ಬೆಂಗಳೂರಲ್ಲಿ ಬೀಫ್ ತಿಂದ ಕೇರಳದ ವಿದ್ಯಾರ್ಥಿಗಳ ಮೇಲೆ ಸ್ಥಳೀಯರಿಂದ ಹಲ್ಲೆ
ಬೆಂಗಳೂರು ನಗರದ ಭೂಪಸಂದ್ರದಲ್ಲಿ ವಾಸಿಸುತ್ತಿರುವ ವೃಂದಾವನ್ ಕಾಲೇಜಿನ ವಿದ್ಯಾರ್ಥಿಗಳು ಬೀಫ್ ತಿಂದದ್ದಕ್ಕಾಗಿ ಅಲ್ಲಿನ ನಿವಾಸಿಗಳು ವಿದ್ಯಾರ್ಥಿಗಳ ಮೇಲೆ...
ಬೆಂಗಳೂರು: ಬೆಂಗಳೂರಿನ ಭೂಪಸಂದ್ರದಲ್ಲಿ ವಾಸಿಸುತ್ತಿರುವ ವೃಂದಾವನ್ ಕಾಲೇಜಿನ ವಿದ್ಯಾರ್ಥಿಗಳು ಬೀಫ್ ತಿಂದದ್ದಕ್ಕಾಗಿ ಅಲ್ಲಿನ ನಿವಾಸಿಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಕೇರಳ ಮೂಲದ ನಿಖಿಲ್, ಮೈಕಲ್ ಮೆರ್ವಿನ್, ಮುಹಮ್ಮದ್ ಹಾಶಿರ್ ಎಂಬ ವಿದ್ಯಾರ್ಥಿಗಳಿಗೆ ಸ್ಥಳೀಯರು ಥಳಿಸಿದ್ದಾರೆ.
ಈ ವಿದ್ಯಾರ್ಥಿಗಳು ವಾಸಿಸುತ್ತಿರುವ ಮನೆಯ ಬಳಿ ದೇವಸ್ಥಾನ ಇರುವುದರಿಂದ ಅಲ್ಲಿ ಬೀಫ್ ಭಕ್ಷಿಸುವಂತಿಲ್ಲ ಎಂದು ಈ ಹಿಂದೆಯೇ ಸ್ಥಳೀಯರು ಮುನ್ನೆಚ್ಚರಿಕೆ ನೀಡಿದ್ದರು. ಆದರೆ ಇದನ್ನು ಕಡೆಗಣಿಸಿ ಈ ವಿದ್ಯಾರ್ಥಿಗಳು ಬೀಫ್ ಕರಿ ಮಾಡಿದ್ದರು. ಇದನ್ನು ತಿಳಿದ ಸ್ಥಳೀಯರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೆರ್ವಿನ್ ಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಸು ದಾಖಲಿಸಿದ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.