ಸಾಂದರ್ಭಿಕ ಚಿತ್ರ 
ರಾಜ್ಯ

ಹನಿಟ್ರ್ಯಾಪ್ ದಂಧೆಯಲ್ಲಿ ತೊಡಗಿದ್ದ 3 ಪೊಲೀಸರ ಬಂಧನ

ಸುಂದರ ಯುವತಿಯರನ್ನು ಬಳಸಿಕೊಂಡು ಶ್ರೀಮಂತರಿಂದ ಹಣ ಸುಲಿಗೆ ಮಾಡುವ ಹನಿಟ್ರ್ಯಾಪ್ ದಂಧೆಯಲ್ಲಿ ತೊಡಗಿದ್ದ...

ಬೆಂಗಳೂರು: ಸುಂದರ ಯುವತಿಯರನ್ನು ಬಳಸಿಕೊಂಡು ಶ್ರೀಮಂತರಿಂದ ಹಣ ಸುಲಿಗೆ ಮಾಡುವ ಹನಿಟ್ರ್ಯಾಪ್ ದಂಧೆಯಲ್ಲಿ ತೊಡಗಿದ್ದ ಮೂವರು ಪೊಲೀಸರು ಸಿಕ್ಕಿಬಿದಿದ್ದಾರೆ. 
ಹನಿಟ್ರ್ಯಾಪ್ ದಂಧೆಯಲ್ಲಿ ತೊಡಗಿದ್ದ ಮೂವರು ಪೊಲೀಸರು ಮತ್ತು ಇಬ್ಬರು ಯುವತಿಯರನ್ನು ಬುಧವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 
ಸಂಜಯನಗರ ಠಾಣೆ ಪೇದೆಗಳಾದ ಯತೀಶ್ ಅಲಿಯಾಸ್ ಮೊಹಮ್ಮದ್ ಇಲಿಯಾಜ್, ಬಸವರಾಜು, ಪೀಣ್ಯ ಠಾಣೆ ಕಾನ್ ಸ್ಟೇಬಲ್ ವಿಜಯ್ ಕುಮಾರ್, ಯಾಸ್ಮಿನ್ ತಾಜ್ ಅಲಿಯಾಸ್ ನಿಶಾ ಹಾಗೂ ಕ್ರಿಸ್ಟಿನಾ ಅಲಿಯಾಸ್ ಟೀನಾ ಎಂಬುವವರನ್ನು ಬಂಧಿಸಲಾಗಿದೆ. 
ಬಂಧಿತ ಆರೋಪಿಗಳು ನಿವೃತ್ತ ಉಪ ತಹಶೀಲ್ದಾರ್ ಮುಂದೆ ಯುವತಿ ಅರೆ ಬೆತ್ತಲಾಗಿದ್ದ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡು, ಹಣ ಕೊಡದಿದ್ದರೆ ವೇಶ್ಯಾವಾಟಿಕೆ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಸಿ ಅವರಿಂದ ಸುಲಿಗೆ ಮಾಡಿದ್ದರು. ಬಂಧಿತರಿಂದ ಏಳು ಮೊಬೈಲ್ ಗಳು, ಗುರುತಿನ ಚೀಟಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ಅಧಿಕಾರಿ ತಿಳಿಸಿದ್ದಾರೆ.
ಘಟನೆ ಹಿನ್ನಲೆ: ಏಪ್ರಿಲ್ 17ರಂದು ಯಾಸ್ಮಿನ್ ನಿವೃತ್ತ ಉಪತಹಸಿಲ್ದಾರ್ ಆರ್ ವೆಂಕಟಪ್ಪ ಅವರಿಗೆ ಕರೆ ಮಾಡಿ ಭೂ ವ್ಯವಹಾರದ ಬಗ್ಗೆ ಮಾತನಾಡಲು ಮನೆಗೆ ಕರೆದಿದ್ದಳು. ಆದರೆ ಇದಕ್ಕೆ ವೆಂಕಟಪ್ಪ ಲಕ್ಷ್ಯಕೊಡಲಿಲ್ಲ. ಈ ಹಿನ್ನಲೆಯಲ್ಲಿ ಪದೇ ಪದೇ ಕರೆ ಮಾಡಿದ ಯಾಸ್ಮಿನ್ ತಾನು ವಾಸವಾಗಿರುವ ಅಪಾರ್ಟ್ ಮೆಂಟ್ ಗೆ ಬರಲು ಹೇಳಿದ್ದಳು. ವೆಂಕಟಪ್ಪ ಬರುವುದಾಗಿ ತಿಳಿಸಿದ್ದಾರೆ. ಆಗ ಯಾಸ್ಮಿನ್ ಮೂವರು ಪೇದೆಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ವೆಂಕಟಪ್ಪ ಬರುವ ಅಷ್ಟರಲ್ಲಿ ಕೋಣೆಯಲ್ಲಿ ಕ್ಯಾಮೆರಾ ಅಳವಡಿಸಿದ್ದಾರೆ. ವೆಂಕಟಪ್ಪ ಬರುತ್ತಿದ್ದಂತೆ ಅರೆ ನಗ್ನಳಾದ ಯಾಸ್ಮಿನ್, ಲೈಂಗಿಕ ಕ್ರಿಯೆಗೆ ಪ್ರಚೋದಿಸಿದ್ದಳು. ಈ ವೇಳೆ ಪೇದೆಗಳು ಮನೆಗೆ ನುಗ್ಗಿದ್ದಾರೆ. ನೀವು ಈಗ ರು.2 ಲಕ್ಷ ನೀಡದಿದ್ದಲೆ ವೇಶ್ಯಾವಾಟಿಕೆ ಆರೋಪದಡಿ ಬಂಧಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. 
ಆಗ ತಮ್ಮ ಬಳಿ ಇದ್ದ ರು.25,000 ಹಣವನ್ನು ಪೊಲೀಸರಿಗೆ ನೀಡಿದ ವೆಂಕಟಪ್ಪ ಇನ್ನುಳಿದ ಹಣವನ್ನು ಇನ್ನೆರಡು ದಿನಗಳಲ್ಲಿ ನೀಡುವುದಾಗಿ ತಿಳಿಸಿ ಹೊರ ಬಂದಿದ್ದಾರೆ. ನಂತರ ಕೊಡಿಗೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಠಾಣೆಯಿಂದ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದೆ. ಸಿಸಿಬಿ ಪೊಲೀಸರಿಗೆ ವೆಂಕಟಪ್ಪ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. ಸಿಸಿಬಿ ಪೊಲೀಸರು ವೆಂಕಟಪ್ಪನಿಂದ ಮೂವರು ಪೊಲೀಸರಿಗೆ ಕರೆ ಮಾಡಿಸಿ, ಇನ್ನುಳಿದ ಹಣ ನೀಡುವುದಾಗಿ ತಿಳಿಸಿ ಎಲ್ಲಿ ಬರೇಬೇಕು ಎಂದು ಕೇಳಿದ್ದಾರೆ. ಅವರು ತಿಳಿಸಿದ ಜಾಗಕ್ಕೆ ಪೇದೆಗಳು ತೆರಳಿದಾಗ ಸಿಸಿಬಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. 
ಬಂಧಿತ ಬಸವರಾಜು ಮೊದಲು ಸಿಸಿಬಿಯಲ್ಲಿ ಕಾರ್ಯ ನಿರ್ವಹಿಸಿದ್ದ. ಹೀಗಾಗಿ ಹನಿ ಟ್ರ್ಯಾಪಿಂಗ್ ಹಾಗೂ ನಗರದಲ್ಲಿ ನಡೆಯುವ ವೇಶ್ಯಾವಾಟಿಕೆ ದಂಧೆಗಳ ಬಗ್ಗೆ ಮಾಹಿತಿ ಇತ್ತು. ಪ್ರಕರಣವೊಂದರ ವಿಚಾರಣೆ ವೇಳೆ ಯಾಸ್ಮಿನ್ ಪರಿಚಯವಾಗಿತ್ತು. ಆಕೆಯನ್ನು ಬಳಸಿಕೊಂಡು ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!