ದಾಂಡೇಲಿಯ ಹಳಿಯಾಳದಲ್ಲಿ ಜಿಂಕೆ ಮೇಲೆ ದಾಳಿ ನಡೆಸುತ್ತಿರುವ ನಾಯಿಗಳು 
ರಾಜ್ಯ

ನಾಯಿ ಮತ್ತು ಜಿಂಕೆಗಳ ನಡುವೆ ಸಂಘರ್ಷ: ಜಿಂಕೆಗಳ ಜೀವಕ್ಕೆ ಆಪತ್ತು

ರಾಜ್ಯದ ಹಲವು ಕಾಡುಗಳಲ್ಲಿರುವ ಸಸ್ಯಾಹಾರಿ ಜೀವಿಗಳಿಗೆ ಅದರಲ್ಲೂ ಜಿಂಕೆಗೆ ನಾಯಿಗಳಿಂದ ಜೀವಕ್ಕೆ ಆಪತ್ತು ಬಂದಿದೆ...

ಹುಬ್ಬಳ್ಳಿ: ರಾಜ್ಯದ ಹಲವು ಕಾಡುಗಳಲ್ಲಿರುವ ಸಸ್ಯಾಹಾರಿ ಜೀವಿಗಳಿಗೆ ಅದರಲ್ಲೂ ಜಿಂಕೆಗೆ ನಾಯಿಗಳಿಂದ ಜೀವಕ್ಕೆ ಆಪತ್ತು ಬಂದಿದೆ.

ಕಾಳಿ ಹುಲಿ ಅಭಯಾರಣ್ಯ, ದಾಂಡೇಲಿ, ಹಳಿಯಾಳ ಮತ್ತು ಕುಂಬರ್ವಾಡಗಳಲ್ಲಿ ನಾಯಿಗಳು ಜಿಂಕೆಯನ್ನು ಅಟ್ಟಿಸಿಕೊಂಡು ಹೋಗಿ ಕೊಂದು ಹಾಕಿರುವ ಬಗ್ಗೆ ವರದಿಯಾಗಿದೆ. ಹಾವೇರಿ ಜಿಲ್ಲೆಯಲ್ಲಿರುವ ಅರಣ್ಯಗಳಿಗೂ ಈ ಬಿಸಿ ತಟ್ಟಿದೆ.

ಬೇಸಿಗೆ ಕಾಲದಲ್ಲಿ ನೀರು ಹುಡುಕಿಕೊಂಡು ಜಿಂಕೆಗಳು ನಗರ ಪ್ರದೇಶದ ಹತ್ತಿರ ವಲಸೆ ಬರುತ್ತವೆ. ಇವುಗಳ ಮೇಲೆ ಬೀದಿನಾಯಿಗಳು ಜಗಳಕ್ಕಿಳಿದು ಕೊಂದುಹಾಕುತ್ತವೆ.
ಮನುಷ್ಯರು ವಾಸಿಸುವಲ್ಲಿ ಜೀವಿಸುವ ಪ್ರಾಣಿ ನಾಯಿ. ಅವುಗಳ ಜಾಗಕ್ಕೆ ಜಿಂಕೆಗಳು ಬಂದಾದ ತಮ್ಮ ಪ್ರತಿಸ್ಪರ್ಧಿ ಎಂದು ಭಾವಿಸಿ ಅವುಗಳ ಮೇಲರಗುತ್ತವೆ. 2008ರಿಂದ 2009ರವರೆಗೆ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ನಾಯಿ ಸಸ್ಯಾಹಾರಿ ಪ್ರಾಣಿಗಳ ಮೇಲರಗಿದ ಎಂಟು ಪ್ರಕರಣಗಳಲ್ಲಿ ಎಫ್ ಐಆರ್ ದಾಖಲಾಗಿದೆ. ಗ್ರಾಮಸ್ಥರು ಜಿಂಕೆ ಮತ್ತು ಸಾಂಬಾರ ಮೇಲೆ ದಾಳಿ ಮಾಡಲು ನಾಯಿಗಳಿಗೆ ತರಬೇತಿ ನೀಡಿವೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

ನಾಗರಹೊಳೆ ಮತ್ತು ಬಂಡೀಪುರಗಳಲ್ಲಿ ನಾಯಿ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷವೇರ್ಪಟ್ಟಿವೆ. ಕಾಡಿನ ತೀರಗಳಲ್ಲಿ ಕಸದ ರಾಶಿ ಸಮಸ್ಯೆ ಮುಖ್ಯ ಕಾರಣವಾಗಿದೆ. ಎಂದು ವನ್ಯಜೀವಿ ಸಂರಕ್ಷಕ ಪಿ.ಎ.ಮುತ್ತಣ್ಣ ತಿಳಿಸಿದ್ದಾರೆ. ಕಸದ ರಾಶಿಗಳು ನಾಯಿಗಳನ್ನು ಆಕರ್ಷಿಸುತ್ತವೆ. ಕಾಡಿನ ಸಮೀಪ ವಾಸಿಸುತ್ತಿರುವ ಗ್ರಾಮಸ್ಥರು ಆದಷ್ಟು ನಾಯಿಗಳನ್ನು ಸಾಕದಿರುವುದು ಒಳಿತು.

ನಗರಪಾಲಿಕೆಯವರು ಬೀದಿನಾಯಿಗಳನ್ನು ಹಿಡಿದು ಕಾಡಿನಲ್ಲಿ ಬಿಡುತ್ತವೆ. ಅಲ್ಲಿ ಅವುಗಳಿಗೆ ತಿನ್ನಲು ಆಹಾರ ಸಿಗದಿರುವಾಗ ಸಸ್ಯಾಹಾರಿ ಪ್ರಾಣಿಗಳನ್ನು ಬೇಟೆಯಾಡುತ್ತವೆ. ದುರ್ಬಲ ನಾಯಿಗಳು ಹುಲಿಯ ಬಾಯಿಗೋ, ಚಿರತೆಗೋ ಸಿಕ್ಕಿ ಬಲಿಯಾಗುತ್ತವೆ ಎನ್ನುತ್ತಾರೆ ವನ್ಯಮೃಗ ಮುಖ್ಯ ಕಾವಲುಗಾರ ಎಂ.ಬಿ. ಹೊಸ್ಮಟ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT