ಬೆಂಗಳೂರು: ಮಹಿಳೆಯನ್ನು ಅತ್ಯಾಚಾರವೆಸಗಿದ ಆರೋಪದ ಮೇಲೆ ಕೇಬಲ್ ಆಪರೇಟರನ್ನು ಕಾಟನ್ ಪೇಟೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮುನಿರೆಡ್ಡಿ ಅಲಿಯಾಸ್ ಮಹೇಶ್(27) ಬಂಧಿತ ಆರೋಪಿ. ಒಂದು ವಾರದ ಹಿಂದೆ ಮಹಿಳೆ ಮೇಲೆ ಕೇಬಲ್ ಆಪರೇಟರ್ ಅತ್ಯಾಚಾರವೆಸಗಿದ್ದನು.
ಕೇಬಲ್ ದುರಸ್ಥಿಗೆ ಬಗ್ಗೆ ಎರಡು ಬಾರಿ ದೂರು ನೀಡಿದ ಹಿನ್ನಲೆಯಲ್ಲಿ ಅದನ್ನು ಸರಿ ಪಡಿಸಲೆಂದು ಆರೋಪಿ ಮಹೇಶ್ ಮಹಿಳೆಯ ಮನೆಗೆ ಬಂದಿದ್ದನು. ಆಗ ಮನೆಯಲ್ಲಿ ಮಹಿಳೆ ಒಬ್ಬಳೇ ಇರುತ್ತಾಳೆ ಎಂಬುದನ್ನು ಖಚಿತ ಪಡಿಸಿಕೊಂಡ ಮಹೇಶ್, ಮತ್ತೊಮ್ಮೆ ಆಂಟೇನಾ ಸರಿ ಪಡಿಸುವ ನೆಪ ಹೇಳಿ ಮನೆಗೆ ಬಂದು ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ.
ಮಹಿಳೆ ಈ ವಿಷಯವನ್ನು ಕುಟುಂಬ ಸದಸ್ಯರಿಗೆ ತಿಳಿಸಿದ್ದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.