ಸೌಂದರ್ಯ ಎನ್ನುವುದು ಮುಖಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಮುಖದೊಂದಿಗೆ, ಕೈಕಾಲುಗಳು ಹಾಗೂ ಪಾದಗಳು ಕೂಡ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ. ಆದರೆ, ಹೆಚ್ಚಿನವರು ಮುಖದ ಅಂದಕ್ಕೆ ಮಾತ್ರ ಹೆಚ್ಚನ ಗಮನಕೊಟ್ಟು, ಪಾದಗಳ ಆರೈಕೆ ಬಗ್ಗೆ ಗಮನ ಕೊಡುವುದಿಲ್ಲ.
ಹೀಗಾಗಿಯೇ ಸಾಕಷ್ಟು ಮಂದಿ ಹಿಮ್ಮಡಿ ಒಡೆಯುವ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಿಮ್ಮಡಿ ಒಡೆಯುವುದು, ಕಾಲಿನ ಅಂದವನ್ನು ಹಾಳು ಮಾಡುತ್ತದೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಒಡೆದ ಹಿಮ್ಮಡಿಯಿಂದ ವಿಪರೀತ ನೋವಾಗುತ್ತದೆ. ಈ ಸಮಸ್ಯೆಗೆ ದೂರಾಗಿಸಿಕೊಳ್ಳುವ ಪರಿಹಾರ ಇಲ್ಲಿದೆ...
ಪಾದಗಳನ್ನು ಬೆಚ್ಚಗಿನ ನೀರಿನಲ್ಲಿ ಉಪ್ಪು, ನಿಂಬೆ ರಸ ಹಾಕಿ 10 ನಿಮಿಷ ನೆನೆಯಲು ಬಿಡಿ. ಇದನ್ನು ವಾರಕ್ಕೆ ಎರಡು ಬಾರಿ ಮಾಡಿ ನೋಡಿ.
ಸ್ಕ್ರಬ್ ಮಾಡಿ ಒಣ ಚರ್ಮವನ್ನು ನಿಧಾನವಾಗಿ ತೆಗೆಯಿರಿ. ಸ್ಕ್ರಬ್ ಮಾಡಿದ ನಂತರ ತಕ್ಷಣ ಫುಟ್ ಕ್ರೀಮ್ ಬಳಸಿ. ಸಕ್ಕರೆ ಮತ್ತು ತೆಂಗಿನ ಎಣ್ಣೆಯನ್ನು ಬೆರೆಸಿ ನೈಸರ್ಗಿಕ ಸ್ಕ್ರಬ್ ಅನ್ನು ಸಿದ್ಧಪಡಿಸಿಕೊಳ್ಳಬಹುದು.
ನೀವು ಶುಷ್ಕ ಚರ್ಮವನ್ನು ಹೊಂದಿದ್ದರೆ, ನಂತರ ಪಾದಗಳಿಗೆ ವಿಶೇಷವಾದ ಕ್ರೀಮ್ಗಳನ್ನು ಹಚ್ಚಿ. ಅದು ಸಾಮಾನ್ಯ ಮುಖದ ಕ್ರೀಮ್ಗಳಿಗಿಂತ ದಪ್ಪವಾಗಿರುತ್ತದೆ. ಉತ್ತಮ ಫಲಿತಾಂಶಗಳಿಗಾಗಿ, ಮಲಗುವ ಮೊದಲು ಪ್ರತಿ ರಾತ್ರಿ ಫೂಟ್ ಕ್ರೀಮ್ ಬಳಸಿ.
ಶುಷ್ಕ, ಬಿರುಕು ಬಿಟ್ಟ ಹಿಮ್ಮಡಿಗೆ ಮಾತ್ರವಲ್ಲದೆ ನಿಮ್ಮ ಪಾದಗಳಿಂದ ಎಲ್ಲಾ ಆಯಾಸವನ್ನು ತೆಗೆದುಹಾಕಲು ಆಯಿಲ್ ಮಸಾಜ್ ಸಹ ಉತ್ತಮ. ನಿಮ್ಮ ಪಾದಗಳನ್ನು ಸಡಿಲಗೊಳಿಸುತ್ತದೆ.
ತೆಂಗಿನ ಎಣ್ಣೆ, ತುಪ್ಪ, ಬಾದಾಮಿ ಎಣ್ಣೆ ಅಥವಾ ಎಳ್ಳಿನ ಎಣ್ಣೆಯಿಂದ ಮಸಾಜ್ ಮಾಡಿ. ಇದರಿಂದ ನಿಮ್ಮ ಪಾದಗಳಲ್ಲಿ ರಕ್ತಪರಿಚಲನೆ ಹೆಚ್ಚಾಗುತ್ತದೆ ಮತ್ತು ತೇವಾಂಶ ಹಾಗೆಯೇ ಉಳಿಯುತ್ತದೆ.
ಚರ್ಮ ಡ್ರೈ ಆಗಿದ್ದರೆ, ನಂತರ ಪೆಟ್ರೋಲಿಯಂ ಜೆಲ್ಲಿಯನ್ನು ಬಳಸಿ, ಅದು ನಿಮ್ಮ ಬಿರುಕು ಬಿಟ್ಟ ಹಿಮ್ಮಡಿಗಳನ್ನು ಸರಿಪಡಿಸುತ್ತದೆ.
ಮಲಗುವ ಸಮಯದಲ್ಲಿ ಸಾಕ್ಸ್ ಹಾಕಿ ಮಲಗಿ. ಇದು ತೇವಾಂಶವನ್ನು ಲಾಕ್ ಮಾಡಲು ಸಹಾಯ ಮಾಡುತ್ತದೆ. ಇದರಿಂದ ತ್ವಚೆ ಉತ್ತಮವಾಗಿರುತ್ತದೆ.