ರಾಜ್ಯ

ಭೂ ಕಬಳಿಕೆ ಆರೋಪ: ಸ್ಪಷ್ಟನೆ ನೀಡಿದ ಮುಖ್ಯಕಾರ್ಯದರ್ಶಿ ಅರವಿಂದ್ ಜಾಧವ್

Shilpa D

ಬೆಂಗಳೂರು: ಭೂಮಿ ಖರೀದಿಗೆ ಸಂಬಂಧಿಸಿದಂತೆ ಕಾನೂನು ಉಲ್ಲಂಘನೆಯಾಗಲಿ, ಅಕ್ರಮವಾಗಿ ನಡೆದಿಲ್ಲ ಎಂದು ಭೂಕಬಳಿಕೆ ಆರೋಪ ಕುರಿತಂತೆ  ಮುಖ್ಯಕಾರ್ಯದರ್ಶಿ ಅರವಿಂದ್ ಜಾಧವ್  ಸ್ಪಷ್ಟನೆ ನೀಡಿದ್ದಾರೆ.

14 ವರ್ಷಗಳ ಹಿಂದೆಯೇ ನನ್ನ ತಾಯಿ ಊರಿನಲ್ಲಿದ್ದ ತಮ್ಮ ಜಮೀನು ಮಾರಿ ಬೆಂಗಳೂರಿನಲ್ಲಿ ಜಮೀನು ಖರೀದಿಸಿದ್ದರು. ಆ ಭೂಮಿ ಖರೀದಿ ವೇಳೆ ಸರ್ಕಾರಿ ಭೂಮಿ ಆಗಿರಲಿಲ್ಲ. ಅಲ್ಲದೇ ನನ್ನ ತಾಯಿ ಭೂಮಿ ಖರೀದಿಸುವ ವೇಳೆ ನಾನು ಕೇಂದ್ರದ ಸೇವೆಯಲ್ಲಿದ್ದೆ, ರಾಜ್ಯ ಸರ್ಕಾರದ ಸೇವೆಯಲ್ಲಿ ಇರಲಿಲ್ಲ ಎಂದು ಜಾಧವ್ ಹೇಳಿದ್ದಾರೆ.

ಜಮೀನು ಖರೀದಿಸಲು ನನ್ನ ತಾಯಿ ಸ್ವತಂತ್ರರು, ನನ್ನ ತಾಯಿ ಖರೀದಿಸಿದ ಜಮೀನು ಗೋಮಾಳ ಅಲ್ಲ, ಕಂದಾಯ ಇಲಾಖೆ ನಿಯಮದಂತೆ ಜಮೀನು ಖರೀದಿಸಿದ್ದಾರೆ. ಹಾಗಾಗಿ ನಮಗೆ ಕೋರ್ಟ್ ಗೆ ಹೋಗಲು ಅವಕಾಶ ಇದೆ ಎಂದು ವಿವರಿಸಿದ್ದಾರೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರಶಿ ಅರವಿಂದ್ ಜಾಧವ್ ವಿರುದ್ಧ ಕೇಳಿ ಬಂದ ಭೂ ಅಕ್ರಮ ಆರೋಪ ಸಂಬಂಧ ವರದಿ ನೀಡುವಂತೆ ಕಂದಾಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸೂಚಿಸಿದ್ದರು. ವರದಿ ಸಲ್ಲಿಸಿದ್ದು, ವರದಿಯನ್ನು ಒಪ್ಪಿಕೊಳ್ಳುವುದು ಬಿಡುವುದು, ಸಿಎಂ ಸಿದ್ದರಾಮಯ್ಯ ಅವರಿಗೆ ಬಿಟ್ಟ ವಿಚಾರ ಎಂದು ಜಾದವ್ ತಿಳಿಸಿದ್ದಾರೆ.

SCROLL FOR NEXT