ದಸರಾ ಜಂಬೂ ಸವಾರಿ 
ರಾಜ್ಯ

ಅಕ್ಟೋಬರ್ 1ಕ್ಕೆ ಮೈಸೂರು ದಸರಾ ಉದ್ಘಾಟನೆ; 11ಕ್ಕೆ ಜಂಬೂ ಸವಾರಿ; ಉದ್ಘಾಟನೆಗೆ ಸಚಿನ್?

016ರ ವಿಶ್ವ ವಿಖ್ಯಾತ ದಸರಾ ಉತ್ಸವ ಸಂಬಂಧ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧ ದಲ್ಲಿ ಸಭೆ ನಡೆಯಿತು. ..

ಬೆಂಗಳೂರು: 2016ರ ವಿಶ್ವ ವಿಖ್ಯಾತ ದಸರಾ ಉತ್ಸವ ಸಂಬಂಧ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧ ದಲ್ಲಿ ಸಭೆ ನಡೆಯಿತು.

ಸಭೆ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅಕ್ಟೋಬರ್ 1 ರಂದು ಬೆಳಗ್ಗೆ 11.40ಕ್ಕೆ ದಸರಾ ಉದ್ಘಾಟನೆ ಯಾಗಲಿದೆ. ಪ್ರತಿ ಭಾರಿಯಂತೆ ಈ ಬಾರಿ ಗಣ್ಯರಿಂದ ದಸರಾ ಉದ್ಘಾಟನೆ ನಡೆಯಲಿದೆ.

ಸಚಿನ್ ತೆಂಡೂಲ್ಕರ್, ಚನ್ನವೀರ ಕಣವಿ, ಎಸ್,ಎಲ್ ಭೈರಪ್ಪ, ನಿಸಾರ್ ಅಹಮದ್ ಹೆಸರು ಕೇಳಿ ಬಂದಿದ್ದು ಆಗಸ್ಟ್ 9 ರಂದು ನಡೆಯುವ ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಭಾರಿ ಸರಳವೂ ಅಲ್ಲದ, ಅದ್ಧೂರಿಯೂ ಅಲ್ಲದ ಸಾಂಪ್ರದಾಯಿಕ ದಸರಾ ನಡೆಸಲಾಗುವುದು. ಅಕ್ಟೋಬರ್ 11 ರಂದು ವಿಜಯ ದಶಮಿ ನಡೆಯಲಿದ್ದು, ಅಂದೇ ಜಂಬೂಸವಾರಿ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದ್ದಾರೆ.

ಕಳೆದ ಬಾರಿ ಭೀಕರ ಬರಗಾಲ ಇದ್ದ ಕಾರಣ ಸರಳವಾಗಿ ದಸರ ಆಚರಿಸಲಾಯಿತು. ಈ ಬಾರಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ  ಹಲವೆಡೆ ಉತ್ತಮ ಮಳೆಯಾಗಿದೆ. ಆದರೂ ಅದ್ದೂರಿಯಲ್ಲದ ಸರಳವೂ ಅಲ್ಲದ ದಸರಾ ಆಚರಿಸಲಾಗುವುದು ಎಂದು ಸಿಎಂ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video