ರಾಜ್ಯ

1 ಕೋಟಿ ರೂ ಮೌಲ್ಯದ ವಸ್ತುಗಳೊಂದಿಗೆ ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ

Sumana Upadhyaya
ಬೆಂಗಳೂರು: 31 ವರ್ಷದ ಮಹಿಳೆ ಸೇರಿದಂತೆ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಮಾದಕದ್ರವ್ಯ ನಿಯಂತ್ರಣ ಮಂಡಳಿ ನಿನ್ನೆ ಬಂಧಿಸಿದೆ. ಆರೋಪಿಗಳಿಂದ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯ ಮತ್ತು ಸೈಕೊಟ್ರೊಫಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ರೊಸೆಲೈನ್ ಅರ್ನೆಸ್ಟ್(40 ವ) ಮತ್ತು ಆತನ ಸ್ನೇಹಿತೆ ಲೊವೆತ್ ಒಸಸೊಜಿ ಎಂದು ಗುರುತಿಸಲಾಗಿದೆ. 
ನಿಖರ ಮಾಹಿತಿ ಪಡೆದ ಅಧಿಕಾರಿಗಳ ತಂಡ ಇವರಿಬ್ಬರು ವಾಸ್ತವ್ಯವಿದ್ದ ಟಿ.ಸಿ.ಪಾಳ್ಯದ ಮನೆಗೆ ದಾಳಿ ನಡೆಸಿ ಕೊಕೇನ್, ಕೊಕೇನ್ ಮಾತ್ರೆ, ಎಂಡಿಎಂಎ, ಮೆತರ್ನ್ ಫೆಟಮಿನ್ ಮತ್ತು ಎಲ್ ಎಸ್ ಡಿ ಮೊದಲಾದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ತನಿಖೆ ವೇಳೆ, ಈ ಜೋಡಿ ತಾವು ಸುತ್ತಮುತ್ತಲ ಪಾರ್ಟಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಕಳೆದ ಕೆಲ ತಿಂಗಳಿಂದ ಅವರು ಭಾರತದಲ್ಲಿ ವಾಸವಾಗಿದ್ದರು. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
SCROLL FOR NEXT