ಕಳೆದ ತಿಂಗಳ ಪ್ರವಾಹಕ್ಕೆ ಅರ್ಧದಷ್ಟು ಮುಳುಗಿ ಹೋದ ಕೋಡಿಚಿಕ್ಕನಹಳ್ಳಿಯ ಮನೆಗಳು. 
ರಾಜ್ಯ

ಪ್ರವಾಹ ಪೀಡಿತ ಪ್ರದೇಶದಲ್ಲಿ ಶೇಕಡಾ 30ರಷ್ಟು ಆಸ್ತಿ ಮೌಲ್ಯ ಇಳಿಕೆ

ಕಳೆದ ತಿಂಗಳು ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿ ಅರ್ಧದಷ್ಟು ಮುಳುಗಿ ಹೋಗಿದ್ದ ಕೋಡಿಚಿಕ್ಕನಹಳ್ಳಿ...

ಬೆಂಗಳೂರು: ಕಳೆದ ತಿಂಗಳು ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿ ಅರ್ಧದಷ್ಟು ಮುಳುಗಿ ಹೋಗಿದ್ದ ಕೋಡಿಚಿಕ್ಕನಹಳ್ಳಿ ಸುತ್ತಮುತ್ತ ಆಸ್ತಿ ಬೆಲೆ ಗಣನೀಯ ಕುಸಿದಿದೆ. 
ಕೋಡಿಚಿಕ್ಕನಹಳ್ಳಿ ಇರುವುದು ಬನ್ನೇರುಘಟ್ಟ ರಸ್ತೆಯಲ್ಲಿ. ಈ ಪ್ರದೇಶದ ಅನೇಕ ಮನೆಗಳನ್ನು ಮಳೆ ನೀರು ಮೋರಿ ಜಾಗದಲ್ಲಿ(ಸ್ಟಾರ್ಮ್ ವಾಟರ್ ಡ್ರೈನ್) ಕಟ್ಟಲಾಗಿದೆ ಎಂದು ಬಿಬಿಎಂಪಿ ಇತ್ತೀಚೆಗೆ ಒತ್ತುವರಿ ತೆರವು ಹಿನ್ನೆಲೆಯಲ್ಲಿ ಕೆಡವಿತ್ತು. ಈ ಎಲ್ಲಾ ಕಾರಣಗಳಿಂದ ಭೂಮಿ ಮತ್ತು ಅಪಾರ್ಟ್ ಮೆಂಟ್ ಬೆಲೆ ಈ ಪ್ರದೇಶದಲ್ಲಿ ಶೇಕಡಾ 30ರಷ್ಟು ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.
ಕೋಡಿಚಿಕ್ಕನಹಳ್ಳಿಯ ನಿವಾಸಿ ಕೆ. ರಾಜಶೇಖರ್ ಚಿಂತಾಕ್ರಾಂತರಾಗಿದ್ದಾರೆ. ಅವರು ತಮ್ಮ 2 ಬೆಡ್ ರೂಂ ಅಪಾರ್ಟ್ ಮೆಂಟನ್ನು ಪ್ರತಿಯೊಂದಕ್ಕೆ 20 ಲಕ್ಷದಂತೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಅವರಿಗೆ ಬಿಬಿಎಂಪಿಯಿಂದ ಕಟ್ಟಡವನ್ನು ಕೆಡವುವಂತೆ ನೊಟೀಸ್ ಬಂದಿದೆ. ತಮ್ಮ ದಾಖಲೆಗಳು ಸರಿಯಾಗಿವೆ ಅನ್ನುವುದು ರಾಜಶೇಖರ್ ವಾದ.
ಜನಪ್ರಿಯ ಲೇಕ್ ವ್ಯೂ ಅಪಾರ್ಟ್ ಮೆಂಟ್ ನ ಹೆಸರು ಹೇಳಲಿಚ್ಛಿಸದ ನಿವಾಸಿ ಹೇಳುವ ಪ್ರಕಾರ, ಹೆಚ್ಚಿನ ಅಪಾರ್ಟ್ ಮೆಂಟ್ ಗಳ ಮಾಲಿಕರು ಇಲ್ಲಿ ವಾಸಿಸುತ್ತಿಲ್ಲ, ವಿದೇಶಗಳಲ್ಲಿದ್ದಾರೆ. ಅವರಿಗೆ ತಮ್ಮ ಮನೆ ಅಪಾಯದಲ್ಲಿದೆ ಎಂಬ ವಿಷಯವೂ ಗೊತ್ತಿಲ್ಲ. ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿರುವ ಜನರು ಹರಿಬರಿಯಲ್ಲಿ ತಮ್ಮ ಅಪಾರ್ಟ್ ಮೆಂಟ್ ಮಾರಾಟ ಮಾಡಿ ಸಮಸ್ಯೆಯಿಂದ ತಪ್ಪಿಸಿಕೊಳ್ಳುವ ತರಾತುರಿಯಲ್ಲಿದ್ದಾರೆ.
 ಈ ಪ್ರದೇಶದ ರಿಯಲ್ ಎಸ್ಟೇಟ್ ಉದ್ಯಮಿ ಕುಮಾರ್, ಬನ್ನೇರುಘಟ್ಟ ಸಮೀಪ ಗೊಟ್ಟಿಗೆರೆಯಲ್ಲಿ ಹಿಂದೆ 28ರಿಂದ 30 ಲಕ್ಷವಿದ್ದ ಎರಡು ಬೆಡ್ ರೂಂನ ಫ್ಲಾಟ್ ಗೆ ಈಗ 20 ಲಕ್ಷ ರೂಪಾಯಿಗಳಾಗಿದೆ. ಆದರೆ ಕೊಳ್ಳುವವರಿಲ್ಲ. ಬಿಬಿಎಂಪಿಯ ಒತ್ತುವರಿ ಜಾಗದಲ್ಲಿನ ಮನೆಗಳನ್ನು ಕೆಡವಿದ ಹಿನ್ನೆಲೆಯಲ್ಲಿ ಡೆವಲಪರ್ಸ್ ಮತ್ತು ಬಿಲ್ಡರ್ ಗಳ ಮೇಲಿನ ವಿಶ್ವಾಸಾರ್ಹತೆ ಕಡಿಮೆಯಾಗಿದೆ. ಅಪಾರ್ಟ್ ಮೆಂಟ್ ಖರೀದಿಸಲು ಜನ ಇಲ್ಲಿ ಭಯಪಡುತ್ತಿದ್ದಾರೆ ಎಂದರು.
ಬಿಬಿಎಂಪಿಯ ಒತ್ತುವರಿ ಕಾರ್ಯಾಚರಣೆಯಿಂದ ಜನರು ಹೆಚ್ಚು ಜಾಗರೂಕರಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಾರೆ ಆಸ್ತಿ ಸಲಹೆಗಾರ ಗೌತಮ್ ಚಕ್ರವರ್ತಿ. 
''ನಾವು ಮಳೆ ನೀರು ಚರಂಡಿ ಪ್ರದೇಶಗಳನ್ನು ನಮ್ಮ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದೇವೆ. ಅಲ್ಲಿ ಆಸ್ತಿಗಳ ಬೆಲೆ ಕಡಿಮೆಯಾಗಿದ್ದರೆ ಜನರು ಆಯಾ ವಲಯ ಕಚೇರಿಗಳಲ್ಲಿ ಮತ್ತು ಬಿಬಿಎಂಪಿ ಕೇಂದ್ರ ಕಚೇರಿಯನ್ನು ಹಣ ಹೂಡಿಕೆ ಮಾಡುವ ಮುನ್ನ ಪರೀಕ್ಷಿಸಿ ಮುಂದಾಗಬಹುದು ಎಂದು ಬಿಬಿಎಂಪಿ ಉತ್ತರ ವಲಯದ ಜಂಟಿ ಆಯುಕ್ತ ಸರ್ಫರಾಜ್ ಖಾನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!