ಸಂಗ್ರಹ ಚಿತ್ರ 
ರಾಜ್ಯ

ನೋಟು ಬದಲಾವಣೆ ಹೆಸರಲ್ಲಿ ಶ್ರೀಗಳಿಗೆ ಮೋಸ ಮಾಡಿದ ಭೂಪ!

ಕೇಂದ್ರ ಸರ್ಕಾರದ ನೋಟು ನಿಷೇಧ ಬಳಿಕ ಮಠಕ್ಕೆ ಬಂದಿದ್ದ ಸುಮಾರು 1 ಕೋಟಿ ಮೌಲ್ಯದ ಹಳೆಯ 500 ಮತ್ತು 1000 ರು.ನೋಟುಗಳನ್ನು ಬದಲಾಯಿಸಿ ಕೊಡುವುದಾಗಿ ಹೇಳಿದ ಭಕ್ತನೋರ್ವ ಬಳಿಕ ನಾಪತ್ತೆಯಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಹಾವೇರಿ: ಕೇಂದ್ರ ಸರ್ಕಾರದ ನೋಟು ನಿಷೇಧ ಬಳಿಕ ಮಠಕ್ಕೆ ಬಂದಿದ್ದ ಸುಮಾರು 1 ಕೋಟಿ ಮೌಲ್ಯದ ಹಳೆಯ 500 ಮತ್ತು 1000 ರು.ನೋಟುಗಳನ್ನು ಬದಲಾಯಿಸಿ ಕೊಡುವುದಾಗಿ ಹೇಳಿದ ಭಕ್ತನೋರ್ವ ಬಳಿಕ  ನಾಪತ್ತೆಯಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಈ ಘಟನೆ ನಡೆದಿದ್ದು, ಜಂಗಮವಾಡಿ ಮಠದ ದತ್ತಾತ್ರೇಯ ಅವಧೂತ ಶ್ರೀಗಳಿಂದ ಒಂದು ಕೋಟಿ ರು. ಹಳೆಯ ನೋಟುಗಳನ್ನು ಪಡೆದ ದಾದಾಪೀರ್‌ ಭೂಷಿ ಎಂಬಾತ ನಾಪತ್ತೆಯಾಗಿದ್ದ. ಇದೀಗ  ಆರೋಪಿಯ ವಿರುದ್ಧ ದತ್ತಾತ್ರೇಯ ಅವಧೂತ ಶ್ರೀಗಳು ಪ್ರತಿಭಟನೆ ನಡೆಸುತ್ತಿದ್ದು, ಮಠದ ಹಲವು ಭಕ್ತರು ಶ್ರೀಗಳಿಗೆ ಸಾಥ್ ನೀಡಿದ್ದಾರೆ. ಇದೀಗ ದಾದಾ ಪೀರ್ ಭೂಷಣ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,  ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪರಾರಿಯಾಗಿರುವ ದಾದಾಪೀರ್ ಭೂಷಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬ್ಯಾಡಗಿಯಿಂದ ಬಿಎಸ್‌ಆರ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ. ಅಲ್ಲದೆ ಈತ ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ಮೆಣಸಿನಕಾಯಿ ವ್ಯಾಪಾರ  ವಹಿವಾಟು ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

ಏನಿದು ಘಟನೆ?
ಪೊಲೀಸ್ ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿದ ಬಳಿಕ  ದತ್ತಾತ್ರೇಯ ಅವಧೂತ ಶ್ರೀಗಳು ತಮ್ಮ ಬಳಿ ಇದ್ದ ಸುಮಾರು 1 ಕೋಟಿ ರು. ಮೌಲ್ಯದ ಹಳೆಯ 500 ಮತ್ತು 1000 ರು.ನೋಟುಗಳನ್ನು  ಬದಲಿಸಲು ಮುಂದಾಗಿದ್ದರು. ಆದರೆ ಬ್ಯಾಂಕುಗಳಲ್ಲಿ ದಿನವೊಂದಕ್ಕೆ ಗರಿಷ್ಠ 2 ಸಾವಿರ ರು.ಗಳನ್ನು ಮಾತ್ರ ಬದಲಿಸಲು ಅವಕಾಶವಿದ್ದರಿಂದ ದಾದಾಪೀರ್ ಭೂಷಿ ಶ್ರೀಗಳ ಹಣ ಬದಲಾವಣೆ ಮಾಡಿಸಿಕೊಡುವುದಾಗಿ ಮುಂದೆ ಬಂದಿದ್ದ.  ಕಳೆದ ನವೆಂಬರ್18ರಂದು ಹಾವೇರಿಯ ಜಾಫರ್‌ ಎಂಬುವರ ಮೂಲಕ ದಾದಾಪೀರ್ ಭೂಷಿ ಜಂಗಮವಾಡಿ ಮಠದ ದತ್ತಾತ್ರೇಯ ಅವಧೂತ ಶ್ರೀಗಳಿಂದ ಹಣ ಪಡೆದಿದ್ದ. ಕಮಿಷನ್‌ ಪಡೆದು ಹಳೆಯ ನೋಟುಗಳನ್ನು  ಬದಲಾಯಿಸಿಕೊಡುವ ದಂಧೆಗಿಳಿದಿದ್ದ ದಾದಾಪೀರ್‌ ಭೂಷಿ, ಶೇ.25 ಕಮಿಷನ್‌ ಆಧಾರದಲ್ಲಿ ನೋಟುಗಳನ್ನು ಬದಲಾಯಿಸಿಕೊಡುವುದಾಗಿ ಹೇಳಿ ಶ್ರೀಗಳಿಂದ ಒಂದು ಕೋಟಿ ರು. ಪಡೆದಿದ್ದನಂತೆ.

ಆದರೆ ಕೆಲ ದಿನಗಳ ಬಳಿಕ ದಾದಾಪೀರ್ ಬಳಿ ಶ್ರೀಗಳು ಬದಲಾವಣೆ ಹಣ ಕೇಳಿದಾಗ, ದಾದಾಪೀರ್‌ ಕೇವಲ 15 ಲಕ್ಷ ರು.ಗಳನ್ನು ಶ್ರೀಗಳ ಸಂಬಂಧಿಯೊಬ್ಬರ ಬ್ಯಾಂಕ್‌ ಖಾತೆಗೆ ಜಮಾ ಮಾಡಿದ್ದ. ಉಳಿದ ಹಣವನ್ನು ಇಂದು  ನೀಡುತ್ತೇನೆ ನಾಳೆ ನೀಡುತ್ತೇನೆ ಎಂದು ದಿನದೂಡುತ್ತಾ ಬಂದ. ಬಳಿಕ ಒಂದು ದಿನ ಉಲ್ಟಾ ಹೊಡೆದ ದಾದಾಪೀರ್ ಬಳಿಕ ಹಣ ನೀಡಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ನೀವು ಹಣವನ್ನು ಕೊಟ್ಟೇ ಇಲ್ಲ ಎಂದು ವಾದಿಸತೊಡಗಿದ.

ಈತನ ಈ ನಡವಳಿಕೆಯ ವಿರುದ್ಧ ಅಸಮಾಧಾನಗೊಂಡ ಶ್ರೀಗಳು ಸಮುದಾಯದ ಮುಖಂಡರಿಂದ ರಾಜಿಪಂಚಾಯತಿ ಮಾಡಿಸಿದರು. ಆಗಲೂ ಈತ ಬಗ್ಗದಿದ್ದಾಗ ಶ್ರೀಗಳು ಧರಣಿ ನಡೆಸಲು ನಿರ್ಧರಿಸಿದ್ದಾರೆ. ಇತ್ತ ಶ್ರೀಗಳು  ಪ್ರತಿಭಟನೆ ನಡೆಸುತ್ತಿದ್ದಂತೆ ಅತ್ತ ದಾದಾಪೀರ್ ಪರಾರಿಯಾಗಿದ್ದು, ಶ್ರೀಗಳು ಈ ಬಗ್ಗೆ ಬ್ಯಾಡಗಿ ಠಾಣೆಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ