ರಾಜ್ಯ

8 ತಿಂಗಳು ಕಳೆದರೂ ಪತ್ತೆಯಾಗಿಲ್ಲ ಗ್ರಾಮೀಣಾಭಿವೃದ್ಧಿ ಇಲಾಖೆಯ 8 ಕಡತಗಳು

Shilpa D

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನಾಪತ್ತೆಯಾಗಿದ್ದ 40 ಕಡತಗಳ ಪೈಕಿ  8 ಕಡತಗಳು ಇನ್ನೂ ಪತ್ತೆಯಾಗಿಲ್ಲ.

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಈ ವರ್ಷದ ಮೇ ತಿಂಗಳಲ್ಲಿ 40 ಕಡತಗಳು ನಾಪತ್ತೆಯಾಗಿದ್ದು, ಅದರಲ್ಲಿ 32 ಸಿಕ್ಕಿದ್ದವು. 8 ತಿಂಗಳು ಕಳೆದರು ಉಳಿದ 8 ಕಡತಗಳು ಮಾತ್ರ ಇನ್ನೂ ಪತ್ತೆಯಾಗಿಲ್ಲ.

ಇಲಾಖೆಗೆ ಸಂಬಂಧಿಸಿದ ಕಡತಗಳು ನಾಪತ್ತೆಯಾಗಿರುವುದ ಬಗ್ಗೆ ತಿಳಿದ ಸಚಿವ ಎಚ್ . ಕೆ ಪಾಟೀಲ್,  ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಆದರೆ ಇದುವರೆಗೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ.

ಸಚಿವ ಎಚ್ ಕೆ ಪಾಟೀಲ್ ಈ ಸಂಬಂಧ ಪೊಲೀಸರಿಗೆ ದೂರು ದಾಖಲಿಸಿದ ದಿನ ರಾತ್ರೋ ರಾತ್ರಿ 32 ಫೈಲ್ ಗಳು ಪತ್ತೆಯಾಗಿದ್ದವು, ಆದರ ಇನ್ನುಳಿದ 8 ಪ್ರಮುಖ ಕಡತಗಳು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಕಡತ ನಾಪತ್ತೆ ಸಂಬಂಧ ಹಲವು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ.

ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಬ್ಬಂದಿ ವಿರುದ್ಧ ಕಸು ದಾಖಲಾಗಿದೆ. ತನಿಖೆ ಇನ್ನೂ ಮುಗಿದಿಲ್ಲ, ತನಿಖಾ ವರದಿಗಾಗಿ ಕಾಯುತ್ತಿರುವುದಾಗಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT