ಡಯಾಬಿಟಿಸ್ (ಮಧುಮೇಹ) ದೇಹದ ಹಲವಾರು ಅಂಗಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸಾಕಷ್ಟು ಮಂದಿಗೆ ತಿಳಿದೇ ಇರುತ್ತದೆ. ಆದರೆ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದರಿಂದ ಕಣ್ಣುಗಳಿಗೂ ಗಂಭೀರ ಹಾನಿ ಉಂಟಾಗಬಹುದು ಎಂಬುದನ್ನು ಅನೇಕರು ಗಮನಿಸುವುದಿಲ್ಲ.
ದೀರ್ಘಕಾಲ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಿದ್ದರೆ ಕಣ್ಣಿನ ರೆಟಿನಾದ ಸೂಕ್ಷ್ಮ ರಕ್ತನಾಳಗಳು ಹಾನಿಗೊಳಗಾಗಿ ಡಯಾಬಿಟಿಕ್ ರೆಟಿನೋಪತಿ, ಕಾಟರಾಕ್ಟ್ ಮತ್ತು ಗ್ಲೂಕೋಮಾ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ.
ಆದರೆ, ಸಮಸ್ಯೆಯನ್ನು ಸರಿಯಾದ ಜೀವನಶೈಲಿ ಮತ್ತು ಕೆಲವು ಸರಳ ಅಭ್ಯಾಸಗಳ ಮೂಲಕ ದೂರಾಗಿಸಿಕೊಳ್ಳಬಹುದು.
ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಅತ್ಯಂತ ಮುಖ್ಯವಾದದ್ದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿ ಇರಿಸುವುದು. ಸಕ್ಕರೆ ಮಟ್ಟ ಹೆಚ್ಚು ಇದ್ದರೆ ರೆಟಿನಾದಲ್ಲಿರುವ ಸೂಕ್ಷ್ಮ ರಕ್ತನಾಳಗಳು ಹಾನಿಗೊಳಗಾಗುತ್ತವೆ. ಇದರಿಂದ ಮಸುಕಾದ ದೃಷ್ಟಿ, ರೆಟಿನಾದಲ್ಲಿ ದ್ರವ ಸೋರಿಕೆ, ರಕ್ತಪೂರೈಕೆ ಕಡಿಮೆಯಾಗುವುದು, ಕ್ರಮೇಣ ದೃಷ್ಟಿ ಹಾನಿಯಾಗುವ ಸಮಸ್ಯೆ ಎದುರಾಗುತ್ತದೆ.
ಮಧುಮೇಹ ಇರುವವರಲ್ಲಿ ಹೆಚ್ಚಿನ ರಕ್ತದೊತ್ತಡ ಕಣ್ಣಿನ ಸಮಸ್ಯೆಯನ್ನು ಮತ್ತಶ್ಟು ಹೆಚ್ಚಿಸುತ್ತದೆ. ರಕ್ತದೊತ್ತಡ ನಿಯಂತ್ರಣದಲ್ಲಿ ಇದ್ದರೆ ರೆಟಿನಾದ ರಕ್ತಪ್ರಸರಣ ಸುಧಾರಿಸುತ್ತದೆ, ಕಣ್ಣಿನಲ್ಲಿ ರಕ್ತಸ್ರಾವದ ಅಪಾಯ ಕಡಿಮೆಯಾಗುತ್ತದೆ ಮತ್ತು ಡಯಾಬಿಟಿಕ್ ರೆಟಿನೋಪತಿ ತೀವ್ರಗೊಳ್ಳುವುದನ್ನು ತಡೆಯಬಹುದು.
ಡಯಾಬಿಟಿಕ್ ಕಣ್ಣಿನ ಸಮಸ್ಯೆಗಳು ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸದೇ ಇರಬಹುದು. ಆದ್ದರಿಂದ ವರ್ಷಕ್ಕೊಮ್ಮೆ ಡಿಲೇಟೆಡ್ ಐ ಎಕ್ಸಾಮಿನೇಷನ್ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯ.
ಈ ಪರೀಕ್ಷೆಯಿಂದ ಮೈಕ್ರೋ ಅನ್ಯೂರಿಸಮ್, ರೆಟಿನಾ ಊತ, ಅಸಾಮಾನ್ಯ ರಕ್ತನಾಳಗಳ ಬೆಳವಣಿಗೆ, ಮ್ಯಾಕ್ಯುಲರ್ ಬದಲಾವಣೆಗಳನ್ನು ಆರಂಭದಲ್ಲೇ ಪತ್ತೆಹಚ್ಚಬಹುದು.
ಆಹಾರ ಕ್ರಮ ಕಣ್ಣುಗಳ ಆರೋಗ್ಯಕ್ಕೂ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೂ ಸಹಕಾರಿ.
ಹಸಿರು ಎಲೆ ತರಕಾರಿಗಳು, ಫೈಬರ್ ಹೆಚ್ಚಿರುವ ಆಹಾರ, ಮಿತ ಪ್ರಮಾಣದಲ್ಲಿ ಸಂಪೂರ್ಣ ಧಾನ್ಯಗಳು, ಬಾದಾಮಿ, ಡ್ರೈಫ್ರೂಟ್ಸ್ ಇವುಗಳನ್ನು ಆಹಾರದಲ್ಲಿ ಸೇರಿಸುವುದು ಉತ್ತಮ. ಜೊತೆಗೆ ಹೆಚ್ಚು ಸಕ್ಕರೆ ಇರುವ ಪಾನೀಯಗಳು ಮತ್ತು ರಿಫೈನ್ ಕಾರ್ಬೋಹೈಡ್ರೇಟ್‌ಗಳ ಸೇವನೆ ಕಡಿಮೆ ಮಾಡಿ.
ಪ್ರತಿ ದಿನ 30–45 ನಿಮಿಷಗಳಷ್ಟು ನಡೆಯುವುದು ಅಥವಾ ವ್ಯಾಯಾಮ ಮಾಡುವುದರಿಂದ ಅದು ರಕ್ತದಲ್ಲಿನ ಸಕ್ಕರೆ ಕಡಿಮೆ ಮಾಡುತ್ತದೆ ಹಾಗೂ ರಕ್ತದೊತ್ತಡ ನಿಯಂತ್ರಿಸುತ್ತದೆ. ಇವುಗಳೆಲ್ಲ ಕಣ್ಣುಗಳ ಆರೋಗ್ಯಕ್ಕೆ ಸಹಕಾರಿ.
ಧೂಮಪಾನ ಕಣ್ಣಿನ ರೆಟಿನಾದ ರಕ್ತಪ್ರಸರಣವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಉರಿಯೂತ ಹೆಚ್ಚಿಸಿ ಕಣ್ಣಿನ ಹಾನಿಯನ್ನು ವೇಗವಾಗಿ ಹೆಚ್ಚಿಸುತ್ತದೆ.
ಮಸುಕಾದ ದೃಷ್ಟಿ
ಕಣ್ಣಿನಲ್ಲಿ ಕಪ್ಪು ಚುಕ್ಕೆಗಳು ಅಥವಾ ಫ್ಲೋಟರ್ಸ್
ರಾತ್ರಿ ದೃಷ್ಟಿ ಸಮಸ್ಯೆ
ಆಕಸ್ಮಿಕ ದೃಷ್ಟಿ ಬದಲಾವಣೆ
ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಡಯಾಬಿಟಿಕ್ ಕಣ್ಣಿನ ಸಮಸ್ಯೆಗೆ ಲೇಸರ್ ಚಿಕಿತ್ಸೆ, ಕಣ್ಣಿನ ಇಂಜೆಕ್ಷನ್ ಅಥವಾ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು. ಆದರೆ ಆರಂಭದಲ್ಲೇ ನಿಯಂತ್ರಣ ತೆಗೆದುಕೊಂಜರೆ ಈ ಸಮಸ್ಯೆಗಳನ್ನು ಬಹುಪಾಲು ತಡೆಗಟ್ಟಬಹುದು.
ದೀರ್ಘಕಾಲದ ಮಧುಮೇಹ
ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಕಡಿಮೆ
ಹೆಚ್ಚಿನ ರಕ್ತದೊತ್ತಡ
ಹೆಚ್ಚು ಕೊಲೆಸ್ಟ್ರಾಲ್
ಧೂಮಪಾನ
ಗರ್ಭಾವಸ್ಥೆಯಲ್ಲಿನ ಮಧುಮೇಹಿಗಳು
ನಿಮ್ಮ ಕಣ್ಣುಗಳನ್ನು ರಕ್ಷಿಸಲು ಮತ್ತು ಮಧುಮೇಹ ತೊಡಕುಗಳನ್ನು ತಡೆಗಟ್ಟಲು, ಸ್ಥಿರವಾದ ರಕ್ತದಲ್ಲಿನ ಸಕ್ಕರೆ, ನಿಯಮಿತ ಕಣ್ಣಿನ ತಪಾಸಣೆ, ರಕ್ತದೊತ್ತಡ ನಿಯಂತ್ರಣ, ಸಮತೋಲಿತ ಪೋಷಣೆ, ದೈಹಿಕ ಚಟುವಟಿಕೆ ಮತ್ತು ಧೂಮಪಾನವನ್ನು ತಪ್ಪಿಸುವತ್ತ ಗಮನಹರಿಸಿ.
ಮಧುಮೇಹ ಕಣ್ಣಿನ ಕಾಯಿಲೆಯು ನಮಗೆ ಅರಿವಿದೆ ಬಾರದಂತೆ ಬೆಳೆಸುತ್ತವೆ. ಹೀಗಾಗಿ, ತಡೆಗಟ್ಟುವಿಕೆ ಕ್ರಮಗಳನ್ನು ಕೈಗೊಂಡರೆ ಸಮಸ್ಯೆಯಿಂದ ದೂರ ಉಳಿಯಬಹುದು. ಕಣ್ಣುಗಳು ಅಮೂಲ್ಯ. ಪ್ರತಿದಿನ ಸರಳವಾದ ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವ ಮೂಲಕ ಅವುಗಳನ್ನು ರಕ್ಷಿಸಿಕೊಳ್ಳಿ.