ರಾಜ್ಯ

ನಗರದಲ್ಲಿ ಪ್ಲಾಸ್ಟಿಕ್ ನಿಷೇಧ: ಮಾರಾಟಗಾರರ ಅಸಮಾಧಾನ

Manjula VN

ಬೆಂಗಳೂರು: ನಗರದಲ್ಲೆಡೆ ಪ್ಲಾಸ್ಟಿಕ್ ನಿಷೇಧ ಮಾಡಿರುವುದು ಮಾರಾಟಗಾರರಿಗೆ ತಲೆನೋವಾಗಿ ಪರಿಣಮಿಸಿದ್ದು, ನಿಷೇಧಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಹಣ್ಣುಗಳು ಹಾಗೂ ಇನ್ನಿತರೆ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಮಾರುಕಟ್ಟೆಯ ಕೆಲವು ಮಾರಾಟಗಾರರು ಕವರ್ ಗಳನ್ನು ತಮ್ಮ ಸೀರೆ ಹಾಗೂ ಹಣ್ಣುಗಳ ಕೆಳಗೆ ಬಚ್ಚಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ.

ಪ್ಲಾಸ್ಟಿಕ್ ನಿಷೇಧಕ್ಕೆ ಕೆಲವು ಮಾರಾಟಗಾರರು ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ನಿಷೇಧವನ್ನು ಪರಿಪಾಲಿಸದೆ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

ಪ್ಲಾಸ್ಟಿಕ್ ನಿಷೇಧಕ್ಕೆ ಕುರಿತಂತೆ ಹಣ್ಣು ಮಾರಾಟಗಾರನೊಬ್ಬ ಮಾತನಾಡಿದ್ದು, ನಾವು ಉಚಿತವಾಗಿ ಬಟ್ಟೆ ಬ್ಯಾಗ್ ಗಳನ್ನು ನೀಡುತ್ತಿದ್ದೇವೆ. ಇದರು ಸರ್ಕಾರಕ್ಕೆ ಹಾಗೂ ಪರಿಸರಕ್ಕೆ ಸಹಾಯಕವಾಗುತ್ತದೆ. ಪ್ಲಾಸ್ಟಿಕ್ ನಿಷೇಧಕ್ಕೆ ನಮ್ಮ ಬೆಂಬಲವಿದೆ ಎನ್ನುತ್ತಲೇ ಉತ್ತರಿಸಿದ್ದಾರೆ. ಆದರೆ, ಮತ್ತೊಂದೆಡೆ ಗ್ರಾಹಕರೊಬ್ಬರಿಗೆ ಬಚ್ಚಿಟ್ಟುಕೊಂಡಿದ್ದ ಕವರ್ ವೊಂದನ್ನು ತೆಗೆದು ಹಣ್ಣುಗಳನ್ನು ಮಾರಾಟ ಮಾಡಿದರು.

ಇನ್ನು ಹಣ್ಣು ಹಾಗೂ ಹೂವು ಮಾರಟಗಾರರಾಗಿರುವ ಲಕ್ಷ್ಮಮ್ಮ ಎಂಬುವವರು ಮಾತನಾಡಿ, ಪರಿಸರ ಸ್ನೇಹಿ ನಡೆಯನ್ನು ಬೆಂಬಲಿಸಿ ನಾನು ನನ್ನ ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದೇನೆಂದು ಬೇಸಕ ವ್ಯಕ್ತಪಡಿಸಿದ್ದಾರೆ.

ಪ್ಲಾಸ್ಟಿಕ್ ಬ್ಯಾಗ್ ಗಳಿಂದ ಯಾವುದೇ ತೊಂದರೆಯಿಲ್ಲ. ಕೊಳ್ಳಲು ಬರುವ ಗ್ರಾಹಕರು ಬ್ಯಾಗ್ ಗಳನ್ನು ತರುವುದಿಲ್ಲ. ಹೀಗಾಗಿ ಕವರ ಗಳು ಉಪಯೋಗವಾಗುತ್ತದೆ. ಹಣ್ಣು ಹಾಗೂ ಹೂವುಗಳನ್ನು ಕೊಳ್ಳಲು ಬರುವ ಗ್ರಾಹಕರು ದುಬಾರಿ ಬೆಲೆಯ ಬ್ಯಾಗ್ ಗಳನ್ನು ಕೊಳ್ಳುವುದಿಲ್ಲ. ಬ್ಯಾಗ್ ಗಳಿಲ್ಲದ ಕಾರಣ ಗ್ರಾಹಕರು ಕೊಳ್ಳದೆಯೇ ಹಾಗೆಯೇ ಹಿಂದೆ ಹೋಗುತ್ತಾರೆ. ಇದರಿಂದಾಗಿ ನಾವು ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದೇವೆ. ನಾವೇ ಬ್ಯಾಗ್ ಗಳನ್ನು ಕೊಡುತ್ತೇವೆಂದರೂ ಗ್ರಾಹಕರು ಆ ಬ್ಯಾಗ್ ಗಳನ್ನು ಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ಕೊಂಡ ಪಿಟ್ಟರಾಜಮ್ಮ ಎಂಬುವವರು ಮಾತನಾಡಿ, ಮಾರುಕಟ್ಟೆಯಲ್ಲಿ ಸೇಬನ್ನು ಕೊಂಡುಕೊಂಡೆ, ಕವರ್ ಇಲ್ಲದ ಕಾರಣ ಕೈಯಲ್ಲಿ ಹಿಡಿದುಕೊಂಡು ಬಂದಿದ್ದೆ. ಬಸ್ ನಲ್ಲಿ ಹೋಗಬೇಕಿತ್ತು. ವ್ಯಾಪಾರಸ್ಥರು ಕವರ್ ನೀಡಲಿಲ್ಲ. ರಸ್ತೆಯಲ್ಲಿ ಸೇಬುಗಳು ಬೀಳುತ್ತಿವೆ. ನನ್ನ ಹಣ ವ್ಯರ್ಥವಾಯಿತು ಎಂದು ಹೇಳಿದ್ದಾರೆ.

SCROLL FOR NEXT