ಒಂದೇ ಕುಟುಂಬದ ಮೂವರು ಸದಸ್ಯರು ದೃಷ್ಠಿ ಹೀನರು 
ರಾಜ್ಯ

ಈ ಗ್ರಾಮದ ಪ್ರತಿ ಮೂರು ಮನೆಯ ಒಬ್ಬರಲ್ಲಿ ಅಂಗವೈಕಲ್ಯ

ಯಾದಗಿರಿ ಜಿಲ್ಲೆಯ ಈವೂರ್ ತಾಂಡಾ(ಸೇವಾನಗರ) ಗ್ರಾಮದ ಪ್ರತಿ ಮೂರು ಮನೆಯ ಒಬ್ಬ ಸದಸ್ಯರಲ್ಲಿ ಹುಟ್ಟು ಅಂಗವೈಕಲ್ಯ ಸರ್ವೇ ಸಾಮಾನ್ಯವಾಗಿದೆ.

ಕಲಬುರಗಿ: ಯಾದಗಿರಿ ಜಿಲ್ಲೆಯ ಈವೂರ್ ತಾಂಡಾ(ಸೇವಾನಗರ) ಗ್ರಾಮದ ಪ್ರತಿ ಮೂರು ಮನೆಯ ಒಬ್ಬ ಸದಸ್ಯರಲ್ಲಿ ಹುಟ್ಟು ಅಂಗವೈಕಲ್ಯ ಸರ್ವೇ ಸಾಮಾನ್ಯವಾಗಿದೆ.

ಸುರಪುರ್  ದಿಂದ 40 ಕಿಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಹಲವು ವರ್ಷಗಳಿಂದ ಇಲ್ಲಿನ ನಾಗರಿಕರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸುಮಾರು 2.ಸಾವಿರ ಜನರಿರುವ ಈ ಗ್ರಾಮದಲ್ಲಿ ಶೇ. 9 ರಷ್ಟು ದೈಹಿಕ ಹಾಗೂ ಮಾನಸಿಕ ವಿಕಲ ಚೇತನರಿದ್ದಾರೆ.

500 ಕುಟುಂಬಗಳಿರುವ ಈವೂರು ತಾಂಡದಲ್ಲಿ 190 ಮಂದಿ ವಿಕಲಾಂಗರಿದ್ದು, ಅದರಲ್ಲಿ ಶೇ.50ರಷ್ಟು ಮಕ್ಕಳೇ ಆಗಿದ್ದಾರೆ. ದೃಷ್ಟಿದೋಷ, ಕಿವುಡುತನಕ್ಕೆ ಬಲಿಯಾಗಿದ್ದಾರೆ.

ಮತ್ತೊಂದು ಅಶ್ಚರ್ಯಕರ ಸಂಗತಿ ಎಂದರೇ ಈ ಗ್ರಾಮಕ್ಕೆ ಆಗಮಿಸಿದ್ದ ಆಶಾ ಆರೋಗ್ಯ ಸೇವಕಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದು, ಹುಟ್ಟಿನಿಂದಲೇ ಆ ಮಗು ಮಾತು ಕಳೆದು ಕೊಂಡು ಕಿವುಡುತನ ಅನುಭವಿಸುತ್ತಿದೆ.

ಕಳೆದ 15 ತಿಂಗಳ ಹಿಂದೆ ಇಲ್ಲಿ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು. ಈ ಗ್ರಾಮದಲ್ಲಿ ಜನಿಸುವ ಮಕ್ಕಳಿಗೆ ವಂಶವಾಹಿ ದೋಷದಿಂದಾಗಿ ಈ ಸಮಸ್ಯೆ ತಲೆದೋರಿದೆ ಎಂದು ಆರೋಗ್ಯತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಅದಕ್ಕೆ ಪೂರಕವಾದ ಯಾವುದೇ ಅಧ್ಯಯನ ನಡೆದಿಲ್ಲ. ಜೊತೆಗೆ ಈ ಸಮಸ್ಯೆಗೆ ನಿಖರವಾದ ಕಾರಣ ಏನು ಎಂಬುದು ಇನ್ನೂ ನಿಗೂಢ.

ಈ ಗ್ರಾಮದಲ್ಲಿ ಶುಚಿತ್ವ ಇಲ್ಲದಿರುವುದೇ ಪ್ರಮುಖ ಕಾರಣ ಎಂದು ಆರೋಗ್ಯಾಧಿಕಾರಿ ವಿಶ್ವನಾಥ್ ಹೇಳಿದ್ದಾರೆ. ಆದರೆ ಹುಟ್ಟಿನಿಂದಲೇ ಅಂಗ ವೈಕಲ್ಯಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ