ತುಮಕೂರು ವಿವಿ (ಸಂಗ್ರಹ ಚಿತ್ರ) 
ರಾಜ್ಯ

ತುಮಕೂರು ವಿವಿಗೆ ನೂತನ ಕ್ಯಾಂಪಸ್

12 ವರ್ಷ ಹಳೆಯ ತುಮಕೂರು ವಿಶ್ವವಿದ್ಯಾಲಯಕ್ಕೆ ಕೊನೆಗೂ ನೂತನ ಕ್ಯಾಂಪಸ್ ಪ್ರಾಪ್ತಿಯಾಗಲಿದ್ದು, ಇನ್ನು ಐದು ವರ್ಷಗಳ ಅವಧಿಯಲ್ಲಿ ಬಿದರಕಟ್ಟೆಯಲ್ಲಿ ಸಂಪೂರ್ಣ ಪ್ರಮಾಣದ ನೂತನ ಕ್ಯಾಂಪಸ್ ತಲೆ ಎತ್ತಲಿದೆ..

ತುಮಕೂರು: 12 ವರ್ಷ ಹಳೆಯ ತುಮಕೂರು ವಿಶ್ವವಿದ್ಯಾಲಯಕ್ಕೆ ಕೊನೆಗೂ ನೂತನ ಕ್ಯಾಂಪಸ್ ಪ್ರಾಪ್ತಿಯಾಗಲಿದ್ದು, ಇನ್ನು ಐದು ವರ್ಷಗಳ ಅವಧಿಯಲ್ಲಿ ಬಿದರಕಟ್ಟೆಯಲ್ಲಿ ಸಂಪೂರ್ಣ ಪ್ರಮಾಣದ ನೂತನ ಕ್ಯಾಂಪಸ್ ತಲೆ ಎತ್ತಲಿದೆ.

ತುಮಕೂರಿನಿಂದ ಸುಮಾರು 21 ಕಿ.ಮೀ ದೂರದಲ್ಲಿರುವ ಬಿದರಕಟ್ಟೆಯಲ್ಲಿ ಈ 240 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಕ್ಯಾಂಪಸ್ ತಲೆ ಎತ್ತಿತ್ತಿದ್ದು, 99 ವರ್ಷಗಳ ಅವಧಿಗೆ ಸರ್ಕಾರ ಈ ಜಾಗವನ್ನು ವಿವಿಗೆ ಭೋಗ್ಯಕ್ಕೆ ನೀಡಿದೆ. ಈಗಾಗಲೇ ತುಮಕೂರು ವಿವಿ ವತಿಯಿಂದ ಸರಕಾರದಿಂದ ನೀಡಿರುವ 240 ಎಕರೆ ಪ್ರದೇಶದಲ್ಲಿದ್ದ ನೀಲಗಿರಿ ಮರಗಳನ್ನು ತೆಗೆಯುವ ಕೆಲಸ ಆರಂಭಗೊಂಡಿದ್ದು, ಉತ್ತಮ ಆರ್ಕಿಟೆಕ್ಟ್‌ಗಳನ್ನು ಗುರುತಿಸಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ಕ್ಯಾಂಪಸ್ ನೀಲನಕ್ಷೆ ತಯಾರಿಸಿ ಸರಕಾರಕ್ಕೆ ಪಸ್ತಾವನೆ ಸಲ್ಲಿಸುವಂತೆ ಕುಲಪತಿಗಳು ಮತ್ತು ಕುಲಸಚಿವರಿಗೆ ಸೂಚನೆ ನೀಡಲಾಗಿದೆ.

ಇದೇ ವೇಳೆ ವಿವಿ ದಶಮಾನೋತ್ಸವ ನೆನಪಿಗೆ ದಶಮಾನೋತ್ಸವ ಭವನ ಮತ್ತು ವಿವಿಯ ಪ್ರಧಾನ ದ್ವಾರ ನಿರ್ಮಾಣಕ್ಕಾಗಿ 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ವಿವಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರತ್ಯೇಕ 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಪರಿಶಿಷ್ಠ ಪಂಗಡ ಮತ್ತು ಪರಿಶಿಷ್ಟ ಜಾತಿಗೆ ಸೇರಿದೆ ವಿದ್ಯಾರ್ಥಿಗಳಿಗಾಗಿಯೇ 17.5 ಕೋಟಿ ವೆಚ್ಚದಲ್ಲಿ 3 ಹಾಸ್ಟೆಲ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ.  ವಿವಿಯ ಉಪಕಲುಪತಿ ಎಹೆಚ್ ರಾಜಾಸಾಬ್ ಅವರು ಹೇಳುವಂತೆ, ವಿವಿ ಕ್ಯಾಂಪಸ್ ಅಡಿಗಲ್ಲು ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಉನ್ನತ ಶಿಕ್ಷಣ ಸಚಿವ ಟಿಬಿ ಜಯಚಂದ್ರ ಅವರು ಕ್ಯಾಂಪಸ್ ನಿರ್ಮಾಣ ಪ್ರಕ್ರಿಯೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ ಎಂದು ಹೇಳಿದರು.

ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಸ್ನಾತ ಕೋತ್ತರ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಸೂಕ್ಷ್ಮ ಜೀವಿಶಾಸ್ತ್ರ ಹಾಗೂ ಜೈವಿಕ ತಂತ್ರಜ್ಞಾನ ಶಾಸ್ತ್ರ ವಿಭಾಗಗಳನ್ನು ತೆರೆಯಲು ಅನುಮೋದನೆ ನೀಡಲಾಗಿದೆ. ಇನ್ನು ಹೊಸದಾಗಿ ಅನುಮತಿ 11 ಕೋರ್ಸ್‌ಗಳ ಪೈಕಿ ಎಂಇಡಿ, ಎಂಪಿಇಡಿ, ಎಂಪಿಎ ಹಾಗೂ ಎಂ.ಎಸ್.ಕಮ್ಯೂನಿಕೇಷನ್ ಕೋರ್ಸ್‌ಗಳ ಆರಂಭಕ್ಕೂ ಈ ಹಿಂದಿನ ಸಭೆಯಲ್ಲಿ ಸಹಮತ ವ್ಯಕ್ತಪಡಿಸಲಾಗಿತ್ತು ಎಂದು ರಾಜಾಸಾಬ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT