ರಾಜ್ಯ

ಮೈಸೂರು ವಿವಿ ಉಪಕುಲಪತಿ ರಂಗಪ್ಪ ವಿರುದ್ಧ ಪ್ರಕರಣ ದಾಖಲು

Manjula VN

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಹಣಕಾಸು ವ್ಯವಹಾರದಲ್ಲಿ ಅವ್ಯವಹಾರ ನಡೆಸಿದ್ದಾರೆಂಬ ಆರೋಪದಡಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಕೆ.ಎಸ್ ರಂಗಪ್ಪ ಅವರ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.

ವಿವಿಯಲ್ಲಿ ನಡೆದಿದೆ ಎನ್ನಲಾಗಿರುವ ಹಣಕಾಸು ಅವ್ಯವಹಾರದಲ್ಲಿ ಪ್ರೊ, ಕೆ.ಎಸ್. ರಂಗಪ್ಪ ಸೇರಿ 7 ಮಂದಿ ವಿರುದ್ಧ ಜಯಲಕ್ಷ್ಮೀಪುರಂ ಠಾಣೆಯಲ್ಲಿ ನಿನ್ನೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಪ್ರೊ.ಎಂ.ಜಿ. ಕೃಷ್ಣನ್, ಹಾಲಿ ಕುಲಸಚಿವ ಪ್ರೊ.ಪಿ.ಎಸ್. ನಾಯಕ್, ಪ್ರೊ.ಟಿ.ಡಿ.ದೇವೇಗೌಡ, ರಾಮನಾಥನ್, ಬಿ.ಎಸ್. ವಿಶ್ವನಾಥ್, ಡಾ.ಕಮಲೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಸಾಕಷ್ಟು ಅವ್ಯವಹಾರಗಳು ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದರಂತೆ ರಾಜ್ಯಪಾಲ ವಜೂಬಾಯಿ ವಾಲಾ ಅವರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಡಾ. ಭಕ್ತವತ್ಸಲ ಅವರನ್ನು ತನಿಖೆಗೆ ನೇಮಕ ಮಾಡಿದ್ದರು. ತನಿಖೆ ನಡೆಸಿದ ಭಕ್ತವತ್ಸಲ ಅವರು ಅವ್ಯವಹಾರ ನಡೆದಿರುವುದು ಸತ್ಯ ಎಂದು ವರದಿಯಲ್ಲಿ ಸ್ಪಷ್ಟಪಡಿಸಿದ್ದರು

ಈ ವರದಿಯನ್ನು ಆಧರಿಸಿ ರಾಜ್ಯಪಾಲರು ಮುಕ್ತ ವಿವಿ ಕುಲಪತಿಗೆ ಪತ್ರ ಬರೆದು ವರದಿ ಸಂಬಂಧ 1 ತಿಂಗಳೊಳಗಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

SCROLL FOR NEXT