ರಾಜ್ಯ

ಮೌಢ್ಯ ತೊರೆಯುವವರೆಗೂ ಸಮಾಜ ಅಭಿವೃಧ್ದಿಯಾಗದು: ಸಿದ್ದರಾಮಯ್ಯ

Shilpa D

ಬೆಂಗಳೂರು: ಜನರು ತಮ್ಮ ಮೌಢ್ಯಾಚರಣೆಯನ್ನು ನಿಲ್ಲಿಸದ ಹೊರತು ಸಮಾಜ ಅಭಿವೃದ್ಧಿಗೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜನರನ್ನು ಶೋಷಣೆ ಮಾಡುವ ಉದ್ದೇಶದಿಂದ ಪಟ್ಟಭದ್ರ ಹಿತಾಸಕ್ತಿಗಳು ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ರೂಪಿಸುವುದನ್ನು ವಿರೋಧಿಸುತ್ತಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ಕ್ರೈಸ್ಟ್‌ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ನಡೆದ ಅಕಾಡೆಮಿಯ 9ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಜನ ಶನಿ ಕಾಟ, ಗುರು ಬಲ ಎಂಬ ಮೌಢ್ಯದ ಆಚರಣೆ ಮಾಡಬಾರದು. ಶನಿ, ಗುರು ಗ್ರಹಗಳಲ್ಲಿರುವುದು ಬೂದಿ ಮಾತ್ರ, ಅವುಗಳನ್ನು ಪೂಜೆ ಮಾಡುವುದನ್ನು ನಿಲ್ಲಿಸಬೇಕು ಎಂದು ಸಿಎಂ ಹೇಳಿದ್ದಾರೆ.

ಕೆಲ ವಿದ್ಯುನ್ಮಾನ ಸುದ್ದಿ ವಾಹಿನಿಗಳು ಬೆಳಿಗ್ಗೆ ಪ್ರಸಾರಿಸುವ ಜ್ಯೋತಿಷ್ಯ ಕಾರ್ಯಕ್ರಮ, ನೋಡಿದ ಜನ ಅದೃಷ್ಟದ ಹರಳಿನ ಉಂಗುರ ಧರಿಸಿದರೇ ಒಳ್ಳೆಯದಾಗುತ್ತದೆ ಎಂಬು ನಂಬುತ್ತಾರೆ, ಇಂಥ ಮೌಢ್ಯಗಳಿಗೆ ಉತ್ತೇಜನ ನೀಡುವುದನ್ನು ನಿಲ್ಲಿಸಬೇಕು ಎಂದು ಸಿಎಂ ಹೇಳಿದ್ದಾರೆ.

ಅಕಾಡೆಮಿ ಅಧ್ಯಕ್ಷ ಪ್ರೊ. ಯು.ಆರ್‌. ರಾವ್‌ ಮಾತನಾಡಿ, ‘ಜೋತಿಷ್ಯ ಕಾರ್ಯಕ್ರಮ, ಮಂತ್ರ–ಯಂತ್ರಗಳ ಮಾರಾಟದ ಜಾಹೀರಾತುಗಳಿಂದ ಟಿ.ವಿ. ವಾಹಿನಿಗಳು ಮೂಢನಂಬಿಕೆ ಬಿತ್ತುತ್ತಿವೆ. ಅದರ ಬದಲಾಗಿ ದಿನಕ್ಕೆ 2 ಗಂಟೆ ಶೈಕ್ಷಣಿಕ ಕಾರ್ಯಕ್ರಮ ಪ್ರಸಾರ ಮಾಡಿ, ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು’ ಎಂದು ಒತ್ತಾಯಿಸಿದರು.

SCROLL FOR NEXT