‘ಕೆರಿಯರ್ ಉತ್ಸವ್ 2016’ ಅನ್ನು ಭಾರತದ ಪ್ರಸಿದ್ಧ ಲೇಖಕ ಚೇತನ್ ಭಗತ್‍ ಉದ್ಘಾಟಿಸಿದರು. 
ರಾಜ್ಯ

ಒಳಮನಸ್ಸಿನ ಮಾತನ್ನು ಅನುಸರಿಸಿ: ವಿದ್ಯಾರ್ಥಿಗಳಿಗೆ ಚೇತನ್ ಭಗತ್‍ ಸಲಹೆ

ಉತ್ಕೃಷ್ಟ ಕಾಮರ್ಸ್ ಇನ್ಸ್‍ಟಿಟ್ಯೂಟ್ ಎನಿಸಿರುವ ಕೆ2 ಲರ್ನಿಂಗ್ ನವರು ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರಿನಲ್ಲಿ ಆಯೋಜಿಸಿದ್ದ...

ಬೆಂಗಳೂರು: ಉತ್ಕೃಷ್ಟ ಕಾಮರ್ಸ್ ಇನ್ಸ್‍ಟಿಟ್ಯೂಟ್ ಎನಿಸಿರುವ ಕೆ2 ಲರ್ನಿಂಗ್ ನವರು ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರಿನಲ್ಲಿ ಆಯೋಜಿಸಿದ್ದ ಬಹುನಿರೀಕ್ಷಿತ ಶೈಕ್ಷಣಿಕ ಹಬ್ಬ ‘ಕೆರಿಯರ್ ಉತ್ಸವ್ 2016’ ಅನ್ನು ಭಾರತದ ಪ್ರಸಿದ್ಧ ಯುವ ಮತ್ತು ಬಹು ಬೇಡಿಕೆಯ ಲೇಖಕ ಚೇತನ್ ಭಗತ್‍ರವರು ಉದ್ಘಾಟಿಸಿದರು.
ಅಗ್ರ ಶೈಕ್ಷಣಿಕ ಸಂಸ್ಥೆಗಳು, ಕಾಲೇಜುಗಳು ಮತ್ತು ಅವುಗಳ ಬೋಧಕರು, ವಿದ್ಯಾರ್ಥಿಗಳು ಮತ್ತು ಪಾಲಕರು ಈ ವಿನೂತನ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಹಲವು ಕಾರ್ಯಾಗಾರಗಳು ಮತ್ತು ಸೆಮಿನಾರುಗಳ ಪ್ರಯೋಜನವನ್ನು ಪಡೆದುಕೊಂಡರು. ಎಸ್‍ಆರ್‍ಎಮ್ ವಿಶ್ವವಿದ್ಯಾಲಯ, ಅಲೆನ್ ಕೆರಿಯರ್ ಇನ್‍ಸ್ಟಿಟ್ಯೂಟ್ ಸೇರಿದಂತೆ ದೇಶದಾದ್ಯಂತದ 80ಕ್ಕೂ ಹೆಚ್ಚು ಪ್ರಸಿದ್ಧ ಶೈಕ್ಷಣಿಕ ಸಂಸ್ಥೆಗಳು ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದವು. ಅಲ್ಲದೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಲೋಡ್‍ಸ್ಟರ್‍ಗಳು 12+ ನಂತರ ಮುಂದೇನು ಎಂಬ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ನೆರವಾದವು.  

ಯುವ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಕಾರ್ಯಕ್ರಮದ ಉದ್ಘಾಟಕರು ಮತ್ತು ಮುಖ್ಯ ಅತಿಥಿಗಳಾದ ಚೇತನ್ ಭಗತ್‍ರವರು ಯುವಕರಿಗೆ ತಮ್ಮ ಒಳಮನಸ್ಸಿನ ಮಾತನ್ನು ಅನುಸರಿಸುವಂತೆ ಸಲಹೆ ನೀಡಿದರು. ಅಲ್ಲದೇ ತಾವು ಕೂಡಾ ತಮ್ಮ ಇನ್ವೆಸ್ಟ್‍ಮೆಂಟ್ ಬ್ಯಾಂಕಿಂಗ್ ನೌಕರಿಯನ್ನು ತೊರೆದು  ತಮಗೆ ಇಷ್ಟವಿದ್ದ ಬರವಣಿಗೆಯ ಕ್ಷೇತ್ರವನ್ನು ಆಯ್ದುಕೊಂಡ ನಿದರ್ಶನವನ್ನು ನೀಡಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಚೇತನ್ ಭಗತ್‍ರವರು ತಾವು ಈ ಬಾರಿಯೂ ಕೆರಿಯರ್ ಉತ್ಸವವದಲ್ಲಿ ಭಾಗವಹಿಸಬೇಕೆಂಬ ಹಂಬಲವನ್ನು ಹೊಂದಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳಿಗೆ ಅವರು ಪ್ರೀತಿಸುವ ಕ್ಷೇತ್ರವನ್ನು ಆಯ್ದುಕೊಳ್ಳಿ ಎಂಬ ಸಂದೇಶವನ್ನು ನೀಡಲು ಸಾಧ್ಯವಾದ ಬಗ್ಗೆ ಸಂತಸ ವ್ಯಕ್ತಪಡಿಸಿದರು.  

“ಕೆರಿಯರ್ ಉತ್ಸವ್ ತಂಡದೊಂದಿಗೆ ಮತ್ತೆ ಕೆಲಸ ಮಾಡಿರುವುದಕ್ಕೆ ಬಹಳ ಸಂತೋಷವಾಗಿದೆ. ಯುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವುದು ಯಾವಾಗಲೂ ಬಹಳ ಖುಷಿಯ ವಿಚಾರ. ಬಹಳ ಮುಂಚಿತವಾಗಿ ಅವರಿಗೆ ಲಭ್ಯವಿರುವ ಸಾವಿರಾರು ಅವಕಾಶಗಳ ಬಗ್ಗೆ ತಿಳಿಸಿಕೊಡುವ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವಿರುವ ಬೆಂಗಳೂರಿನ ವಿದ್ಯಾರ್ಥಿಗಳು ಬಹಳ ಅದೃಷ್ಟವಂತರು,” ಎಂದ ಲೇಖಕ ಚೇತನ್ ಭಗತ್‍ರವರು ವಿದ್ಯಾರ್ಥಿಗಳನ್ನುದ್ದೇಶಿಸಿ “ಸಾಧಕನಾಗುವುದು ಹೇಗೆ?” ಎಂಬ ಬಗ್ಗೆಯೂ ಮಾತನಾಡಿದರು.

ಕಾರ್ಯಕ್ರಮದ ಕುರಿತು ಮಾತನಾಡಿದ, ಕೆರಿಯರ್ ಉತ್ಸವ್, 2016 ರ ಸಂಸ್ಥಾಪಕರು ಮತ್ತು ಸಿಇಒ ಶ್ರೀ ಶ್ರೀಪಾಲ್ ಜೈನ್‍ರವರು,  “ನಮಗೆ ಬಹಳ ಹಮ್ಮೆಯೆನಿಸುತ್ತಿದೆ. ಇದು ಕೆರಿಯರ್ ಉತ್ಸವದ ನಾಲ್ಕನೇ ಆವೃತ್ತಿಯಾಗಿದ್ದು, ನಮಗೆ ದೊರಕಿದ ಪ್ರತಿಕ್ರಿಯೆಯು ಈ ಬಾರಿಯೂ ನಮ್ಮನ್ನು ಚಕಿತಗೊಳಿಸಿದೆ. ಈ ಬಾರಿಯ ಕೆರಿಯರ್ ಉತ್ಸವದಲ್ಲಿ ಸುಮಾರು 5000ಕ್ಕೂ ಹೆಚ್ಚು ಜನರು ಭಾಗವಹಿಸುವ ಮೂಲಕ ನಮ್ಮ ಈ ಮುಂಚಿನ ದಾಖಲೆಯೇ ಮುರಿದಿದೆ. ಕಳೆದ ಆವೃತ್ತಿಗಳಲ್ಲಿ ನಮಗೆ ದೊರಕಿದ ಪ್ರತಿಕ್ರಿಯೆಗಳ ಸಹಾಯದಿಂದ ಈ ಬಾರಿಯ ಉತ್ಸವವನ್ನು ಇನ್ನಷ್ಟು ದೊಡ್ಡದಾಗಿ, ಚೆನ್ನಾಗಿ ಆಯೋಜಿಸುವುದು ಸಾಧ್ಯವಾಗಿದೆ. ಏನನ್ನಾದರೂ ಸಾಧಿಸುವ ಹಂಬಲವನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ಪಡೆದುಕೊಳ್ಳಲು ಬೇಕಾದ ಸೂಕ್ತ ವೇದಿಕೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಬಾರಿಯ ಕೆರಿಯರ್ ಉತ್ಸವವನ್ನು ಆಯೋಜಿಸಲಾಗಿತ್ತು,” ಎಂದರು.

 “ಈ ಕೆರಿಯರ್ ಉತ್ಸವ್‍ನ ಮುಖ್ಯ ಉದ್ದೇಶವು, ವಿದ್ಯಾರ್ಥಿಗಳು ಸೂಕ್ತ ಮಾಹಿತಿಯಿಲ್ಲದ ಪಾಲಕರು ಅಥವಾ ಸಹಪಾಠಿಗಳ ಒತ್ತಡದಿಂದ ತಮಗೆ ಸೂಕ್ತವಲ್ಲದ ಕ್ಷೇತ್ರವನ್ನು ಆಯ್ದುಕೊಳ್ಳುವುದನ್ನು ತಪ್ಪಿಸಿ ಅವರ ಆಸೆಯ ಕ್ಷೇತ್ರವನ್ನು ಆಯ್ದುಕೊಳ್ಳುವುದಕ್ಕೆ ಸಹಾಯ ಮಾಡುವುದಾಗಿತ್ತು.  ಮತ್ತು ಈ ಬಾರಿ ನಮ್ಮ ಈ ಕಾರ್ಯದಲ್ಲಿ ಇನ್ನಷ್ಟು ಹೆಚ್ಚಿನ ಸಂಸ್ಥೆಗಳು  ಮತ್ತು ಬ್ರಾಂಡ್‍ಗಳು ನಮ್ಮೊಂದಿಗೆ ಕೈಜೋಡಿಸಿವೆ,” ಎನ್ನುತ್ತಾರೆ ಸಿಎ ಶ್ರೀಪಾಲ್ ಜೈನ್.

ಈ ಬಾರಿಯ ಕೆರಿಯರ್ ಉತ್ಸವದ ಕೆಲವು ವೈಶಿಷ್ಟ್ಯಗಳು ಇಂತಿವೆ:
•    ಉತ್ತಮ ಸಾಧಕನಾಗುವುದು ಹೇಗೆ- ಚೇತನ್ ಭಗತ್‍ರಿಂದ ಸ್ಪೂರ್ತಿದಾಯಕ ಮಾತು, ಐಐಟಿ ಮತ್ತು ಎಮ್‍ಬಿಎದಿಂದ ಆರಂಭವಾಗಿ ಯಶಸ್ವಿ ಲೇಖಕ ಮತ್ತು ಉದ್ಯಮಿಯಾಗಿ ಅಂತ್ಯಗೊಂಡ ಇವರ ಪ್ರಯಾಣವೇ ಸ್ಪೂರ್ತಿದಾಯಕ
•    ಸಿಎ ಶ್ರೀಪಾಲ್ ಜೈನ್ ಅವರ “ಇಸ್ ಇಟ್ ಮೈ ಕಪ್ ಆಫ್ ಟೀ?? ಪುಸ್ತಕ ಬಿಡುಗಡೆ
•    ಎಂಜಿನಿಯರಿಂಗ್ ಮತ್ತು ಮೆಡಿಕಲ್ ಪ್ರವೇಶ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿಯೇ  ಅತಿದೊಡ್ಡ ಮತ್ತು ವಿಶ್ವಸನೀಯ ತರಬೇತಿ ಕೇಂದ್ರಗಳಾಗಿರುವ ಅಲೆನ್ ಕೆರಿಯರ್ ಇನ್ಸ್ಟಿಟ್ಯೂಟ್‍ನಿಂದ ಮೊಕ್ ಸಿಇಟಿ ಮತ್ತು ನೀಟ್ ಪರೀಕ್ಷೆಗಳನ್ನು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗಾಗಿ ನಡೆಸಲಾಗುತ್ತದೆ. ವಾಣಿಜ್ಯ ಶಿಕ್ಷಣದಲ್ಲಿ ಹೆಸರು ಮಾತಿನ ಸಂಸ್ಥೆಯಾಗಿರುವ ಕೆ2 ಲರ್ನಿಂಗ್‍ರವರಿಂದ ಮೊಕ್ ಸಿಎ-ಸಿಪಿಟಿ ಪರೀಕ್ಷೆಗಳು ಮತ್ತು, “ಸಿಎ/ಸಿಎಸ್ ನನಗೆ ಹೊಂದುತ್ತದೆಯೇ” ಎಂಬ ಬಗ್ಗೆ ವಿವರ ನೀಡಿದರು.
•    ವಿದ್ಯಾರ್ಥಿಗಳಿಗೆ ಹೆಸರಾಂತ ಸಂಸ್ಥೆಗಳು ಉಚಿತ ಕೆರಿಯರ್ ಅಸೆಸ್‍ಮೆಂಟ್ ಪರೀಕ್ಷೆಗಳನ್ನು ನಡೆಸಿ ಅವರ ಫಲಿತಾಂಶದ ಆಧಾರದ ಮೇಲೆ ವಿವರವಾದ ವರದಿ ಮತ್ತು ಕೆರಿಯರ್ ಕುರಿತ ಆಪ್ತಸಮಾಲೋಚನೆಯನ್ನು ಕೈಗೊಳ್ಳಲಿವೆ. ಮೊಕ್ ಟೆಸ್ಟ್‍ಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಲಾಗುವುದು. ವಿದ್ಯಾರ್ಥಿಗಳಿಗೆ ಹಲವಾರು ಶಿಷ್ಯ ವೇತನದ ಲಭ್ಯವಿದೆ.
•    ಹೆಸರಾಂತ ವಾಗ್ಮಿ ದೀಪಕ್ ಶಿಂಧೆಯವರಿಂದ “ಬೋರ್ಡ್ ಎಕ್ಸಾಮ್‍ಗಳಲ್ಲಿ ಹೆಚ್ಚು ಅಂಕ ಗಳಿಸುವುದು ಹೇಗೆ” ಎಂಬ ಬಗ್ಗೆ ಮಾಹಿತಿ ನೀಡಿದರು.
•    ಆಫ್ ಬೀಟ್ ಕೆರಿಯರ್, ವಿದೇಶದಲ್ಲಿ ಅಧ್ಯಯನ, ಸರ್ಕಾರಿ ವಲಯದಲ್ಲಿನ ಅವಕಾಶಗಳು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ನೂತನ ಅವಕಾಶಗಳು, ಆರ್ಕಿಟೆಕ್ಚರ್, ವೈದ್ಯಕೀಯ ಕ್ಷೇತ್ರಗಳಲ್ಲಿರುವ ರಚನಾತ್ಮಕ ಅವಕಾಶಗಳ ಬಗ್ಗೆ ಸೆಮಿನಾರ್ ಮತ್ತು ಕಾರ್ಯಾಗಾರಗಳು ನಡೆಯಲಿವೆ. ಚಿತ್ರ ನಿರ್ಮಾಣ, ಕೊಲಾಬೊರೇಟಿವ್ ಆರ್ಟ್, ಎಂಜಿನಿಯರಿಂಗ್, ನಿರ್ವಹಣಾ ಶಾಸ್ತ್ರದ ಅಧ್ಯಯನದಲ್ಲಿನ ಅವಕಾಶಗಳು, ವಾಣಿಜ್ಯ ಮತ್ತು ಫೈನಾನ್ಸ್ ಕುರಿತೂ ಸೆಮಿನಾರ್‍ಗಳು ನಡೆದವು.
•    ಕಾನೂನು ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳು ಮಾದ್ಯಮ ಮತ್ತು ಸಂವಹನಾ ಕ್ಷೇತ್ರ, ವೈಜ್ಞಾನಿಕ ಕ್ಷೇತ್ರದಲ್ಲಿ ವಿನ್ಯಾಸ, ಕಾಮರ್ಸ್ ಮತ್ತು ಆಟ್ರ್ಸ್, ಔಷಧ ವಿಜ್ಞಾನ, ಆರೈಕೆ ಶಾಸ್ತ್ರಗಳಲ್ಲಿಯೂ ಕಾರ್ಯಾಗಾರ ಮತ್ತು ಸೆಮಿನಾರ್‍ಗಳು ನಡೆಯಲಿವೆ. ಶಿಕ್ಷಣ ಸಾಲದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ಸಲುವಾಗಿಯೂ ಸೆಮಿನಾರನ್ನು ಆಯೋಜಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT