ಸುದ್ದಿಗಳು

ಕರ್ನಾಟಕ ಚುನಾವಣೆ ಫಲಿತಾಂಶ: ಬಿಜೆಪಿಯ ಋಣಾತ್ಮಕ ಮತ್ತು ಕೋಮುವಾದಿ ರಾಜಕಾರಣದ ಅಂತ್ಯ ಆರಂಭ; ಅಖಿಲೇಶ್ ಯಾದವ್

Ramyashree GN

ಲಖನೌ: ಕರ್ನಾಟಕದಿಂದ ಕಾಂಗ್ರೆಸ್ ಗೆಲುವನ್ನು ಸೂಚಿಸುವ ವಿಧಾನಸಭಾ ಚುನಾವಣಾ ಟ್ರೆಂಡ್‌ಗಳು ಬಿಜೆಪಿಯ ನಕಾರಾತ್ಮಕ, ಕೋಮುವಾದಿ ಮತ್ತು ಭ್ರಷ್ಟ ರಾಜಕಾರಣದ 'ಅಂತ್ಯ' ಪ್ರಾರಂಭವಾಗಿದೆ ಎಂಬ ಸಂದೇಶವನ್ನು ನೀಡುತ್ತವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಶನಿವಾರ ಹೇಳಿದರು.

2024ರ ಲೋಕಸಭೆ ಚುನಾವಣೆಗೆ ಮುನ್ನ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸೆಮಿಫೈನಲ್ ಎಂದೇ ಬಿಂಬಿಸಲಾಗಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಶನಿವಾರ ಮತ ಎಣಿಕೆ ನಡೆಯುತ್ತಿದೆ. ಭಾರತೀಯ ಚುನಾವಣಾ ಆಯೋಗದ ಪ್ರಕಾರ, ಕರ್ನಾಟಕದಲ್ಲಿ ಬಿಜೆಪಿ 64 ರಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 125 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 

ಹಿಂದಿಯಲ್ಲಿ ಟ್ವೀಟ್ ಮಾಡಿರುವ ಯಾದವ್, 'ಕರ್ನಾಟಕದಿಂದ ಬಂದ ಸಂದೇಶ ಏನೆಂದರೆ, ಬಿಜೆಪಿಯ ನಕಾರಾತ್ಮಕ, ಕೋಮುವಾದಿ, ಭ್ರಷ್ಟ, ಶ್ರೀಮಂತ, ಮಹಿಳಾ ವಿರೋಧಿ, ಯುವ ವಿರೋಧಿ, ಸಾಮಾಜಿಕ ವಿಭಜಕ, ಪ್ರಚಾರ, ವ್ಯಕ್ತಿ ಕೇಂದ್ರಿತ ರಾಜಕಾರಣದ ಅಂತ್ಯ ಶುರುವಾಗಿದೆ' ಎಂದಿದ್ದಾರೆ.

ಇದು ಹಣದುಬ್ಬರ, ನಿರುದ್ಯೋಗ, ಭ್ರಷ್ಟಾಚಾರ ಮತ್ತು ದ್ವೇಷದ ವಿರುದ್ಧ ಹೊಸ ಸಕಾರಾತ್ಮಕ ಭಾರತ ನಿರ್ಮಾಣಕ್ಕೆ ಕಟ್ಟುನಿಟ್ಟಾದ ಆದೇಶವಾಗಿದೆ ಎಂದು ಅವರು ಹೇಳಿದರು.

SCROLL FOR NEXT