ಶೂ ಹಾಕಿಸಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ 
ರಾಜ್ಯ

ಮೈಸೂರು: ಆಪ್ತ ಸಹಾಯಕನ ಕೈಯ್ಯಿಂದ ಶೂ ಹಾಕಿಸಿಕೊಂಡ ಸಿಎಂ ಸಿದ್ದರಾಮಯ್ಯ

ಎಲ್ಲರೂ ಸಮಾನರು ಎಂದು ಸದಾ ಹೇಳುವ ಸಮಾಜವಾದಿ ಸಿದ್ದರಾಮಯ್ಯ ತಮ್ಮ ಆಪ್ತ ಸಹಾಯಕನ ಕೈಯ್ಯಿಂದ ಶೂ ಹಾಕಿಸಿಕೊಂಡಿರುವುದು ಎಲ್ಲೆಡೆ ತೀವ್ರ ...

ಮೈಸೂರು: ಎಲ್ಲರೂ ಸಮಾನರು ಎಂದು ಸದಾ ಹೇಳುವ ಸಮಾಜವಾದಿ ಸಿದ್ದರಾಮಯ್ಯ ತಮ್ಮ ಆಪ್ತ ಸಹಾಯಕನ ಕೈಯ್ಯಿಂದ ಶೂ ಹಾಕಿಸಿಕೊಂಡಿರುವುದು ಎಲ್ಲೆಡೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಮೈಸೂರಿನಲ್ಲಿ ಹಿರಿಯ ನಟ ಚೇತನ್‌ ರಾಮ್‌ ರಾವ್‌ ನಿಧನದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮೃತರ ಅಂತಿಮ ದರ್ಶನ ಪಡೆಯಲು ರಾಮ್‌ರಾವ್‌ ಅವರ ಮನೆಗೆ ತೆರಳಿದ್ದರು.ರಾಮ್‌ರಾವ್‌ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮನೆಯಿಂದ ಹೊರಬಂದ ಸಿದ್ದರಾಮಯ್ಯ, ಹೊರಗೆ ಬಿಟ್ಟಿದ್ದ ಶೂ ಅನ್ನು ತಮ್ಮ ಆಪ್ತ ಸಹಾಯಕ ಕುಮಾರ್‌ ಅವರಿಂದ ಸಾರ್ವಜನಿಕರ ಎದುರಲ್ಲೇ ಹಾಕಿಸಿಕೊಂಡರು. ಆತ ಎಲ್ಲರ ಎದುರು ಶೂ ಹಾಕುತ್ತಿದ್ದರು ಸಿಎಂ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನೆ ನಿಂತಿದ್ದರು.

ಸಿಎಂ ಯಾವತ್ತೂ ಈ ರೀತಿ ಮಾಡಿರಲಿಲ್ಲ, ಆದರೆ ಸಾರ್ವಜನಿಕವಾಗಿ ಸಿಎಂ ಶೂ ಹಾಕಿಸಿಕೊಂಡಿದ್ದು ಸರಿಯಾಗಿ ಕಾಣಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ದುಬಾರಿ ಬೆಲೆಯ ಹ್ಯೂಬ್ಲಾಟ್ ವಾಚ್ ಪ್ರಕರಣದ ನಂತರ ಸಿಎಂ ಸಿದ್ದರಾಮಯ್ಯ ಅವರ ಸಮಾಜವಾದದ ಮತ್ತೊಂದು ಮುಖ ಅನಾವರಣಗೊಂಡಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಇನ್ನೂ  ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಕಚೇರಿ, ಸಿದ್ದರಾಮಯ್ಯ ಅವರಿಗೆ ಶೂ ಹಾಕಿದ್ದು, ಸರ್ಕಾರಿ ಅಧಿಕಾರಿ ಅಲ್ಲ, ಸಿದ್ದರಾಮಯ್ಯ ಅವರ ಸಂಬಂಧಿ ಕುಮಾರ್ ಎಂಬುವರು ಶೂ ಹಾಕಿದ್ದು ಎಂದು ಸ್ಪಷ್ಟನೆ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಹಸಸಿಂಹ, ಏಜೆಂಟ್ ಅಮರ್ ಚಿತ್ರ ಖ್ಯಾತಿಯ ನಿರ್ದೇಶಕ ಜೋ ಸೈಮನ್ ಹೃದಯಾಘಾತದಿಂದ ನಿಧನ

ಹೊಸ PMO ಕಚೇರಿ 'ಸೇವಾ ತೀರ್ಥ' ಕಟ್ಟಡಕ್ಕೆ ಪ್ರಧಾನಿ ಮೋದಿ ಸ್ಥಳಾಂತರ: ಮೊದಲ ದಿನವೇ ಹಲವು ಪ್ರಮುಖ ನಿರ್ಧಾರ!

ಸೆಂಟ್ರಲ್ ಏಜೆನ್ಸಿಗಳ ಒತ್ತಡದಿಂದ NCP ತೊರೆದಿದ್ದ ಅಜಿತ್ ಪವಾರ್, ಮತ್ತೆ ಎರಡು ಬಣಗಳ ವಿಲೀನ ಬಯಸಿದ್ದರು- NCP SP ನಾಯಕ

ಪ್ರೇಮಿಗಳ ದಿನಾಚರಣೆಗೆ ಕ್ಷಣಗಣನೆ: ಹಾರ್ದಿಕ್ ಪಾಂಡ್ಯಗೆ ಮಹಿಕಾ ಕೊಟ್ಟ 'ಸ್ಪೆಷಲ್ ಗಿಫ್ಟ್' ಏನು ಗೊತ್ತಾ? Video

ವಿಜಯ್ ಗೆ ಜನರಿಗೆ ಸಹಾಯ ಮಾಡುವ ಉದ್ದೇಶ ಇಲ್ಲ: ಸಿಂಪಲ್ ಆಗಿ ಸಿಎಂ ಆಗುವ ಬಯಕೆ- ಡಿಎಂಕೆ ತಿರುಗೇಟು

SCROLL FOR NEXT