ನವದೆಹಲಿ: ಕರ್ನಾಟಕದಲ್ಲಿ ಬಿರುಗಾಳಿ ಎಬ್ಬಿಸಿದ್ದ ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಿವಿಧ ಕಂಪನಿಗಳ 112 ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಸಿಬಿಐನ ಎಫ್ಐಆರ್ ಆಧರಿಸಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ತಮಿಳುನಾಡಿನ ಕೊಯಂಬತ್ತೂರು ಮೂಲದ 4 ಸಂಸ್ಥೆಗಳ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿ ಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ 2007ರಲ್ಲಿ ಲಾಟರಿ ಉದ್ಯಮ ನಿಷೇಧಿಸಲಾಗಿತ್ತು. ಆದರೆ ಆರೋಪಿಗಳಾದ ಎಸ್. ಮಾರ್ಟಿನ್ ಮತ್ತಿತರು ಪೊಲೀಸ್ ಅಧಿಕಾರಿಗಳ ಸಹಾಯದಿಂದ ದಂಧೆ ನಡೆಸುತ್ತಿದ್ದರು.
ತಮಿಳುನಾಡಿನ ಡೈಸನ್ ಲ್ಯಾಂಡ್ ಆಂಡ್ ಡೆವಲಪ್‌ಮೆಂಡ್, ಚಾರ್ಲ್ಸ್ ರಿಯಲ್ಟರ್, ಮಾರ್ಟಿನ್ ಮಲ್ಟಿ ಪ್ರೊಜೆಕ್ಸ್, ಡೈಸನ್ ಲಕ್ಷುರಿ ವಿಲ್ಲಾಸ್ ಎಂಬ ಸಂಸ್ಥೆಗಳ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.