ರಾಜ್ಯ

ಕಾಶ್ಮೀರ ತಲ್ಲಣಗಳ ಬಗ್ಗೆ 'ನಿಲುಮೆ'ಯಿಂದ ಆ.28 ರಂದು ವಿಚಾರ ಸಂಕಿರಣ

Srinivas Rao BV

ಬೆಂಗಳೂರು: ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ನಡೆದ ಘಟನೆಗಳ ಹಿನ್ನೆಲೆಯಲ್ಲಿ ನಿಲುಮೆ ಸಂಘಟನೆ ಆ.28 ರಂದು( ಭಾನುವಾರ) ವಿಚಾರ ಸಂಕಿರಣ, ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದೆ.

ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಬೆಳಿಗ್ಗೆ 10:30 ರಿಂದ 1:30 ರ ವರೆಗೆ ನಡೆಯಲಿರುವ ಕಾರ್ಯಕ್ರಮವನ್ನು ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಶಂಕರ್ ಬಿದರಿ ಉದ್ಘಾಟನೆ ಮಾಡಲಿದ್ದಾರೆ.  ಅಂತರಾಷ್ಟ್ರೀಯ ವಿದ್ಯಾಮಾನಗಳ ವಿಶ್ಲೇಷಕರು ಹಾಗೂ ಅಂಕಣಕಾರರಾದ ಪ್ರೇಮಶೇಖರ ಅವರು ಕಾರ್ಯಕ್ರಮದಲ್ಲಿ ಜಮ್ಮು ಕಾಶ್ಮೀರದ ಐತಿಹಾಸಿಕ ಘಟನೆಗಳ ಬಗ್ಗೆ ಮಾತನಾಡಲಿದ್ದಾರೆ.

ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಸೇನಾನಿ ಕ್ಯಾಪ್ಟನ್ ನವೀನ್ ನಾಗಪ್ಪ ಅವರು ಕಾರ್ಗಿಲ್ ಯುದ್ಧದ ಅನುಭವಗಳು, ಸ್ಥಳೀಯರು ಮತ್ತು ಯೋಧರ ಬಾಂಧವ್ಯಗಳ ಬಗ್ಗೆ ಮಾತನಾಡಲಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾಶ್ಮೀರವನ್ನು ಮುಂದಿಟ್ಟುಕೊಂಡು ದೇಶದ ವಿವಿಧ ನಗರಗಳಲ್ಲಿ ದೇಶವಿರೋಧಿ ಘೋಷಣೆಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ  ವಿಚಾರ ಸಂಕಿರಣ, ಸಂವಾದ ಕಾರ್ಯಾರಕಮವನ್ನು ಹಮ್ಮಿಕೊಳ್ಳುತ್ತಿರುವುದಾಗಿ ನಿಲುಮೆ ಸಂಘಟನೆ ತಿಳಿಸಿದೆ.

SCROLL FOR NEXT