ಬಿಬಿಎಂಪಿ ಕಾರ್ಪೊರೇಟರ್ ಗುರುಮೂರ್ತಿ ರೆಡ್ಡಿ ಹಾಗೂ ಹಲ್ಲೆಗೊಳಗಾದ ವ್ಯಕ್ತಿ 
ರಾಜ್ಯ

ಬೀದಿ ವ್ಯಾಪಾರಿ ಮೇಲೆ ಹಲ್ಲೆ ಮಾಡಿದ ಪಾಲಿಕೆ ಸದಸ್ಯ?

ಕುಡಿದ ಅಮಲಿನಲ್ಲಿದ್ದ ಬಿಬಿಎಂಪಿ ಕಾರ್ಪೊರೇಟರ್ ಗುರುಮೂರ್ತಿ ರೆಡ್ಡಿ ಅವರು ಬೀದಿ ವ್ಯಾಪಾರಿ ಮೇಲೆ ಹಲ್ಲೆ ಮಾಡಿರುವ ಘಟನೆಯೊಂದು ಹೆಚ್ಎಸ್ಆರ್ ಲೇಔಟ್ ನಲ್ಲಿ ಗುರುವಾರ...

ಬೆಂಗಳೂರು: ಕುಡಿದ ಅಮಲಿನಲ್ಲಿದ್ದ ಬಿಬಿಎಂಪಿ ಕಾರ್ಪೊರೇಟರ್ ಗುರುಮೂರ್ತಿ ರೆಡ್ಡಿ ಅವರು ಬೀದಿ ವ್ಯಾಪಾರಿ ಮೇಲೆ ಹಲ್ಲೆ ಮಾಡಿರುವ ಘಟನೆಯೊಂದು ಹೆಚ್ಎಸ್ಆರ್ ಲೇಔಟ್ ನಲ್ಲಿ ಗುರುವಾರ ನಡೆದಿರುವುದಾಗಿ ತಿಳಿದುಬಂದಿದೆ.

ಶಕ್ತಿ ಕುಮಾರ್ ಹಲ್ಲೆಗೊಳಗಾದ ವ್ಯಕ್ತಿ. ಹೆಚ್ಎಸ್ಆರ್ ಲೇಔಟ್ ನ 27ನೇ ಕ್ರಾಸ್ ನಲ್ಲಿ ಗಾಡಿಯಲ್ಲಿ ದೋಸೆ ಹೋಟೆಲ್ ವೊಂದನ್ನು ನಡೆಸುತ್ತಿದ್ದೇನೆ. ಗುರುವಾರ ಸಂಜೆ 7.30ರ ಸುಮಾರಿಗೆ ಗಾಡಿ ಬಳಿ ಬಂದ ರೆಡ್ಡಿ ಅವರು ವಾಹನವನ್ನು ಬೇರೆಡೆ ನಿಲ್ಲಿಸಿಕೊಳ್ಳುವಂತೆ ಗಲಾಟೆ ಮಾಡಿದರು. ಅಲ್ಲದೆ, ಗಾಡಿ ನಿಲ್ಲಿಸಲು ಹಣ ನೀಡುವಂತೆ ತಿಳಿಸಿದರು. ಇದಕ್ಕೆ ನಾನೇನೂ ಹೇಳಲಿಲ್ಲ.

ನಂತರ ಮತ್ತೆ ರಾತ್ರಿ 11 ಗಂಟೆಗೆ ಮದ್ಯ ಸೇವಿಸಿ ತಮ್ಮ ಸಹಚರರೊಂದಿಗೆ ಬಂದ ಅವರು, ಗಾಡಿ ತೆಗೆದಿಲ್ಲ ಎಂದು ಹೇಳಿ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಹಲ್ಲೆಗೊಳಗಾದ ಶಕ್ತಿ ಕುಮಾರ್ ಹೇಳಿಕೊಂಡಿದ್ದಾರೆ.

ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಗುರುಮೂರ್ತಿ ರೆಡ್ಡಿ ಅವರು, ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಗುಂಪೊಂದು ಶಕ್ತಿ ಎಂಬ ವ್ಯಕ್ತಿ ಮೇಲೆ ದಾಳಿ ಮಾಡುತ್ತಿರುವುದನ್ನು ನೋಡಿದ್ದೆ. ಈ ವೇಳೆ ಆತನಿಗೆ ಗುಂಪು ಥಳಿಸುತ್ತಿದ್ದರು. ಸ್ಥಳಕ್ಕೆ ಹೋದ ನಾನು ಯುವಕರಿಗೆ ಜಾಗ ಖಾಲಿ ಮಾಡುವಂತೆ ತಿಳಿಸಿ ಆತನನ್ನು ರಕ್ಷಿಸಿದ್ದೆ, ಅದರೆ, ಇದೀಗ  ನನ್ನ ವಿರುದ್ಧವೇ ಇಲ್ಲಸಲ್ಲದ ಆರೋಪ ಮಾಡಿ ದೂರು ದಾಖಲು ಮಾಡಲಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಹೆಚ್ಎಸ್ಆರ್ ಲೇ ಔಟ್ ಪೊಲೀಸರಿಗೆ ಸ್ಪಷ್ಟನೆ ನೀಡಿದ್ದೇನೆ. ನಾನು ಯಾವುದೇ ಹಣವನ್ನು ಕೇಳಿಲ್ಲ ಎಂದು ಹೇಳಿಕೊಂಡಿದ್ದಾರೆ.

ಸ್ಥಳೀಯರೊಬ್ಬರು ಮೊಬೈಲ್ ಫೋನಿನಲ್ಲಿ ಘಟನೆಯ ಸಂಪೂರ್ಣ ವಿಡಿಯೋ ಮಾಡಿದ್ದು, ಖಾಸಗಿ ಮಾಧ್ಯಮವೊಂದಕ್ಕೆ ಈ ವಿಡಿಯೋವನ್ನು ನೀಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಾಲಿಕೆ ಸದಸ್ಯನ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT