ಮೃತ ಮಹಿಳೆ ತಿಮ್ಮಮ್ಮ 
ರಾಜ್ಯ

ಪ್ರಿಯಕರನ ಜೊತೆ ಸೇರಿ ಮಹಿಳೆ ಅಪಹರಿಸಿ ಹತ್ಯೆ; ಮಂಡ್ಯದಲ್ಲಿ ಶವ ಸುಟ್ಟ ಕಿರಾತಕಿ ಬಂಧನ

ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಅಪಹರಿಸಿ, ಉಸಿರುಗಟ್ಟಿಸಿ ಕೊಂದು ಮಂಡ್ಯದಲ್ಲಿ ಸುಟ್ಪುಹಾಕಿರುವ ಘಟನೆ ನಡೆದಿದೆ.

ಬೆಂಗಳೂರು: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಅಪಹರಿಸಿ, ಉಸಿರುಗಟ್ಟಿಸಿ ಕೊಂದು ಮಂಡ್ಯದಲ್ಲಿ ಸುಟ್ಪುಹಾಕಿರುವ ಘಟನೆ ನಡೆದಿದೆ.

ಪ್ರಿಯಕರನ ಜತೆ ಸೇರಿ ತಿಮ್ಮಮ್ಮ ಎಂಬ ಮಹಿಳೆಯನ್ನು ಕಾರಿನಲ್ಲಿ ಅಪಹರಿಸಿದ್ದ ಶೀಲಾ ಎಂಬಾಕೆ, ಅವರನ್ನು ಉಸಿರುಗಟ್ಟಿಸಿ ಹತ್ಯೆಗೈದು ಮಂಡ್ಯದಲ್ಲಿ ಶವ ಸುಟ್ಟು ಹಾಕಿದ್ದಾಳೆ. ಈ ಸಂಬಂಧ ಶೀಲಾಳನ್ನು ಬಂಧಿಸಿರುವ ಮಹಾಲಕ್ಷ್ಮಿ ಲೇಔಟ್ ಪೊಲೀಸರು, ಆಕೆಯ ಪ್ರಿಯಕರ ಅರುಣ್‌ಗಾಗಿ ಶೋಧ ನಡೆಸುತ್ತಿದ್ದಾರೆ.

ತಾವು ಮೈಸೂರಿಗೆ ಟ್ರಿಪ್ ಹೋಗುತ್ತಿರುವುದಾಗಿ ಅಲ್ಲಿ ನೀಡಬೇಕಾದ ಹಣ ಕೊಡುವುದಾಗಿ ನಂಬಿಸಿ ಕರೆದೊಯ್ದ ಶೀಲಾ  ಮತ್ತು ಆಕೆಯ ಪ್ರಿಯಕರ ಸೇರಿ,. ತಿಮ್ಮಮ್ಮ ಅವರನ್ನು ಮಾರ್ಗಮಧ್ಯೆ ಉಸಿರುಗಟ್ಟಿಸಿ ಸಾಯಿಸಿದ್ದರು. ಬಳಿಕ ಶವವನ್ನು ಡಿಕ್ಕಿಯಲ್ಲಿ ಹಾಕಿಕೊಂಡು, ರಾತ್ರಿ ಮಂಡ್ಯದ ಹನಗೆರೆ ಗ್ರಾಮಕ್ಕೆ ತೆರಳಿದ್ದರು. ಮೃತರ ಮೈಮೇಲಿದ್ದ ಆಭರಣಗಳನ್ನು ಬಿಚ್ಚಿಕೊಂಡ ಹಂತಕರು, ಪೆಟ್ರೋಲ್ ಸುರಿದು ಮೃತದೇಹವನ್ನು ಸುಟ್ಟು ಹಾಕಿ ಬೆಳಗಿನ ಜಾವ ನಗರಕ್ಕೆ ಮರಳಿದ್ದರು.

ತಮ್ಮ ತಾಯಿ ರಾತ್ರಿ ಆದರು ವಾಪಸ್ ಬರದ ಕಾರಣ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ತಿಮ್ಮಮ್ಮ ಪುತ್ರ ದೂರು ದಾಖಲಿಸಿದ್ದರು.  ಮಹಿಳೆಯ ಶವ ಪತ್ತೆಯಾಗಿರುವ ಬಗ್ಗೆ ಮಂಡ್ಯ ಪೊಲೀಸರು ನಿಯಂತ್ರಣ ಕೊಠಡಿಗೆ ಫೋಟೊ ಸಹಿತ ಮಾಹಿತಿ ಕೊಟ್ಟಿದ್ದರು. ಆ ಸುಳಿವು ಆಧರಿಸಿ ನಮ್ಮ ಸಿಬ್ಬಂದಿ ತಿಮ್ಮಮ್ಮ ಅವರ ಕುಟುಂಬ ಸದಸ್ಯರ ಜತೆ ಮಂಡ್ಯಕ್ಕೆ ತೆರಳಿದರು. ಮೃತದೇಹ ಗುರುತಿಸಿದ ಅವರ ಮಗ, ಹಣದಾಸೆಗೆ ಶೀಲಾಳೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆಯನ್ನೂ ವ್ಯಕ್ತಪಡಿಸಿದರು  ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಶೀಲಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆಕೆ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸಿರುವ ಪೊಲೀಸರು ಚೀಟಿ ವ್ಯವಹಾರ ಹಾಗೂ ಹಣಕಾಸಿನ ವಿವಾದ ಸಂಬಂಧ ಈ ಕೊಲೆ ನಡೆದಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಿಮ್ಮ ಉದಾಸೀನ ಪ್ರವೃತಿಯಿಂದ ಸರ್ಕಾರಕ್ಕೆ ಮುಜುಗರ: ಸಚಿವರು-ಅಧಿಕಾರಿಗಳ ವಿರುದ್ಧ ಸಿಎಂ ಗರಂ, ಉತ್ತರಿಸುವಂತೆ ಖಡಕ್ ಸೂಚನೆ

SSLC exam 2026: ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ; 8.65 ಲಕ್ಷ ವಿದ್ಯಾರ್ಥಿಗಳು ನೋಂದಣಿ, All the best

'ಅವರು ರಾಜೀನಾಮೆ ನೀಡಿದ್ದು ಒಳ್ಳೆಯದೇ ಆಯ್ತು': ಉನ್ನತ ಅಧಿಕಾರಿ Joseph Kent ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೀಗಂದಿದ್ದೇಕೆ?-Video

ವಿವಿಧ ರಾಜ್ಯಗಳ ಚುನಾವಣೆ ಬಳಿಕ ಸರ್ವಪಕ್ಷ ಸಂಸದರ ನಿಯೋಗದಿಂದ ಪ್ರಧಾನಿ ಭೇಟಿ ತೀರ್ಮಾನ- ಡಿಕೆ ಶಿವಕುಮಾರ್

CSR ಸಹಕಾರದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಉಚಿತ ಎಲೆಕ್ಟ್ರಿಕ್ ಬೈಕ್ ವಿತರಣೆ

SCROLL FOR NEXT