ಬಾಗಲಕೋಟೆ: ಬರದಿಂದ ಕಂಗೆಟ್ಟ ರೈತ ನೀರನ್ನು ಕದಿಯುವಂತಹ ಪರಿಸ್ಥಿತಿ ಎದುರಾಗಿರುವುದು ವಿಪರ್ಯಾಸ.
ಬರದಿಂದಾಗಿ ನೀರಿನ ಕೊರೆತೆ ಹೆಚ್ಚಾಗಿದ್ದು, ಜಲಾಶಯಗಳಲ್ಲಿ ಉಳಿದಿರುವ ನೀರನ್ನು ಎಲ್ಲರಿಗೂ ಪೂರೈಕೆ ಮಾಡಲು ಕಷ್ಟವಿದೆ, ಹೀಗಿರಬೇಕಾದರೆ ಇಲ್ಲಿನ ರೈತರು ಜಲಾಶಯದ ನೀರನ್ನು ಕದ್ದು ತಮ್ಮ ಬೆಳೆಗಳಿಗೆ ಬಳಸಿಕೊಂಡಿದ್ದಾರೆ.
ಕಳೆದ ಒಂದು ವಾರದಿಂದ ಬಾಗಲಕೋಟೆ ಪೊಲೀಸರು ನಾಲ್ಕು ಡೀಸೆಲ್ ಪಂಪ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಮುದೋಳ್ ಪ್ರದೇಶದ ಕೆಲ ರೈತರು ಡೀಸೆಲ್ ಪಂಪ್ ಸೆಟ್ ಗಳನ್ನು ಬಳಸಿ ನೀರು ತೆಗೆದುಕೊಂಡು ತಮ್ಮ ಬೆಳೆಗಳಿಗೆ ಬಳಸಿಕೊಳ್ಳುತ್ತಿದ್ದರು.
ಬಾಗಲಕೋಟೆಯಲ್ಲಿ ಕುಡಿಯುವ ನೀರಿಗೆ ಬಾರಿ ಬೇಡಿಕೆ ಇದೆ. ಬೆಳಗಾವಿ ಜಿಲ್ಲೆಯ ಹಿಡ್ ಕಲ್ ಡ್ಯಾಂ ನಲ್ಲಿ ಕೇವಲ 108 ಟಿಎಂಸಿ ನೀರು ಮಾತ್ರ ಪಡೆದಿದೆ. ಡ್ಯಾಂನಿಂದ ನೀರನ್ನು ಬಿಡುಗಡೆ ಮಾಡಲಾಗಿದ್ದು 15 ಬ್ಯಾರೇಜ್ ಗಳು ತುಂಬಿಕೊಂಡಿತ್ತು. ಈ ರೀತಿ ಭರ್ತಿಯಾದ ಬ್ಯಾರೇಜ್ ಗಳಿಂದ ಪಂಪ್ ಸೆಟ್ ಗಳ ಮೂಲಕ ನೀರನ್ನು ತೆಗೆದುಕೊಂಡು ಕಬ್ಬು ಬೆಳೆಗೆ ಬಳಸಿಕೊಳ್ಳುತ್ತಿದ್ದರು.
ಹೆಚ್ಚಾಗಿ ರಾತ್ರಿ ವೇಳೆ ಈ ರೈತರು ನೀರನ್ನು ಜಲಾಶಯದಿಂದ ಅಕ್ರಮವಾಗಿ ಶೇಖರಿಸುತ್ತಿದ್ದರು.
ರೈತರಿಂದ ಪಂಪ್ ಸೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ರೀತಿ ಮಾಡದಂತೆ ಹೆಚ್ಚರಿಸಲಾಗಿದೆ ಎಂದು ಬಾಗಲಕೋಟೆಯ ಉಪ ಆಯುಕ್ತ ಪಿ ಎ ಮೆಘನ್ನಾವರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics