ರಾಜ್ಯ

ತನಿಖೆ ಮುಗಿಯುವವರೆಗೂ ಮಾರ್ಚ್ 21ರ ರಸಾಯನಶಾಸ್ತ್ರ ಉತ್ತರ ಪತ್ರಿಕೆಗಳ ಸಂರಕ್ಷಣೆ

Guruprasad Narayana

ಬೆಂಗಳೂರು: 2016 ಮಾರ್ಚ್ 21 ರಂದು ಪರೀಕ್ಷೆ ನಡೆದು ನಂತರ ಪ್ರಶ್ನೆಪತ್ರಿಕೆ ಬಯಲಾಗಿದ್ದಕ್ಕೆ ರದ್ದಾದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಹೊರಹಾಕದೆ, ಸಿಐಡಿ ತನಿಖೆ ಮುಗಿಯುವವರೆಗೂ ಸಂರಕ್ಷಿಸಲು ಪದವು ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಸಾಮಾನ್ಯವಾಗಿ ಪರೀಕ್ಷೆಯ ಫಲಿತಾಂಶ ಘೋಷಣೆಯಾದ ಮೂರು ತಿಂಗಳ ನಂತರ ಇಲಾಖೆ ಉತ್ತರ ಪತ್ರಿಕೆಗಳನ್ನು ರದ್ದಿಗೆ ವಿಲೇವಾರಿ ಮಾಡಲಾಗುತ್ತದೆ. ಆದರೆ ಪ್ರಶ್ನೆಪತ್ರಿಕೆ ಬಯಲಾಗಿರುವುದನ್ನು ಸಿ ಐ ಡಿ ತನಿಖೆ ನಡೆಸುತ್ತಿರುವುದರಿಂದ, ಈ ಉತ್ತರ ಪತ್ರಿಕೆಗಳನ್ನು ಪರೀಕ್ಷಿಸದೆ ಹೋದರೂ, ಅವುಗಳನ್ನು ಸುರಕ್ಷಿತವಾಗಿ ಕಾಯ್ದಿರಿಸಲಾಗಿದೆ. ೧.೮ ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದರು.

"ಈ ಪ್ರಕರಣದಲ್ಲಿ ಬಂಧನರಾಗಿರುವ ಪ್ರಮುಖ ಆರೋಪಿಗಳ ಮಕ್ಕಳು ಕೂಡ ಮಾರ್ಚ್ ೨೧ ರ ಪರೀಕ್ಷೆ ಬರೆದಿದ್ದಾರೆ. ತನಿಖೆ ಮುಂದುವರೆದಿರುವುದರಿಂದ ಈ ಅಪರಾಧಕ್ಕೆ ಉತ್ತರ ಪತ್ರಿಕೆಗಳು ಸಾಕ್ಷಿಯಾಗುವ ಸಾಧ್ಯತೆಯಿದೆ. ಆದುದರಿಂದ ಇವುಗಳನ್ನು ಸುರಕ್ಷಿತವಾಗಿ ಕಾಯುತ್ತೇವೆ" ಎಂದು ಮೂಲಗಳು ತಿಳಿಸಿವೆ.

ಆದಾಯದ ಮೂಲ
ಉತ್ತರ ಪತ್ರಿಕೆಗಳನ್ನು ಮರುಬಳಕೆಗಾಗಿ ಸಂಸ್ಕರಿಸುವುದರಿಂದ ಪ್ರತಿ ಪರೀಕ್ಷೆಯಿಂದ ಇಲಾಖೆಗೆ ೨೫ ರಿಂದ ೩೦ ಲಕ್ಷ ಆದಾಯ ಬರುತ್ತದಂತೆ. ಕಳೆದ ವರ್ಷ ನಡೆದ ಪರೀಕ್ಷೆಯ ಉತ್ತರ ಪತ್ರಿಕೆಗಳಿಂದಲೇ ಇಲಾಖೆ ೨೭ ಲಕ್ಷ ಗಳಿಸಿದೆಯಂತೆ.

ಪರೀಕ್ಷೆ ಬರೆದಿದ್ದ ಉತ್ತರಪತ್ರಿಕೆಗಳನ್ನು ಮಾರಿದ್ದಕ್ಕೆ ೨೧.೭೮ ಕೋಟಿ ಆದಾಯ ಮತ್ತು ಬಳಸದ ಉತ್ತರ ಪತ್ರಿಕೆಗಳಿಂದ ೬.೯೫ ಲಕ್ಷ ಹುಟ್ಟಿದೆಯಂತೆ. ಬರೆದಿದ್ದ ಪ್ರಶ್ನೆಪತ್ರಿಕೆಗಳು ೩೪೫೦೦ ಕೆ ಜಿ ತೂಗಿದ್ದು, ಕೆಜಿಗೆ ೧೬.೨೦ ರೂನಂತೆ ಮಾರಲಾಗಿದೆ ಹಾಗೂ ೪೦,೯೦೫ ಬಳಸದ ಉತ್ತರ ಪತ್ರಿಕೆಗಳನ್ನು ೧೭ ರೂ ಕೆ ಜಿ ಗೆ ಮಾರಲಾಗಿದೆ.

SCROLL FOR NEXT