ಡಾ ದೇವಿಶೆಟ್ಟಿ  
ಆರೋಗ್ಯ

ಪ್ರತಿಯೊಬ್ಬ ಭಾರತೀಯರೂ 17ನೇ ವಯಸ್ಸಿನಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು: ಡಾ. ದೇವಿ ಶೆಟ್ಟಿ-Video

ಇದರಿಂದ ಅಧಿಕ ಕೊಲೆಸ್ಟ್ರಾಲ್‌ ನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚುವ ಮುನ್ನವೇ ಯುವಜನತೆ ತಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಭಾರತೀಯ ಹೃದ್ರೋಗ ಸಂಘದ (Cardiology Society of India) ಮಾರ್ಗಸೂಚಿಗಳ ಅನುಸಾರ ಪ್ರತಿಯೊಬ್ಬ ಭಾರತೀಯರೂ 17ನೇ ವಯಸ್ಸಿನಲ್ಲಿ ಒಮ್ಮೆ ಮೂಲಭೂತ ರಕ್ತ ಪರೀಕ್ಷೆ (ಬೇಸ್‌ಲೈನ್ ಬ್ಲಡ್ ಟೆಸ್ಟ್) ಮಾಡಿಸಿಕೊಳ್ಳಬೇಕು ಎಂದು ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಶಿಫಾರಸು ಮಾಡಿದ್ದಾರೆ.

ಇದರಿಂದ ಅಧಿಕ ಕೊಲೆಸ್ಟ್ರಾಲ್‌ ನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚುವ ಮುನ್ನವೇ ಯುವಜನತೆ ತಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ.

ಹೊರಗಿನಿಂದ ಕಾಣಲು ಆರೋಗ್ಯವಾಗಿರುವುದು ಅಥವಾ ದೇಹ ಸದೃಢವಾಗಿದೆ ಎಂದು ಭಾಸವಾಗುವುದು ಎಂದರೆ ಹೃದಯವೂ ಆರೋಗ್ಯಕರವಾಗಿದೆ ಎಂಬುದಕ್ಕೆ ಖಾತರಿಯಲ್ಲ ಎಂದು ಹೇಳಿದರು.

ಆನುವಂಶಿಕ ಕಾರಣಗಳು, ಮೈಯೋಕಾರ್ಡೈಟಿಸ್‌ನಂತಹ ಪತ್ತೆಯಾಗದ ಆರೋಗ್ಯ ಸಮಸ್ಯೆಗಳು ಹಾಗೂ ಯಾವುದೇ ಲಕ್ಷಣಗಳಿಲ್ಲದೆ ಉಂಟಾಗುವ ಅಪಧಮನಿಗಳ ಅಡಚಣೆ (ಸೈಲೆಂಟ್ ಬ್ಲಾಕೇಜ್)ಗಳಿಂದ ಗಂಭೀರ ಹೃದಯ ಸಮಸ್ಯೆಗಳು ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಸಂಭವಿಸಬಹುದು.

ಆದ್ದರಿಂದ, ಜೀವನದ ವಿವಿಧ ಹಂತಗಳಲ್ಲಿ ವಯಸ್ಸಿಗೆ ಅನುಗುಣವಾದ ಹೃದಯ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವಂತೆ ಅವರು ಶಿಫಾರಸು ಮಾಡಿದ್ದು, ಇದರಿಂದ ಆರಂಭಿಕ ಹಂತದಲ್ಲೇ ಸಮಸ್ಯೆಗಳನ್ನು ಪತ್ತೆಹಚ್ಚಿ ಸಮಯೋಚಿತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜತಾಂತ್ರಿಕತೆಗಿಂತ ದೊಡ್ಡ ಆಯುಧವಿಲ್ಲ, ಮಧ್ಯಪ್ರಾಚ್ಯ ಸಂಘರ್ಷ ಅಂತ್ಯಕ್ಕೆ ಶಾಂತಿಯುತ ಮಾತುಕತೆಯೇ ಏಕೈಕ ಮಾರ್ಗ: ಪ್ರಧಾನಿ ಮೋದಿ

Hormuz ಉದ್ವಿಗ್ನತೆ ತೀವ್ರ: Chabahar port ಗುರಿಯಾಗಿಸಿ ಅಮೆರಿಕಾ ಭೀಕರ ದಾಳಿ, Iranಗೆ ಮತ್ತೊಂದು ಪ್ರಬಲ ಹೊಡೆತ..!

ವರುಣಾರ್ಭಟಕ್ಕೆ ಉತ್ತರ ಭಾರತ ತತ್ತರ; ದೆಹಲಿ ಜಲಾವೃತ, ಜನಜೀವನ ಅಸ್ತವ್ಯಸ್ತ, Red ಅಲರ್ಟ್ ಘೋಷಣೆ..!

ಮುರಿದುಬಿದ್ದ ಶಾಂತಿ ಒಪ್ಪಂದ: ಇರಾನ್ ಮೇಲೆ ಅಮೆರಿಕ ಭಾರಿ ವೈಮಾನಿಕ ದಾಳಿ; ಮೂರು ಗಲ್ಫ್ ರಾಷ್ಟ್ರಗಳ ಮೇಲೆ ಟೆಹ್ರಾನ್ ಪ್ರತಿದಾಳಿ, ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ..!

ಮದುವೆ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ: ಭೀಕರ ತಿರುವು, ತಿರುಪತಿಯಲ್ಲಿ ಡಬಲ್ ಮರ್ಡರ್