ರಾಜ್ಯ

ಏನೇ ಆದರೂ ಸಿಎಂ ಆಪ್ತ ಮರಿಗೌಡ ಗೆ ಜಾಮೀನು ನೀಡೊಲ್ಲ: ಹೈಕೋರ್ಟ್

Shilpa D

ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಎದುರಿಸುತ್ತಿರುವ ಕೆ.ಮರೀಗೌಡ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್‌ ಮಂಗಳವಾರ ವಜಾ ಮಾಡಿದೆ

ನಿರೀಕ್ಷಣಾ ಜಾಮೀನು ಅರ್ಜಿಯ  ವಿಚಾರಣೆ ನಡೆಸಿದ ನ್ಯಾ. ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠವು,  ‘ಯಾವುದೇ ಕಾರಣಕ್ಕೂ ಜಾಮೀನು ನೀಡುವುದಿಲ್ಲ’ ಎಂದು ಹೇಳಿದೆ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲ ಚೇತನ ದೇಸಾಯಿ, ಈ ಘಟನೆ ಆ ಕ್ಷಣಕ್ಕೆ ನಡೆದಿದ್ದಲ್ಲ. ಸಂಪೂರ್ಣ ಪೂರ್ವ ಯೋಜಿತವಾದದ್ದು. ಆದ್ದರಿಂದ ಜಾಮೀನು ನೀಡಬಾರದು, ಘಟನೆಗೆ ಮೈಸೂರು ನಗರ ಪ್ರಾಧಿಕಾರದ ಕಮಿಷನರ್‌, ಜಿಲ್ಲಾಧಿಕಾರಿಗಳ ಗನ್‌ ಮ್ಯಾನ್‌, ಅವರ ಕಾರಿನ ಚಾಲಕ ಪ್ರತ್ಯಕ್ಷ ಸಾಕ್ಷಿಗಳಾಗಿದ್ದಾರೆ ಎಂದರು.

ಪ್ರತಿಕ್ರಿಯಿಸಿದ ಬೈರಾರೆಡ್ಡಿ, ಆರೋಪಿ, ಮಹಿಳಾ ಐಎಎಸ್‌ ಅಧಿಕಾರಿ ಜೊತೆಗೇ ಈ ರೀತಿ ವರ್ತಿಸಿದ್ದಾರೆ ಎಂದರೆ ಬೇರೆ ಅಧಿಕಾರಿಗಳು ಹೇಗೆ ಕೆಲಸ ಮಾಡಲು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡರು. ನೀವು ಅಧೀನ ನ್ಯಾಯಾಲಯಕ್ಕೆ ಹೋಗಿ ಜಾಮೀನು  ಕೇಳಿ ಎಂದು ಜಾಧವ್‌ ಅವರಿಗೆ ತಾಕೀತು ಮಾಡಿದರು.

2010ರಲ್ಲಿ ಮರಿಗೌಡರ ವಿರುದ್ಧ  ಹಿಂದೆ ದಾಖಲಾಗಿದ್ದ ಎಲ್ಲಾ ಪ್ರಕರಣಗಳನ್ನು ರದ್ದು ಮಾಡಲಾಗಿದೆ , ಆದರೆ ವಂಚನೆ ಪ್ರಕಕರಣವೊಂದು ಇನ್ನೂ ಬಾಕಿಯಿದೆ.

SCROLL FOR NEXT