ಮತ್ತು ಕಿರಿಕಿರಿಯನ್ನು ಉಂಟುಮಾಡಬಹುದು. ನಿಮ್ಮ ಕಣ್ಣುಗಳು ದಿನವಿಡೀ ಒತ್ತಡಕ್ಕೊಳಗಾಗಿರುತ್ತದೆ. ಹೀಗಾಗಿ ಅದಕ್ಕೆ ವಿಶ್ರಾಂತಿಯ ಅಗತ್ಯವಿರುತ್ತದೆ. ನಿಮ್ಮ ಕಣ್ಣುಗಳು ವಿಶ್ರಾಂತಿ ಪಡೆಯಲು ಪ್ರತಿ ರಾತ್ರಿ ಕನಿಷ್ಠ ಏಳು ಗಂಟೆಗಳ ಗುಣಮಟ್ಟದ ನಿದ್ರೆ ಅಗತ್ಯವಿರುತ್ತದೆ.

ಮಧ್ಯಾಹ್ನದ ಉರಿಬಿಸಿಲಿನಲ್ಲಿರುವುದನ್ನು ನಿಯಂತ್ರಿಸಿ

ಸೂರ್ಯನ ಕಿರಣಗಳು ಮಧ್ಯಾಹ್ನದ ಸಮಯದಲ್ಲಿ ಪ್ರಬಲವಾಗಿರುತ್ತವೆ, ಇದು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನುಂಟುಮಾಡುತ್ತದೆ. ನಿಮ್ಮ ದೃಷ್ಟಿಯ ಮೇಲೆ ಹಾನಿಕಾರಕ UV ವಿಕಿರಣದ ಪ್ರಭಾವವನ್ನು ಕಡಿಮೆ ಮಾಡಲು ಒಳಾಂಗಣ ಚಟುವಟಿಕೆಗಳನ್ನು ಆಯ್ಕೆಮಾಡಿ ಅಥವಾ ಹೊರಾಂಗಣದಲ್ಲಿ ನೆರಳು ಇರುವ ಕಡೆ ಆಶ್ರಯ ಪಡೆಯಿರಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT