ರಾಜ್ಯ

ಸಿಗರೇಟ್ ಪ್ಯಾಕ್ ಮೇಲೆ ಎಚ್ಚರಿಕೆ ಚಿತ್ರ: ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್

Mainashree
ಬೆಂಗಳೂರು: ಸಿಗರೇಟ್ ಹಾಗೂ ಬೀಡಿ ಎರಡು ಬದಿಯಲ್ಲಿ ಶೇ.85 ಎಚ್ಚರಿಕೆ ಸಂದೇಶ ಪ್ರಕಟಿಸುವುದಕ್ಕೆ ಹೇರಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ. 
2014 ಅಕ್ಟೋಬರ್ 15ರಂದು ಕೇಂದ್ರ ಸರ್ಕಾರ ಸಿಗರೇಟ್ ಮತ್ತು ಬೀಡಿ ಪ್ಯಾಕ್ ಮೇಲೆ ಎರಡೂ ಬದಿ ಶೇ.85 ಚಿತ್ರ ಸಹಿತ ಎಚ್ಚರಿಕೆ ಸಂದೇಶ ಪ್ರಕಟಿಸಲು ಆದೇಶಿಸಿತ್ತು. ಆದರೆ ಕೇಂದ್ರ ಸರ್ಕಾರ ಆದೇಶಕ್ಕೆ ಡಿಸೆಬಂರ್ 4ರಂದು ಮಧ್ಯಂತರ ತಡೆಯಾಜ್ಞೆ ನೀಡಲಾಗಿತ್ತು. ಮಧ್ಯಂತರ ಆದೇಶ ತೆರವಿಗೆ ಕೇಂದ್ರ ಸರ್ಕಾರವು ಫೆಬ್ರವರಿಯಲ್ಲಿ ಅರ್ಜಿ ಸಲ್ಲಿಸಿತ್ತು. 
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಸಿಗರೇಟ್- ಬೀಡಿ ಪ್ಯಾಕ್ ಮೇಲೆ ಶೆ.85ರಷ್ಟು ಎಚ್ಚರಿಕೆ ಸಂದೇಶ ಪ್ರಕಟಣೆಗೆ ಹೇರಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶ ಹೊರಡಿಸಿದೆ.
ಪ್ಯಾಕ್ ಮೇಲೆ ಶೇ.85ರಷ್ಟು ಎಚ್ಚರಿಕೆ ಸಂದೇಶ ಪ್ರಕಟಿಸುವುದರಿಂದ ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ ಎಂದು ಉತ್ಪಾದಕರ ವಾದವಾಗಿತ್ತು.
ಆದರೆ ಕೇಂದ್ರ ಸರ್ಕಾರ, ವಿಶ್ವದಲ್ಲೇ ಅತಿ ಹೆಚ್ಚು ತಂಬಾಕು ಸೇವಿಸುವ ದೇಶದಲ್ಲಿ ಭಾರತವೂ ಒಂದಾಗಿದೆ. ಪ್ರತಿ ವರ್ಷ ಕ್ಯಾನ್ಸರ್ ಪೀಡಿತರು ಹೆಚ್ಚಾಗುತ್ತಿದ್ದು, ಅನುದಾನ ನೀಡುವುದೇ ಸರ್ಕಾರಕ್ಕೆ ಸವಾಲಾಗಿದೆ. ಸಿಗರೇಟ್ ಬೀಡಿಯಲ್ಲಿ 69 ರಾಸಾಯನಿಕಗಳಿವೆ. ಇದರಿಂದ ಕ್ಯಾನ್ಸರ್ ರೋಗಗಳು ಬರುತ್ತಿವೆ. ಹಾಗಾಗಿ, ಪ್ಯಾಕ್ ಮೇಲೆ ಶೇ.85ರಷ್ಟು ಎಚ್ಚರಿಕೆ ಚಿತ್ರ ಸಂದೇಶ ಅನಿವಾರ್ಯ ಎಂದು ಕೇಂದ್ರ ವಾದಿಸಿತ್ತು. 
ವಾದ ಪ್ರತಿವಾದ ಆಲಿಸಿದ ಹೈಕೋರ್ಟ್, ಮಧ್ಯಂತರ ತಡೆಯಾಜ್ಞೆಗೊಳಿಸಿ, ಈ ಮೂಲಕ ಸಿಗರೇಟ್ ಪ್ಯಾಕೇಟ್ ಗಳ ಎರಡು ಬದಿಯಲ್ಲಿ ಶೇ.85 ಚಿತ್ರಸಹಿತ ಎಚ್ಚರಿಕೆ ಸಂದೇಶ ಪ್ರಕಟಿಸುವುದಕ್ಕೆ ಹೈಕೋರ್ಟ್ ಹಸಿರು ನಿಶಾನೆ ತೋರಿದೆ.
SCROLL FOR NEXT