ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆದ ಜನ ಮನ ಕಾರ್ಯಕ್ರಮದಲ್ಲಿ ಸಚಿವ ಕೆ.ಜೆ. ಜಾರ್ಜ್ 
ರಾಜ್ಯ

ವಸತಿ, ಉದ್ಯೋಗಕ್ಕಾಗಿ ಸಚಿವರ ಬಳಿ ಅಲ್ಪಸಂಖ್ಯಾತರ ಮನವಿ

ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಸರ್ಕಾರ ನಮಗೆ ಅಕ್ಕಿ ನೀಡುತ್ತಿದೆ. ಆದರೆ, ನಮಗೆ ಅನ್ನ ಮಾಡಿಕೊಳ್ಳಲು ಸ್ಥಳವಿಲ್ಲ. ತಮಗೆ ಉದ್ಯೋಗ ಹಾಗೂ ವಸತಿ ಸೌಲಭ್ಯವನ್ನು ಶೀಘ್ರದಲ್ಲಿ ಕಲ್ಪಿಸಿಕೊಡುವಂತೆ ಲೈಂಗಿಕ ಅಲ್ಪಸಂಖ್ಯಾತರು ಸಚಿವರ ಬಳಿ ಬುಧವಾರ ಮನವಿಯನ್ನು ಸಲ್ಲಿಸಿದ್ದಾರೆ...

ಬೆಂಗಳೂರು: ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಸರ್ಕಾರ ನಮಗೆ ಅಕ್ಕಿ ನೀಡುತ್ತಿದೆ. ಆದರೆ, ನಮಗೆ ಅನ್ನ ಮಾಡಿಕೊಳ್ಳಲು ಸ್ಥಳವಿಲ್ಲ. ತಮಗೆ ಉದ್ಯೋಗ ಹಾಗೂ ವಸತಿ ಸೌಲಭ್ಯವನ್ನು ಶೀಘ್ರದಲ್ಲಿ ಕಲ್ಪಿಸಿಕೊಡುವಂತೆ ಲೈಂಗಿಕ ಅಲ್ಪಸಂಖ್ಯಾತರು ಸಚಿವರ ಬಳಿ ಬುಧವಾರ ಮನವಿಯನ್ನು ಸಲ್ಲಿಸಿದ್ದಾರೆ.

ನಿನ್ನೆ ನಗರದ ಟೌನ್ ಹಾಲ್ ನಲ್ಲಿ ನಡೆದ ಜನ ಮನ ಕಾರ್ಯಕ್ರಮಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವರಾ ಕೆ.ಜೆ. ಜಾರ್ಜ್ ಅವರು ಆಗಮಿಸಿದ್ದರು. ಈ ವೇಳೆ ಸಚಿವರ ಬಳಿ ಲೈಂಗಿಕ ಅಲ್ಪಸಂಖ್ಯಾತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನೀವು ನಮಗೆ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಅಕ್ಕಿಯನ್ನು ನೀಡುತ್ತಿದ್ದೀರ. ಆದರೆ, ನಮಗೆ ಅನ್ನ ಮಾಡಿಕೊಳ್ಳಲು ಸ್ಥಳ ದೊರಕುತ್ತಿಲ್ಲ. ನಮಗೆ ಬಾಡಿಗೆಗೆ ಮನೆಗಳು ದೊರೆಯುತ್ತಿಲ್ಲ.

ನಾವು ಸ್ವಾವಲಂಬಿಯಾಗಿ ಬದಕಲು ಯೋಜನೆಗಳಿವೆ ಆದರೆ, ಹಸುಗಳನ್ನು ಖರೀದಿಸಲು ಸಕ್ರಿಯರಾದರೂ ಕೂಡ ನಮಗೆ ನೆಲೆಯೂರಲು ಆಶ್ರಯವಿಲ್ಲ. ಮೈತ್ರಿ ಯೋಜನೆಯಡಿಯಲ್ಲಿ ನಮಗೆ ಪ್ರತಿ ತಿಂಗಳು ರು.500 ಬರುತ್ತದೆ. ನಮಗೆ ಈ ಹಣ ಸಾಕಾಗುತ್ತಿಲ್ಲ. ನಮಗೆ ಬೇರಾವುದೇ ಆಯ್ಕೆ ಇಲ್ಲ. ಹೀಗಾಗಿ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಭಿಕ್ಷೆ ಬೇಡುತ್ತಿದ್ದೇವೆ. ನಮಗೆ ಮನೆ ಹಾಗೂ ಉದ್ಯೋಗದ ಅವಶ್ಯಕತೆ ಇದೆ ಎಂದು ಪ್ರಫುಲ್ಲಾ ಹೇಳಿಕೊಂಡಿದ್ದಾರೆ.

ನಂತರ ಮಾತನಾಡಿರುವ ಮತ್ತೊಬ್ಬರು ಅಲ್ಪಸಂಖ್ಯಾತರು, ಇಡೀ ಸಮಾಜ ನಮ್ಮನ್ನು ಕೀಳಾಗಿ ನೋಡುತ್ತಿದೆ. ಸಮಾಜದಲ್ಲಿ ಬದುಕು ನಡೆಸಲು ಸಾಕಷ್ಟು ನೋವಾಗುತ್ತಿದೆ. ನಮ್ಮಂತಹ ಎಷ್ಟೋ ಮಂದಿ ಬದುಕಲು ಸಾಧ್ಯವಾಗದೆ ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ನಂತರ ಈ ಎಲ್ಲಾ ಮನವಿಗಳ ಕುರಿತಂತೆ ಮಾತನಾಡಿದ ಜಾರ್ಜ್ ಅವರು, ಸರ್ಕಾರ ಈಗಾಗಲೇ 50 ಎಕರೆ ಜಾಗವನ್ನು ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಮೀಸಲಿರಿಸಿದೆ. ಇದಲ್ಲದೆ, ಅವಿವಾಹಿತ 40 ವರ್ಷದ ಮೇಲ್ಪಟ್ಟ ಮಹಿಳೆಯರಿಗೆ ಕೂಡ ಸರ್ಕಾರ ಭತ್ಯೆಯನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video