ಬೆಂಗಳೂರು: ರಾಜ್ಯದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಕೆಎಸ್ಆರ್'ಟಿಸಿಗೆ ಹಲವು ಪ್ರಶಸ್ತಿಗಳು ಲಭಿಸಿದ್ದು, ರಾಜಧಾನಿ ದೆಹಲಿಯಲ್ಲಿ ನಡೆದ 46ನೇ ಸ್ಕೋಟ್ ಶೃಂಗಸಭೆಯಲ್ಲಿ ವಿವಿಧ ಯೋಜನೆಗಳ ಕುರಿತು 19 ಪ್ರಶಸ್ತಿಗಳನ್ನು ತನ್ನತ್ತ ಬಾಚಿಕೊಂಡಿದೆ.
ಉತ್ತಮ ಸೇವೆ ಹಾಗೂ ಪ್ರಯಾಣಿಕ ಸ್ನೇಹಿ ವಿವಿಧ ಯೋಜನೆಗಳಿಂದ ಕೆಎಸ್ಆರ್ ಟಿಸಿ ಈ ವರೆಗೂ 150 ಪ್ರಶಸ್ತಿ ಪಡೆದುಕೊಂಡಿದ್ದು, ಈ ಮೂಲಕ ದೇಶದ ಇತರೆ ರಾಜ್ಯಗಳಿಗಿಂತ ರಾಜ್ಯದ ಸಾರಿಗೆ ಸಂಸ್ಥೆ ಅತೀ ಹೆಚ್ಚು ಪ್ರಶಸ್ತಿ ಪಡೆದಿರುವ ರಾಜ್ಯದ ಸಾರಿಗೆ ಸಂಸ್ಥೆಯಾಗಿ ಹೊರಹೊಮ್ಮಿದೆ.
ದೆಹಲಿಯಲ್ಲಿ ಅದ್ಧೂರಿಯಾಗಿ ನಡೆದ ಟ್ರಾನ್ಸ್ ಪೋರ್ಟ್ ಮೊಬಿಲಿಟಿ ಕುರಿತ 46ನೇ ಸ್ಕೋಟ್ ಶೃಂಗ ಸಭೆಯಲ್ಲಿ ರಾಜ್ಯ ಕೆಎಸ್ ಆರ್ ಟಿಸಿಗೆ 19 ಪ್ರಶಸ್ತಿಗಳು ಲಂಭಿಸಿವೆ. ಡಬ್ಲ್ಯೂಎಪಿಪಿಎ ಕಾರ್ಯನಿರತ ಸ್ಥಳದಲ್ಲಿ ಮದ್ಯಪಾನ ಸೇವನೆ ತಡೆಗಟ್ಟುವಿಕೆ ಕಾರ್ಯಕ್ರಮ ಮತ್ತು ಚಟುವಟಿಕೆ, ಪ್ರಕೃತಿ ಮತ್ತು ಬಯೋ ಬಸ್, ಇಂಟೆಲಿಜೆಟ್ ಟ್ರಾನ್ಸ್ ಪೋರ್ಟ್ ಸಿಸ್ಟಮ್ ಜೊತೆಗೆ ಮೊಬೈಲ್ ಆ್ಯಪ್ ಮತ್ತು ಮಧ್ಯಮ ಹಾಗೂ ಸಣ್ಣ ನಗರಗಳಿಗೆ ಬಸ್ ಸೇವೆ ಸೇರಿ 4 ಯೋಜನೆಗಳಿಗೆ ಕೆಎಸ್ಆರ್ ಟಿಸಿಗೆ ಪ್ರಶಸ್ತಿಗಳು ಲಭಿಸಿದೆ.
ನವದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲು ನಿವೃತ್ಥ ಮಾಜಿ ಕಾರ್ಯದರ್ಶಿ ಡಾ.ಎಂ. ರಾಮಚಂದ್ರನ್ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಆನಂದ್ ಕುಮಾರ್ ಅವರು ಪ್ರಶಸ್ತಿ ಪ್ರಧಾನ ಮಾಡಿದರು.