ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಕ್ಯಾಂಟರ್ ಹರಿದು ಮನೆ ಮುಂದೆ ಮಲಗಿದ್ದ ದಂಪತಿ ಸಾವು

ಬೇಸಿಗೆ ಹಬೆ ತಾಳಲಾರದೆ ಮನೆ ಹೊರಗೆ ಮಲಗಿದ್ದ ದಂಪತಿ ಮೇಲೆ ಕ್ಯಾಂಟರ್ ಹರಿದ ಪರಿಣಾಮ ಇಬ್ಬರು...

ರಾಮಕೃಷ್ಣಪ್ಪ(55) ಮತ್ತು ಅವರ ಪತ್ನಿ ರತ್ನಮ್ಮ(45)
Mainashree
Updated On : 18 Apr 2016, 9:57 am
ಬೆಂಗಳೂರು: ಬೇಸಿಗೆ ಹಬೆ ತಾಳಲಾರದೆ ಮನೆ ಹೊರಗೆ ಮಲಗಿದ್ದ ದಂಪತಿ ಮೇಲೆ ಕ್ಯಾಂಟರ್ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಜಾನುಕುಂಟೆ ಸಮೀಪದಲ್ಲಿ ಶನಿವಾರ ರಾತ್ರ ನಡೆದಿದೆ.
ರಾಜಾನುಕಂಟೆ ಸಮೀಪದ ಶಾನಭೋಗನಹಳ್ಳಿಯ ಬಸವಲಿಂಗಪ್ಪ ಬಡವಾಣೆಯ ರಾಮಕೃಷ್ಣಪ್ಪ(55) ಮತ್ತು ಅವರ ಪತ್ನಿ ರತ್ನಮ್ಮ(45) ಮೃತಪಟ್ಟ ದುರ್ದೈವಿಗಳು. 30 ವರ್ಷಗಳಿಂದ ಇದೇ ಪ್ರದೇಶದಲ್ಲಿ ವಾಸವಿದ್ದ ಈ ದಂಪತಿ ಕೂಲಿ ಕಾರ್ಮಿಕರು. 
ಕುಡಿದ ಅಮಿಲಿನಲ್ಲಿ ಕ್ಯಾಂಟರ್ ಚಾಲಕ ವಾಹನ ಚಲಾಯಿಸಿದ್ದು, ಕ್ಯಾಂಟರ್ ಚಕ್ರ ದಂಪತಿಗಳ ತಲೆ ಮೇಲೆ ಹರಿದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Advertisement

ಅಪಘಾತ ಮಾಡಿದ ಟಾಂಕರ್ ಚಾಲಕ ಕ್ಯಾಂಟರ್ ಸಮೇತ ಪರಾರಿಯಾಗಿದ್ದಾನೆ. ಕ್ಯಾಂಟರ್ ನಂ. ಕೆಎ-09, 3531. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement