ಜ್ವಾಲಾ ಗುಟ್ಟಾ 
ಆರೋಗ್ಯ

ಪ್ರಸವಾನಂತರದ ಮೊದಲ ವರ್ಷ 60 ಲೀಟರ್ ಎದೆ ಹಾಲು ದಾನ ಮಾಡಿದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ! ಜ್ವಾಲಾ ಗುಟ್ಟಾ ಹೀಗೆ ಮಾಡಿದ್ಯಾಕೆ..?

ಪ್ರಸವಾನಂತರದ ಮೊದಲ ವರ್ಷದಲ್ಲಿ, ಚೆನ್ನೈ ಮತ್ತು ಹೈದರಾಬಾದ್‌ನ ಸರ್ಕಾರಿ ಆಸ್ಪತ್ರೆಗಳಿಗೆ 60 ಲೀಟರ್ ಎದೆ ಹಾಲು ದಾನ ಮಾಡಿದ್ದು, ಅದನ್ನು ಯಾಕೆ ಮಾಡಿದೆ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ.

ನವಜಾತ ಶಿಶುಗಳಿಗೆ ಎದೆ ಹಾಲು ಅತ್ಯಂತ ಪ್ರಮುಖವಾಗಿದೆ. ಇದು ಕೊಬ್ಬು, ಕಾರ್ಬೋಹೈಡ್ರೇಟ್‌ಗಳು, ಖನಿಜಗಳು ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಿದ್ದು, ಶಿಶುಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ ವಿವಿಧ ಕಾರಣಗಳಿಂದಾಗಿ ಅನೇಕ ಶಿಶುಗಳಿಗೆ ಅವರ ತಾಯಿಯ ಎದೆ ಹಾಲು ಸಿಗುತ್ತಿಲ್ಲ.

ವಿಶೇಷವಾಗಿ NICU ನಲ್ಲಿರುವಂತಹ ಮಕ್ಕಳಿಗೆ ಎದೆಹಾಲು ಕೊಡಲ್ಲ. ಇದು ಎಲ್ಲಾ ಆಸ್ಪತ್ರೆಗಳಲ್ಲಿರುವ ವಿಶೇಷ ವಿಭಾಗವಾಗಿದ್ದು, ಅವಧಿ ಪೂರ್ವ, ತೀವ್ರವಾಗಿ ಅಸ್ವಸ್ಥ ಮತ್ತು ಕಡಿಮೆ ತೂಕದ ನವಜಾತ ಶಿಶುಗಳನ್ನು ಅಲ್ಲಿ ಆರೈಕೆ ಮಾಡಲಾಗುತ್ತದೆ. ಇದನ್ನು ಪರಿಗಣಿಸಿ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರು ತಮ್ಮ ಪ್ರಸವಾನಂತರದ ಮೊದಲ ವರ್ಷದಲ್ಲಿ 60 ಲೀಟರ್ ಎದೆ ಹಾಲು ದಾನ ಮಾಡಿದ್ದಾರೆ.

ಹೀಗೆ ಮಾಡಿದ್ಯಾಕೆ ಎಂಬುದರ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಬರೆದುಕೊಂಡಿದ್ದಾರೆ. ಪ್ರಸವಾನಂತರದ ಮೊದಲ ವರ್ಷದಲ್ಲಿ, ಚೆನ್ನೈ ಮತ್ತು ಹೈದರಾಬಾದ್‌ನ ಸರ್ಕಾರಿ ಆಸ್ಪತ್ರೆಗಳಿಗೆ 60 ಲೀಟರ್ ಎದೆ ಹಾಲು ದಾನ ಮಾಡಿದ್ದು, ಅದನ್ನು ಯಾಕೆ ಮಾಡಿದೆ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ.

ದಾನವಾಗಿ ನೀಡಿದ ಕೇವಲ 100 ಮಿಲಿ ಎದೆಹಾಲಿನಿಂದ ಒಂದು ಕೆಜಿ ತೂಕದ ಪುಟ್ಟ ಮಗುವಿಗೆ ಹಲವಾರು ದಿನಗಳವರೆಗೆ ಹಾಲುಣಿಸಲು ನೆರವಾಗುತ್ತದೆ. ಹೀಗೆ ಮಾಡುವುದರಿಂದ NICU ನಲ್ಲಿರುವ ಡಜನ್ ಗಟ್ಟಲೇ ಶಿಶುಗಳಿಗೆ ನೆರವಾಗಬಹುದು. ದಾನ ನೀಡುವುದು ಸುರಕ್ಷಿತ, ಪರಿಶೀಲನೆ ಮತ್ತು ತೀರಾ ಅಗತ್ಯ" ಎಂದು ಅವರು ಬರೆದುಕೊಂಡಿದ್ದಾರೆ.

NICU ನಲ್ಲಿರುವ ಅನೇಕ ಶಿಶುಗಳಿಗೆ ತಮ್ಮ ತಾಯಿಯ ಹಾಲು ತಕ್ಷಣಕ್ಕೆ ಸಿಗಲ್ಲ. ಇದಕ್ಕೆ ಬೇರೆ, ಬೇರೆ ಕಾರಣಗಳಿರುತ್ತವೆ. ಅಂತಹ ಸಂದರ್ಭಗಳಲ್ಲಿ, ಇನ್ನೊಬ್ಬ ಮಹಿಳೆ ದಾನ ಮಾಡಿದ ಎದೆ ಹಾಲು ಶಿಶುವಿಗೆ ಪೌಷ್ಟಿಕಾಂಶವನ್ನು ಒದಗಿಸುತ್ತದೆ ಮತ್ತು ಮೊದಲ ಕೆಲವು ನಿರ್ಣಾಯಕ ದಿನಗಳಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸು ಸಹಾಯ ಮಾಡುತ್ತದೆ. ಮಕ್ಕಳು NICU ನಿಂದ ಸುರಕ್ಷಿತವಾಗಿ ಹೊರಬಂದು ತಮ್ಮ ಪೋಷಕರೊಂದಿಗೆ ಮನೆಗೆ ಹೋಗಲು ಅನುವು ಮಾಡಿಕೊಡುತ್ತದೆ.

ಒತ್ತಡ, ಅನಾರೋಗ್ಯ, ಅಪೌಷ್ಟಿಕತೆ ಮತ್ತು ಅವಧಿ ಪೂರ್ವ ಜನನದಿಂದಾಗಿ ಹಾಲು ವಿಳಂಬವಾಗಬಹುದಾದ ತಾಯಂದಿರಿಗೆ ಇದು ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

ಅವಧಿ ಪೂರ್ವ ಶಿಶುಗಳಲ್ಲಿ ನೆಕ್ರೋಟೈಸಿಂಗ್ ಎಂಟರೊಕೊಲೈಟಿಸ್ (ಮಾರಣಾಂತಿಕ ಕರುಳಿನ ಸ್ಥಿತಿ) ಸಂಭವವನ್ನು ದಾನಿಯ ಮಾನವ ಹಾಲು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

ದಾನಿಯ ಮಾನವ ಹಾಲಿನ ಪ್ರಯೋಜನಗಳು: BMJ ನಿಂದ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪಾಶ್ಚರೀಕರಿಸಿದ ದಾನಿಯ ಹಾಲನ್ನು ತಾಯಿಯ ಹಾಲಿಗೆ ಪೂರಕವಾಗಿ ಬಳಸಬಹುದು. ಇದು ಶಿಶುವಿನ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಜೀವನದ ಮೊದಲ 28 ದಿನಗಳವರೆಗೆ 10 ಮಿಲಿ/ಕೆಜಿ ಸೇವಿಸಿದರೆ ಮಗುವಿಗೆ ಸೆಪ್ಸಿಸ್ ಬರುವ ಅಪಾಯವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ISIS ಉಗ್ರ ಸಂಘಟನೆಗೆ ಭಾರೀ ಹೊಡೆತ: ಅಮೆರಿಕಾ-ನೈಜೀರಿಯಾ ಜಂಟಿ ಕಾರ್ಯಾಚರಣೆಯಲ್ಲಿ ಉನ್ನತ ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿ ಹತ್ಯೆ..!

ಮಧ್ಯಪ್ರಾಚ್ಯ ಸಂಘರ್ಷ: ಅಮೆರಿಕಾ ನಂಬಿಕೆಗೆ ಅರ್ಹವಲ್ಲ, ಭಾರತ ಬಂದರೆ ಶಾಂತಿ ಸಾಧ್ಯ; ಇರಾನ್

ಮಹಿಳೆಯ ಸೋಗು, ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಗೆ ಗಾಳ; ಭೇಟಿ ಮಾಡಲು ಕರೆಸಿ ದರೋಡೆ; ಯುವಕರ ಬಂಧನ!

BLR Airport : ಮತ್ತೊಂದು ಮೈಲಿಗಲ್ಲು ಸಾಧಿಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ!

ಹಾಸನ: ಟೈರ್ ಸ್ಫೋಟದಿಂದ ಖಾಸಗಿ ಸ್ಲೀಪರ್​ ಬಸ್ ಬೆಂಕಿಗಾಹುತಿ, ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರು!

SCROLL FOR NEXT