ಬೆಂಗಳೂರು; ಮಂಗಳೂರು ಡಿವೈಎಸ್ ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ನ್ಯಾಯಾಂಗ ತನಿಖಾ ಆಯೋಗಕ್ಕೆ ವಹಿಸಿ 20 ದಿನ ಕಳೆದರೂ ಆಯೋಗದಿಂದ ತನಿಖೆ ಇನ್ನೂ ಆರಂಭವಾಗಿಲ್ಲ.
ಸರ್ಕಾರ ರಚಿಸಿರುನ ನ್ಯಾಯಾಂಗ ಆಯೋಗ ಸಮಿತಿಗೆ ಬೇಕಾಗಿರುವ ಕೊಠಡಿ ಹಾಗೂ ವಾಹನ ಸೌಲಭ್ಯ ಕಲ್ಪಿಸಿಲ್ಲ, ಈ ಸಂಬಂಧ ವಯಕ್ತಿಕ ಮತ್ತು ಆಡಳಿತಾತ್ಮಕ ಇಲಾಖೆಗೆ ಪತ್ರ ಬರೆದು ಬಾಲಬ್ರೂಯಿ ಅತಿಥಿ ಗೃಹದಲ್ಲಿ ಕೊಠಡಿ ವ್ಯವಸ್ಥೆ ಮಾಡಿ ಎಂದು ಕೇಳಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕಾನೂನು ಇಲಾಖೆ ಮೂಲಗಳು ತಿಳಿಸಿವೆ.
ಜುಲೈ 16 ರಂದು ನ್ಯಾಯಮೂರ್ತಿ ಕೇಶವನಾರಾಯಣ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆಗೆ ಆದೇಶ ನೀಡಿತು, ಆದರೆ ಅಂದಿನಿಂದ ಇಂದುವರೆಗೆ ಸಮಿತಿಗೆ ಒಂದು ಕಚೇರಿ, ವಾಹನ, ಚಾಲಕ ಮತ್ತು ಸಿಬ್ಬಂದಿಯನ್ನು ನೀಡದೇ ಉದ್ದೇಶ ಪೂರ್ವಕವಾಗಿಯೇ ತನಿಖೆಯನ್ನು ವಿಳಂಬ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.
ಎಂರಡು ಇಲಾಖೆಗಳ ಕಚೇರಿ ವಿಧಾನ ಸೌಧದಲ್ಲೇ ಇವೆ. ಹೀಗಿದ್ದರೂ ನಿರ್ಧಾರ ಕೈಗೊಳ್ಳಲು 20 ದಿನಗಳ ಕಾಲಾವಕಾಶ ತೆಗೆದುಕೊಂಡಿದ್ದೇಕೆ?
ಬಾಲೂಬ್ರೂಯಿ ಅತಿಥಿ ಗೃಹ ರಾಜ್ಯ ಸರ್ಕಾರದ ಅಧೀನದಲ್ಲಿದೆ. ಹೀಗಿದ್ದರೂ ಅಲ್ಲಿ ನ್ಯಾಯಾಂಗ ತನಿಖಾ ಆಯೋಗ ಸಮಿತಿಗೆ ಕೊಠಡಿ ನೀಡಳು ವಿಳಂಬ ಮಾಡುತ್ತಿರುವುದೇಕೆ ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.