ಮೊಬೈಲ್ 
ರಾಜ್ಯ

ಸ್ಮಾರ್ಟ್ ಫೋನ್ ಆಸೆಗಾಗಿ ಫ್ಲಿಪ್‌ಕಾರ್ಟ್ ಡೆಲಿವೆರಿ ಬಾಯ್ ಕೊಂದ ಆರೋಪಿ ಸೆರೆ

ಸ್ಮಾರ್ಟ್ ಫೋನ್ ಆಸೆಗಾಗಿ ಯುವಕನೊಬ್ಬ ಫ್ಲಿಪ್‌ಕಾರ್ಟ್ ಸಂಸ್ಥೆಯಲ್ಲಿ ಡೆಲಿವೆರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ನಂಜುಂಡಸ್ವಾಮಿ ಅನ್ನುವರನ್ನು ಕೊಲೆ ಮಾಡಿ...

ಬೆಂಗಳೂರು: ಸ್ಮಾರ್ಟ್ ಫೋನ್ ಆಸೆಗಾಗಿ ಯುವಕನೊಬ್ಬ ಫ್ಲಿಪ್‌ಕಾರ್ಟ್ ಸಂಸ್ಥೆಯಲ್ಲಿ ಡೆಲಿವೆರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ನಂಜುಂಡಸ್ವಾಮಿ ಅನ್ನುವರನ್ನು ಕೊಲೆ ಮಾಡಿ ಇದೀಗ ಜೈಲು ಕಂಬಿ ಎಣಿಸುತ್ತಿದ್ದಾರೆ. 
ವಿಜಯನಗರ ಅಲಹಬಾದ್ ಬ್ಯಾಂಕ್ ಕಟ್ಟಡದಲ್ಲಿರುವ ಆಕ್ಷಿ ಜಿಮ್ ನ ಉಸ್ತುವಾರಿ ಕೆಲಸ ಮಾಡಿಕೊಂಡಿದ್ದ ಮೂಡಲಪಾಳ್ಯದ ವರುಣ್ ಕುಮಾರ್(22) ಕಳೆದ ಡಿಸೆಂಬರ್ 9ರಂದು ನಂಜುಂಡಸ್ವಾಮಿಯನ್ನು ಕೊಲೆ ಮಾಡಿ ಆತನ ಬಳಿಯಿದ್ದ ಮೊಬೈಲ್ ಮತ್ತು 10 ಸಾವಿರ ನಗದು ದೋಚಿ ಪರಾರಿಯಾಗಿದ್ದ. 
ವರುಣ್ ಕುಮಾರ್ ಪ್ಲಿಪ್ ಕಾರ್ಟ್ ನಲ್ಲಿ ರೆಡ್ ಮಿ ಮೊಬೈಲ್ ಬುಕ್ ಮಾಡಿದ್ದು ಅದನ್ನು ಡೆಲಿವೆರಿ ನೀಡಲು ಬಂದಿದ್ದಾಗ ನಂಜುಂಡಸ್ವಾಮಿಯನ್ನು ಉಸಿರು ಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ.
ಪ್ರಕರಣದ ತನಿಖೆ ಕೈಗೊಂಡಿದ್ದ ವಿಜಯನಗರ ಪೊಲೀಸರು ಆರೋಪಿ ವರುಣ್ ಕುಮಾರ್ ನನ್ನ ಬಂಧಿಸಿ ಆತನ ಬಳಿಯಿದ್ದ 10 ಸಾವಿರ ನಗದು ರೆಡ್ ಮೀ ಮೊಬೈಲ್ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಡಿಸಿಪಿ ಎಂಎನ್ ಅನುಚೇತ್ ತಿಳಿಸಿದ್ದರೆ. 
ಡಿಸೆಂಬರ್ 9ರ ರಾತ್ರಿ ನಂಜುಂಡಸ್ವಾಮಿ ಮನೆಗೆ ಬಾರದ ಹಿನ್ನೆಲೆ ಡಿ.10ರಂದು ಬ್ಯಾಟರಾಯನಪುರ ಠಾಣೆಗೆ ನಂಜುಂಡಸ್ವಾಮಿ ಪತ್ನಿ ದೂರು ನೀಡಿದ್ದರು. ಈ ದೂರಿನನ್ವಯ ಪೊಲೀಸರು ಡಿಸೆಂಬರ್ 11 ರಂದು ಸರಸ್ವತಿನಗರದ ಜಿಮ್ ಗೆ ತೆರಳಿದ್ದು ಅಂದು ರಜೆ ಇದ್ದಿದ್ದರಿಂದ ಜಿಮ್ ಮುಚ್ಚಲಾಗಿತ್ತು. ಈ ವೇಳೆ ಕಟ್ಟಡವನ್ನು ಪರಿಶೀಲನೆ ನಡೆಸುವಾಗ ಸೆಲ್ಲಾರ್ ನಲ್ಲಿ ನಂಜುಂಡಸ್ವಾಮಿ ಮೃತದೇಹ ಪತ್ತೆಯಾಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT