ಮುಂಬೈ: ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಶ್ರೀಕ್ಷೇತ್ರ ಅಡಪಾಡಿ ಶ್ರೀ ಉಮಾಮಹೇಶ್ವರ ಶ್ರೀ ದುರ್ಗಾಪರಮೇಶ್ವರಿ ದೇವಳದ ಧರ್ಮದರ್ಶಿ ಪುಂಡಲೀಕ ನಾಯಕ್ ಅವರನ್ನು ಮುಂಬೈನಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು. ಮುಂಬೈನ ಜಿಎಸ್ಬಿ ಸಭಾ ಭವನದಲ್ಲಿ ಜರುಗಿದ 'ರಾಜಾಪುರ್ ಸಾರಸ್ವತ್ ಉತ್ಸವ್- 2014' ಬೃಹತ್ ಸಮಾವೇಶದಲ್ಲಿ ಸಂಘದ ಅಧ್ಯಕ್ಷ ಪ್ರಭಾಕರ್ ಡಿ. ಬೋರ್ಕರ್ ನಾಯಕ್ ಅವರನ್ನು ಸನ್ಮಾನಿಸಿದರು. ಮುಂಬೈ ರಾಜಾಪುರ ಸಾರಸ್ವತ ಸಂಘ, ರಾಜಾಪುರ ಸಾರಸ್ವತ ಮಹಿಳಾ ಮಂಡಲ, ರಾಜಾಪುರ ಸಾರಸ್ವತ ಯುವ ವೃಂದ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಓಂ ಶಕ್ತಿ ಇಂಕ್ ಅಮೆರಿಕ ಇದರ ಸಂಸ್ಥಾಪಕ ಪಿ.ವಿ. ಪ್ರಭು, ಮಹಿಳಾ ಮಂಡಳಿ ಅಧ್ಯಕ್ಷೆ ಸ್ಮಿತಾ ಪಾಟ್ಕರ್, ಕಾರ್ಯದರ್ಶಿ ಪೂಜಾ ಕಾಮತ್, ಯುವವೃಂದದ ಅಧ್ಯಕ್ಷ ರಾಜೇಶ್, ಪ್ರಭು ಉಪಸ್ಥಿತರಿದ್ದರು.